ಜೀವಸಾರ್ಥಕತೆ ಪೋರ್ಟಲ್‍ನಲ್ಲಿ ನೇತ್ರದಾನಕ್ಕೆ ಅವಕಾಶ


ಚಿತ್ರದುರ್ಗ, ಡಿ.3: ಕರ್ನಾಟಕ ರಾಜ್ಯದಲ್ಲಿ ಅಂಗ ಕಸಿ ಕಾರ್ಯಕ್ರಮಕ್ಕಾಗಿ, ಅಂಗಾಂಗಗಳನ್ನು ದಾನ ಮಾಡ ಬಯಸುವವರಿಗೆ ಜೀವಸಾರ್ಥಕತೆಯ http://www.jeevasarthakathe.karnataka.gov.in ಫೋರ್ಟಲ್ ಮೂಲಕ ನೊಂದಣಿ ಮಾಡಿಕೊಳ್ಳಲು ಕಾರ್ಯಕ್ರಮವನ್ನು ರೂಪಿಸಿದೆ.
ಜೀವಸಾರ್ಥಕತೆಯು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಒಂದು ಭಾಗವಾಗಿದ್ದು, 1994ರ ಮಾನವ ಅಂಗಾಂಶ ಕಸಿಯ ಕಾಯಿದೆಯ ಅನುಷ್ಠಾನವನ್ನು ಮೇಲ್ವಿಚಾರಣೆ ಮಾಡಲು ನೇಮಿಸಲಾಗಿದೆ. ಈ ಸಂಸ್ಥೆಯ ಗುರಿಯೆಂದರೆ  ನಿಧನ ಹೊಂದಿರುವ ದಾನಿಯ ಅಂಗ ಕಸಿಗೆ ಸಮನ್ವಯತೆಯನ್ನು ಸಾಧಿಸುವುದು ಮತ್ತು ಸಾರ್ವಜನಿಕರನ್ನು ಅಂಗಾಂಗ ದಾನಕ್ಕಾಗಿ ಸುಶಿಕ್ಷತರನ್ನಾಗಿ ಮಾಡುವುದು, ಇಲ್ಲಿಯವರೆಗೆ ಜೀವಸಾರ್ಥಕತೆ ಫೋರ್ಟಲ್‍ನಲ್ಲಿ ಪಿತ್ತಜನಕಾಂಗ, ಮೂತ್ರಕೋಶ, ಹೃದಯ, ಮೇದೋಜ್ಜೀರಕಗ್ರಂಥಿ, ಶ್ವಾಸಕೋಶದಂತ ಅಂಗಾಂಗಗಳನ್ನು ದಾನ ಮಾಡಲು ನೋಂದಣಿ ಮಾಡಲು ಈವರೆಗೂ ಅವಕಾಶ ನೀಡಲಾಗಿತ್ತು. ಈಗ ನೇತ್ರಗಳ ದಾನಕ್ಕೂ ಸಹ ಅವಕಾಶ ನೀಡಲಾಗಿದೆ.
 ನೇತ್ರದಾನದ ನೋಂದಣಿಯ ಮುಖ್ಯ ಅಂಶಗಳು: ಜೀವಸಾರ್ಥಕತೆಯ http://www.jeevasarthakathe.karnataka.gov.in ಪೋರ್ಟಲ್‍ನಲ್ಲಿ ನೇತ್ರದಾನ ಮಾಡಲು ಇಚ್ಚಿಸುವವರು ನೊಂದಣಿ ಮಾಡಿಕೊಳ್ಳುವಾಗ ನಿಮ್ಮ ಹೆಸರು, ಮೂಲ ವಿವರ, ಭಾವಚಿತ್ರ ಮತ್ತು ಮೊಬೈಲ್ ಸಂಖ್ಯೆಯನ್ನು ನಮೂದಿಸಬೇಕು. ಮೊಬೈಲ್ ಸಂಖ್ಯೆಯನ್ನು ಖಚಿತಪಡಿಸಿಕೊಳ್ಳಕಲು ಒಟಿಪಿಯನ್ನು ನೀವು ನಮೂಸಿರುವ ಮೊಬೈಲ್ ಸಂಖ್ಯೆಗೆ ಕಳಿಸಲಾಗುತ್ತದೆ. ಒಟಿಪಿಯನ್ನು ನಮೂದಿಸಿ, ಪೋರ್ಟಲ್‍ನಲ್ಲಿ ದಾನಮಾಡಲು ಇಚ್ಛಿಸುವ ಅಂಗಾಂಗಗಳನ್ನು (ಕಣ್ಣು) ಆಯ್ಕೆ ಮಾಡಿ ಸಲ್ಲಿಸಿದ ನಂತರ ನೊಂದಯಿಸಿರುವ ಮೊಬೈಲ್ ಸಂಖ್ಯೆಗೆ ಡೋನಾರ್ ಕಾರ್ಡ್ ಲಿಂಕ್ ಕಳುಹಿಸಲಾಗಿತ್ತದೆ. ಕಳುಹಿಸಲಾದ ಲಿಂಕನ್ನು ಕ್ಲಿಕ್ ಮಾಡಿ ಡೋನರ್ ಕಾರ್ಡ್‍ನ್ನು ಡೌನ್‍ಲೋಡ್ ಮಾಡಿಕೊಳ್ಳಲು ಅವಕಾಶವಿರುತ್ತದೆ. ನೇತ್ರ ನೊಂದಣಿಯನ್ನು ಯಾರೆಲ್ಲ ಮತ್ತು ಯಾವಾಗ ಮಾಡಬೇಕೆಂಬ ವಿವರವನ್ನು ಜೀವಸಾರ್ಥಕತೆಯ ಪೊರ್ಟಲ್‍ನಲ್ಲಿರುವ FAQ’s of Eye  ಅಥವಾ ಕಣ್ಣಿನ ಬಗ್ಗೆ ಆಗಾಗ್ಗೆ ಕೇಳುವ ಪ್ರಶ್ನೆ ಎಂಬ ಆಯ್ಕೆಯನ್ನು ಕ್ಲಿಕ್ ಮಾಡಿ ವೀಕ್ಷಿಸಬಹುದು.
