ಜೀವ ಭಯ ಉಂಟು ಮಾಡುತ್ತಿರುವ ಕೊರೋನ ಬೀದಿಬದಿಯ ವ್ಯಾಪಾರಿಗಳ ಜೀವನ ಅಸ್ತವ್ಯಸ್ತ

ಜಗಳೂರು.ಮೇ.೨; ತಮ್ಮ ಟೀ ಸ್ಟಾಲ್ ನವರು,  ಬಟ್ಟೆ ಅಂಗಡಿಗಳು ಬೀಡಾ ಸ್ಟಾಲ್. ತರಕಾರಿ. ಕೈಗಾಡಿ ಹಣ್ಣಿನ ವ್ಯಾಪಾರಿಗಳು ಸೇರಿದಂತೆ ಇತರೆ ಬೀದಿಬದಿಯಲ್ಲಿ ಅಲ್ಪಸ್ವಲ್ಪ ವ್ಯಾಪಾರ  ಮಾಡಿಕೊಂಡು ಅಂದಿನ ಬದುಕನ್ನು ಅಂದೆ ದುಡಿದು ಕಟ್ಟಿಕೊಳ್ಳುವಂತಹ ನೂರಾರು ಕುಟುಂಬಗಳು ಇಂದು ತುತ್ತು ಅನ್ನಕ್ಕೂ ಪರದಾಡುವಂತಹ ಪರಿಸ್ಥಿತಿ ಕೊರೊನಾದಿಂದ  ಎದುರಾಗುತ್ತಿದೆ .ಜಗಳೂರು ಪಟ್ಟಣದಲ್ಲಿ ತಾಲೂಕು ಕಚೇರಿ ತಾಲೂಕು ಪಂಚಾಯಿತಿ ಕಚೇರಿ ಪಟ್ಟಣ ಪಂಚಾಯಿತಿ ಮುಂಭಾಗ ಚಳ್ಳಕೆರೆ ಟೋಲ್ ರಸ್ತೆ ಬದಿ ಸೇರಿದಂತೆ  ಹಲವು ಜನಸಂದಣಿ ಸೇರುವಂತಹ ಸ್ಥಳಗಳಲ್ಲಿ ಟೀ ಶಾಪ್ ಹಾಕಿಕೊಂಡವರು, ಬಟ್ಟೆ ವ್ಯಾಪಾರ, ಚಪ್ಪಲಿ,  ಬೀಡಾ ಸ್ಟಾಲ್ ಟೀ ಸ್ಟಾಲ್ ಅಂಗಡಿಗಳನ್ನು ತೆರೆದಿದ್ದವರು  ದಿನನಿತ್ಯದ ಬದುಕಿನ ನಿರ್ವಹಣೆಗೆ ಹೆಣಗಾಡುತ್ತಿದ್ದಾರೆ

ಕೋರೋನದಂತಹ ಕಾಯಿಲೆ ಬಂದು
ಒಂದು ರೀತಿ ಜನರ ತಮ್ಮ ಪ್ರಾಣವನ್ನು ಕಳೆದುಕೊಳ್ಳುತ್ತಿದ್ದಾರೆ ಸಾಲ ಮಾಡಿಕೊಂಡು ಬಂಡವಾಳ ಹಾಕಿ ಜೀವನ ನಡೆಸುತ್ತಿದ್ದವರು ಇದರಿಂದ ಸಾಲ ತೀರಿಸದೆ ಇನ್ನು ಹೆಚ್ಚಿನ ಸಾಲ ಮಾಡುವಂತೆ ಆಗುತ್ತಿದೆ ಇದರಿಂದ ಜನರು ಮಾನಸಿಕವಾಗಿ ನೊಂದು ಕೊಳ್ಳುತ್ತಿದ್ದಾರೆ.  ಸಂತೆ ವಾರದ ಸಂತೆಗಳನ್ನು ನಿರ್ಬಂಧಿಸಲಾಗಿದೆ ಇದರ ಬದಲಿಗೆ ಬೆಳಿಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಎಲ್ಲಾ ಹಾಲಿನ ಅಂಗಡಿಗಳು ತಳ್ಳುವ ಗಾಡಿಯ ಮೂಲಕ ಹಣ್ಣು ತರಕಾರಿಗಳನ್ನು ದುಬಾರಿ ಬೆಲೆಗೆ ಮಾರಾಟ ಮಾಡದೆ ಮಾರುಕಟ್ಟೆ ಬೆಲೆಗೆ ಮಾರಾಟ ಮಾಡುವುದು ಹಾಗೂ ಕೋವಿಡ್ 19 ರ ನಿಯಮಗಳನ್ನು ಪಾಲಿಸುವುದರೊಂದಿಗೆ  ಅನುಮತಿಸಲಾಗಿದೆ ಎಪಿಎಂಸಿ ಮತ್ತು ದಿನಸಿ ಅಂಗಡಿಗಳನ್ನು ಬೆಳಿಗ್ಗೆ 6 ರಿಂದ 12:00 ವರೆಗೆ ಮಾತ್ರ ತೆರೆಯಲು ಅನುಮತಿ ಸಲಾಗಿದ್ದು ಇದರಿಂದ ಸಣ್ಣ ಪುಟ್ಟ ವ್ಯಾಪಾರಿಗಳಿಗೆ ತೊಂದರೆಯಾಗ ಬಹುದು ಎನ್ನುತ್ತಿದ್ದಾರೆ ಪ್ರಜ್ಞಾವಂತರು.

