ಜೀವ ಉಳಿಸಲು ಸ್ವಯಂ ಪ್ರೇರಿತವಾಗಿ ರಕ್ತದಾನ ಮಾಡಿ:ಡಾ: ಪ್ರಶಾಂತ ಧುಮಗೊಂಡ

ಇಂಡಿ:ಜೂ.24: ಯುವ ಜನತೆ ಬೇರೆಯವರ ಜೀವ ಉಳಿಸಲು ಸ್ವಯಂ ಪ್ರೇರಿತವಾಗಿ ರಕ್ತದಾನ ಮಾಡಬೇಕು. ಮನುಷ್ಯನು ಸತ್ತ ನಂತರ ಕೆಲವು ಅಂಗಾಂಗ ಗಳನ್ನು ದಾನ ಮಾಡಲು ಅವಕಾಶವಿದೆ.ಆದರೆ ಬದುಕ್ಕಿದ್ದಾಗಲೇ ಮಾಡುವ ಉಪಯುಕ್ತ ದಾನ ರಕ್ತದಾನವಾಗಿದೆ ಎಂದು ವೈಧ್ಯಾಧಿಕಾರಿ ಪ್ರಶಾಂತ ಧುಮಗೊಂಡ ಹೇಳಿದರು.
ಪಟ್ಟಣದ ಜಿ.ಆರ್. ಗಾಂಧಿ ಕಲಾ, ವಾಯ್.ಎ.ಪಾಟೀಲ ವಾಣಿಜ್ಯ ಹಾಗೂ ಎಮ್.ಎಫ್.ದೋಶಿ ವಿಜ್ಞಾನ ಪದವಿ ಮಹಾವಿದ್ಯಾಲಯದ ಎನ್.ಎಸ್.ಎಸ್ ಘಟಕ, ಸ್ಕೌಟ್ಸ & ಗೈಡ್ಸ, ಯೂತ್ ರೆಡಕ್ರಾಸ್ ಘಟಕ ಹಾಗೂ ಸರಕಾರಿ ಪ್ರಾಥಮಿಕ ವೈದ್ಯಕೀಯ ಆಸ್ಪತ್ರೆ ಚಿಕ್ಕಬೇವನೂರ, ಬಿ.ಎಲ್.ಡಿ.ಇ ಆಸ್ಪತ್ರೆ ವಿಜಯಪುರ ಇವರ ಸಹಯೋಗದಲ್ಲಿ ಎನ್ನೆಸ್ಸೆಸ್ ವಾರ್ಷಿಕ ವಿಶೇಷ ಶಿಬಿರದಲ್ಲಿ ರಕ್ತದಾನಿಗಳ ದಿನಾಚರಣೆಯ ಅಂಗವಾಗಿ ಉಚಿತ ಆರೋಗ್ಯ ತಪಾಸಣೆ ಹಾಗೂ ರಕ್ತದಾನ ಶಿಬಿರದಲ್ಲಿ ಮಾತನಾಡುತ್ತಿದ್ದರು.
ಪ್ರಾಂಶುಪಾಲರಾದ ಎಸ್.ಬಿ.ಜಾಧವ ಮಾತನಾಡಿ ಮನುಷ್ಯ ಜೀವನದಲ್ಲಿರುವ ರಕ್ತ ಜಾತಿ-ಧರ್ಮದಾರಿತವಲ್ಲ ರಕ್ತದಾನದ ಮೂಲಕ ಅಪಾಯದಲ್ಲಿರುವ ರೋಗಿಯ ಜೀವ ರಕ್ಷಣೆಯಾಗುವದನ್ನು ನಾವು ನಿತ್ಯ ಕಾಣುತ್ತಿದ್ದೇವೆ. ಆದ್ದರಿಂದ ರಕ್ತದಾನ ಮಾಡುವುದು ಹಾಗೂ ಪ್ರೋತ್ಸಾಹಿಸುವುದು ನಮ್ಮ ಕರ್ತವ್ಯ. ರಕ್ತದಾನ ಮಾನವೀಯತೆಯ ಪ್ರತ್ಯಕ್ಷ ದರ್ಶನವಾಗಿದೆ ಎಂದರು.
ಎನ್ನೆಸ್ಸೆಸ್ ಅಧಿಕಾರಿ ಡಾ.ವಿಶ್ವಾಸ ಕೋರವಾರ, ಡಾ.ಸುರೆಂದ್ರ ಕೆ ಮಾತನಾಡಿದರು.
ರಕ್ತದಾನ ಶಿಬಿರದಲ್ಲಿ 48 ಜನ ರಕ್ತದಾನ ಮಾಡಿ, 150 ಕ್ಕಿಂತ ಹೆಚ್ಚು ಜನ ಆರೋಗ್ಯ ತಪಾಸಣೆ ಮಾಡಿಸಿಕೊಂಡರು.
ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ವಾಯ್.ಎಮ್.ಪೂಜಾರ, ದೇಶಪಾಂಡೆ ತಾಂಡಾದ ಪುರಸಭೆ ಸದಸ್ಯ ಲಿಂಬಾಜಿ ರಾಠೋಡ, ತಾಂಡಾದ ಮುಖಂಡರು ಹಾಗೂ ಎಲ್ಲ ಶಿಬಿರಾರ್ಥಿಗಳು ಉಪಸ್ಥಿತರಿದ್ದರು.