 ನೋಂದಣಿ ಮಾಡುವುದು ಹೇಗೆ?: ವಯಸ್ಸು, ಲಿಂಗ, ಜಾತಿ, ರಕ್ತದ ಗುಂಪು ಯಾವುದೇ ಬೇಧವಿಲ್ಲದೇ ಎಲ್ಲರೂ ನೇತ್ರದಾನ ಮಾಡಬಹುದು. ಮುಂದಿನ ಜನ್ಮದಲ್ಲಿ ಅಂಧರಾಗಿ ಹುಟ್ಟುತ್ತಾರೆ ಎನ್ನುವ ಮೂಢನಂಬಿಕೆಯಿಂದ ಕೆಲವರು ನೇತ್ರದಾನ ಮಾಡಲು ಒಪ್ಪುವುದಿಲ್ಲ. ಇಂಥ ಆಲೋಚನೆಗಳಿಂದ ಹೊರಬಂದು ನೇತ್ರದಾನ ಮಾಡಿದರೆ ಒಂದು ಕಣ್ಣಿನಿಂದ ಇಬ್ಬರು ಕಾರ್ನಿಯಾ ಅಂಧರಿಗೆ ದೃಷ್ಠಿ ನೀಡಬಹುದಾಗಿದೆ. ನೇತ್ರ ಸಂಗ್ರಹಣೆಗೆ 20 ನಿಮಿಷ ಮಾತ್ರ ಬೇಕಾಗುತ್ತದೆ. ನೇತ್ರದಾನ ಮಾಡಲು ಮನಸ್ಸಿದ್ದರೂ ಅದನ್ನು ಹೇಗೆ ಮಾಡಬೇಕು ಎನ್ನುವ ಗೊಂದಲ ಹಲವರಲ್ಲಿ ಇರಬಹುದು. ಹೀಗಾಗಿ ಸರ್ಕಾರವೇ  ಜೀವಸಾರ್ಥಕತೆ ವೆಬ್‍ಸೈಟ್ ಮಾಡಿದ್ದು, ಅಲ್ಲಿಯೇ ಹೆಸರು ನೋಂದಾಯಿಸಬಹುದಾಗಿದೆ.
ವೆಬ್‍ಸೈಟ್‍ನಲ್ಲಿ ಅರ್ಜಿ ಲಭ್ಯವಿದೆ. ಅದನ್ನು ಡೌನ್‍ಲೋಡ್ ಮಾಡಿಕೊಂಡು ಅರ್ಜಿ ಭರ್ತಿ ಮಾಡಬಹುದು.
ನೇತ್ರದಾನ ನೊಂದಣಿ ಮತ್ತು ಹೆಚ್ಚಿನ ಮಾಹಿತಿಗಾಗಿ www.jeevasarthakathe.gov.in    ಗೆ ಭೇಟಿ ನೀಡಬಹುದು. ಅಥವಾ 24*7 ಉಚಿತ ಆರೋಗ್ಯ ಸಹಾಯವಾಣಿ 104ಕ್ಕೆ ಕರೆ ಮಾಡಬಹುದು ಅಥವಾ ಹತ್ತಿರದ ಸರ್ಕಾರಿ ಆಸ್ಪತ್ರೆಗಳಲ್ಲಿ ನಮೂನೆಗಳನ್ನು ಭರ್ತಿ ಮಾಡಿ ನೀಡಬಹುದು ಎಂದು ಕಾರ್ಯಕ್ರಮ ಅನುಷ್ಠಾನಾಧಿಕಾರಿ ಡಾ.ಚಂದ್ರಶೇಖರ್ ಕಾಂಬ್ಳಿಮಠ್ ತಿಳಿಸಿದ್ದಾರೆ.

Attachments areaReplyForward