ಜೀವ ಜಲವನ್ನು ಮಿತವಾಗಿ ಬಳಸಿ ಕಲುಶಿತ ನೀರನ್ನು ಶುದ್ಧಿಕರಣಗೊಳಿಸಿ ಜಲವನ್ನು ರಕ್ಷಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ :ಪ್ರೊ. ಮೀಸೆ ಹೇಳಿಕೆ

ಕಲಬುರಗಿ:ಮಾ.25:ಗಾಳಿಯ ನಂತರ ಮನುಷ್ಯ, ಪ್ರಾಣಿ ಎಲ್ಲರ ಜೀವನಕ್ಕೆ ಕಡ್ಡಾಯವಾಗಿ ಬೇಕಾದದ್ದು ನೀರು ಭೂಮಿಯ ಮೇಲಿನ 97% ನೀರು ಸಮುದ್ರದಲ್ಲಿದೆ ಉಳಿದ 3% ನೀರಿನಲ್ಲಿ 2.7% ನೀರು ಮಂಜುಗಡ್ಡೆ ರೂಪದಲ್ಲಿದೆ. ಕೇವಲ 0.3% ನೀರು ಮಾತ್ರ ಕುಡಿಯಲು ಯೋಗ್ಯವಾಗಿದೆ. ಆದ್ದರಿಂದ ಇಂತಹ ಜೀವ ಜಲವನ್ನು ರಕ್ಷಿಸುವುದು ನಮ್ಮೆಲ್ಲರ ಕರ್ತವ್ಯ ಎಂದು ಪಿ.ಡಿ.ಎ. ಇಂಜನಿಯರಿಂಗ್ ಕಾಲೇಜಿನ ಸಿವಿಲ್ ಇಂಜನಿಯರಿಂಗ್ ವಿಭಾಗದ ಪರಿಸರ ತಂತ್ರಜ್ಞಾನದ ಸ್ನಾತಕೋತ್ತರ ಸಂಯೋಜಕರಾದ ಡಾ. ಶಶಿಕಾಂತ ಆರ್. ಮಿಸೆ ಯವರು ದಿ. ಇನ್‍ಸ್ಟಿಟ್ಯೂಶನ್ ಆಫ್ ಇಂಜನಿಯರ್ಸ್ ಕಲಬುರಗಿ ಸ್ಥಾನಿಕ ಕೇಂದ್ರ 24-03-2021 ರಂದು ಆಯೋಜಿಸಿದ ವಿಶ್ವ ಜಲ ದಿನಾಚರಣೆಯಲ್ಲಿ ಉಪನ್ಯಾಸ ನೀಡುತ್ತಾ ಮಾತನಾಡಿದರು. ನೀರಿನ ಅಭಾವವನ್ನು ತಗ್ಗಿಸಲು ಕಲುಷಿತ ನೀರನ್ನು ಶುದ್ಧಿಕರಣಗೊಳಿಸಿ ಅದೇ ನೀರನ್ನು ಪುನಃ ಉಪಯೋಗ ಮಾಡಬೇಕು, ಮಳೆ ನೀರನ್ನು ಸಂಗ್ರಹಿಸಿ ನೀರಿನ ಮಟ್ಟವನ್ನು ಹೆಚ್ಚಿಸಬೇಕು ಮತ್ತು ಸದ್ಯ ನಾವೆಲ್ಲರು ಕೃಷಿಗೆ ಅವಶ್ಯಕತೆಗಿಂತ ಹೆಚ್ಚಾದ ನೀರನ್ನು ಬಳಸುತ್ತಿದ್ದೇವೆ. ಬೆಳೆಗಳಿಗೆ ಅನುಗುಣವಾಗಿ ನೀರನ್ನು ಮಿತವಾಗಿ ಬಳಸಬೇಕು ಎಂದು ನುಡಿದರು. ಸಂಸ್ಥೆಯ ಅಧ್ಯಕ್ಷರಾದ ಪ್ರೊ ಬಿ.ಎಸ್. ಮೋರೆ ಯವರು ಅಧ್ಯಕ್ಷತೆ ವಹಿಸಿ ಮುಂದಿನ ಭವಿಷ್ಯಕ್ಕಾಗಿ ನಾವು ಮಿತವಾಗಿ ನೀರನ್ನು ಬಳಸಬೇಕು ಹೆಚ್ಚು ಹೆಚ್ಚು ಮರಗಳನ್ನು ಬೆಳೆಸಬೇಕೆಂದು ನುಡಿದರು. ಗೌರವ ಕಾರ್ಯದರ್ಶಿಗಳಾದ ಡಾ. ಬಾಬುರಾವ ಶೇರಿಕಾರ ಕಾರ್ಯಕ್ರಮ ನಿರೂಪಿಸಿದರು. ಕಮಿಟಿ ಸದಸ್ಯರಾದ ಶ್ರೀ ಸುಭಾಷ ಸೂಗುರ ಸ್ವಾಗತಿಸಿದರು. ಶ್ರೀ ಹನುಮಯ್ಯ ಬೆಲ್ಲೂರೆ ಉಪನ್ಯಾಸಕ ಅತಿಥಿಯನ್ನು ಪರಿಚಯಿಸಿದರು. ಶ್ರೀ ಶಿವಶಂಕರೆಪ್ಪ ಗುರಗುಂಟಿ ವಂದಿಸಿದ್ದರು. ವಶಿಷ್ಟ ಹೆಗಡೆ ಪ್ರಾರ್ಥಿಸಿದರು. ಕಾರ್ಯಕ್ರಮದಲ್ಲಿ ರಾಜ್ಯ ಸಮಿತಿಯ ಸದಸ್ಯರಾದ ಶ್ರೀ ಜಿ.ಆರ್. ಮುತ್ತಗಿ, ಕಾಶಪ್ಪ ವಂಜರಖೇಡ, ಚಂದ್ರಶೇಖರ ಗುರಗುಂಟಿ, ಶ್ರೀನಿವಾಸ ಬೋರಾಳಕರ್, ಶಂಕರ ಪಂಚಾಳ, ಡಾ. ವಿರೇಶ ಮಲ್ಲಾಪೂರ, ಡಾ. ರವೀಂದ್ರ ಮಾಲಿಪಾಟೀಲ, ಮೂಲಗೆ, ಸರಕಾರಿ ಪಾಲಿಟೆಕ್ನಿಕ್ ಸಿವಿಲ್ ವಿಭಾಗದ ವಿದ್ಯಾರ್ಥಿಗಳು, ಪಿ.ಡಿ.ಎ. ಇಂಜನಿಯರಿಂಗ್ ಕಾಲೇಜಿನ ಪರಿಸರ ತಂತ್ರಜ್ಞಾನದ ಎಮ್.ಟೆಕ್ ವಿದ್ಯಾರ್ಥಿಗಳು ಮತ್ತು ಸಂಸ್ಥೆಯ ಸದಸ್ಯರು ಭಾಗವಹಿಸಿದರು.