ಜೀವ ಬೆದರಿಕೆ: 5 ಸಾವಿರ ರೂ ದಂಡ

ಕಲಬುರಗಿ,ಜೂ 8: ಜಮೀನಿನಲ್ಲಿ ದನಗಳನ್ನು ಹೊಡೆದುಕೊಂಡು ಹೋಗುವಾಗ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಇಬ್ಬರು ಅಪರಾಧಿಗಳಿಗೆ 5 ಸಾವಿರ ರೂ ದಂಡ ವಿಧಿಸಿ ಚಿಂಚೋಳಿಯ ಜೆಎಂಎಫ್ ಸಿ ನ್ಯಾಯಾಲಯದ ಪ್ರಧಾನ ಸಿವಿಲ್ ನ್ಯಾಯಾಧೀಶ ದತ್ತಕುಮಾರ ಅವರು ಆದೇಶ ನೀಡಿದ್ದಾರೆ.
ಚಿಂಚೋಳಿ ತಾಲೂಕಿನ ಸುಂಠಾಣ ಗ್ರಾಮದ ನಿವಾಸಿಗಳಾದ ಇಸ್ಮಾಯಿಲ್ ಖಾನ್ ಹಾಗೂ ಚಿನ್ನುಮಿಯಾ ಪಕ್ಕದ ಜಮೀನಿನ ಬೀಜಾನಬಿ ಅವರಿಗೆ ಹೊಲದಲ್ಲಿ ದನಕರು ಹೊಡೆದುಕೊಂಡು ಹೋಗುವಾಗ ಕಲ್ಲು ಹಾಗೂ ಕಟ್ಟಿಗೆಯಿಂದ ಹೊಡೆದು ಗಂಭೀರವಾಗಿ ಗಾಯಗೊಳಿಸಿರುವದು ಸಾಬೀತಾಗಿದೆ.ಸರಕಾರದ ಪರವಾಗಿ ಸಹಾಯಕ ಸರಕಾರಿ ಅಭಿಯೋಜಕ ಶಾಂತಕುಮಾರ ಜಿ ಪಾಟೀಲ ಅವರು ವಾದ ಮಂಡಿಸಿದ್ದರು.