”  ದರ ಕುಸಿತ ಕರೋನಾ ಭೀತಿಯಿಂದ ಜನ ಚಿಕನ್ ಖರೀದಿಗೆ  ಮುಂದೆ ಬರುತ್ತಿಲ್ಲ ಮಾಲ್ ಹಾಕಿಸಿ ನಷ್ಟ ಮಾಡಿಕೊಳ್ಳಲು ಯಾರೂ ತಯಾರಿಲ್ಲ ಕೆಲಸ ಮಾಡೋ ಹುಡುಗರನ್ನು ಬರಿಗೈಯಲ್ಲಿ ವಾಪಸ್ ಕಳಿಸೋಕೆ ಯಾಗದೆ ಕೈಯಿಂದ ಹಣ ಕೊಟ್ಟು ಅವರನ್ನು ಉಳಿಸಿಕೊಳ್ಳುವಂತೆ ಆಗಿದೆ

ಎಂ.ಎಸ್ ನಜೀರ್ ಅಹ್ಮದ್.
        ಚಿಕನ್ ವ್ಯಾಪಾರಿ”


” ಕೊರೋನಾ ವೈರಸ್ ಬಿಸಿ ಯಾವಾಗ ಕಡಿಮೆಯಾಗುತ್ತೆ ವ್ಯಾಪಾರ-ವೈವಾಟು ಯಾವಾಗ ಚೇತರಿಸಿಕೊಳ್ಳುತ್ತಾದೇ ಎಂದು ತಲೆ ಮೇಲೆ ಕೈಹೊತ್ತು ಕುಳಿತುಕೊಳ್ಳುವ ಪರಿಸ್ಥಿತಿಯಿದೆ ಮಾಸಿಕ ಸಂಬಳ ಪಡೆಯುವವರು ಹೇಗೋ ಪರಿಸ್ಥಿತಿ ನಿಭಾಯಿಸುತ್ತಾರೆ ಆದರೆ ದೈನಂದಿನ ಕೂಲಿ ಕೆಲಸ ಮಾಡಿ ಬದುಕುವವರ ಗತಿ ಹೇಗೆ

ಮಂಜಮ್ಮ.
ಹಣ್ಣುಕಾಯಿ ವ್ಯಾಪಾರಿಗಳು


“ಖಾಸಗಿ ವ್ಯಕ್ತಿಗಳಿಂದ ಸಾಲ ಪಡೆದು ವ್ಯವಾರ ಮಾಡುತ್ತಿದ್ದೇವೆ ಆದರೆ ಕಳೆದ ಒಂದು ವಾರದಿಂದ ಗ್ರಾಹಕರಲ್ಲದೆ ಮಾರುಕಟ್ಟೆ ಬಿಕೋ ಎನ್ನುತ್ತಿದೆ ಸಾಲ ಕೊಟ್ಟವರು ಹಣ ಮರುಪಾವತಿಗೆ ನಮ್ಮ ಮೇಲೆ ಒತ್ತಡ ಹೇರದೆ ಸ್ವಲ್ಪ ಟೈಮ್ ಕೊಡಲಿ

ಜಯಣ್ಣ.
ತರಕಾರಿ ಅಂಗಡಿ
ವ್ಯಾಪಾರಿ ಗಳು