ಜೀವಸಂಕುಲ ಉಳಿವಿಗೆ ಜಲ ಸಂರಕ್ಷಣೆ ಅಗತ್ಯ: ಮಾಂಗ್

ಆಳಂದ:ಮಾ.14: ಭೂಮಿಯ ಮೇಲೆ ಜೀವ ಸಂಕುಲ ಉಳಿದು ಬೆಳೆಯಲು ಜಲ ಸಂರಕ್ಷಣೆ ಅತಿ ಮಹತ್ವದಾಗಿದೆ. ಜಲವಿಲ್ಲದೆ ಯಾವ ಜೀವಿಯೂ ಭೂಮಿಯ ಮೇಲೆ ಬದಕುಲು ಸಾಧ್ಯವಿಲ್ಲ. ಹೀಗಾಗಿ ನೀರಿನ ಹಿತಮಿತ ಬಳಿಕೆ ಮುಂದಾಗಬೇಕು ಎಂದು ನರೋಣಾ ಗ್ರಾಮದ ಕರಬಸಪ್ಪ ಮಾಂಗ್ ಅವರು ಹೇಳಿದರು.

ತಾಲೂಕಿನ ನರೋಣಾ ಗ್ರಾಮದ ಭೀಮ ಜ್ಯೋತಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಡಾ. ಅಂಬೇಡ್ಕರ್ ಕ್ರಾಂತಿಕಾರಿ ಯುವಕ ಸಂಘದ ನರೋಣ ಆಯೋಜಿಸಿದ್ದ ಜಲಸಂರಕ್ಷಣೆ ಜನ ಜಾಗೃತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಮಳೆಯ ಕೊರತೆ, ವರ್ಷ ಕಳೆದಂತೆ ಅಂತರ್ಜಲ ಪಾತಾಳಕ್ಕೆ ಕುಸಿತದಿಂದಾಗಿ ನೀರಿನ ಮೂಲವೇ ಇಲ್ಲವಾಗುತ್ತಿದೆ. ಹೀಗಾಗಿ ಮಳೆಯಿಂದ ಬಿದ್ದು ಹರಿಯುವ ನೀರು ನಿಲ್ಲುವಂತೆ, ನಿಂತ ನೀರು ಭೂಮಿಗೆ ಇಂಗುವಂತೆ ಮಾಡಿ ಅಂತರ್ಜಲ ಹೆಚ್ಚಿಸುವ ಜೊತೆಗೆ ಕೃಷಿ, ಕೈಗಾರಿಕೆ ಸೇರಿದಂತೆ ನಿತ್ಯ ಜನ ಜೀವನದಲ್ಲಿ ನೀರಿನ ಮಿತವಾದ ಬಳಕೆ ಆಗಬೇಕು. ಭವಿಷ್ಯದಲ್ಲಿ ಅಂತರ್ಜಲ ಸಂಗ್ರಹಕ್ಕೆ ಕೆರೆ, ಕಟ್ಟೆ, ಗೋಕಟ್ಟೆ ನಿರ್ಮಾಣ ಕಾರ್ಯವೂ ನಡೆಯಬೇಕು ಎಂದು ಅಭಿಪ್ರಾಯಪಟ್ಟರು.

ಅಧ್ಯಕ್ಷತೆ ವಹಿಸಿದ್ದ ಶಾಲೆಯ ಮುಖ್ಯ ಶಿಕ್ಷಕ ನಾಗಪ್ಪ ಎಸ್ ದೇವಂತಗಿ ಮತ್ತು ಶಿಕ್ಷಕ ಅರುಣಕುಮಾರ್ ಎ ಬೈರಗೊಂಡ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು. ಸಂಘದ ಅಧ್ಯಕ್ಷರು ಶಿವಪುತ್ರ ರಾಗಿ ಪ್ರಸ್ತಾವಿಕ ಮಾತನಾಡಿ, ಸಂಘದ ಉದ್ದೇಶ ಮತ್ತು ಜಲ ಸಂರಕ್ಷಣೆ ಜನಜಾಗೃತಿ ಕುರಿತು ಮಾತನಾಡಿದರು. ಸಂಘದ ಕಾರ್ಯದರ್ಶಿ ವಿಜಯಕುಮಾರ್ ಮೇಲಕೇರಿ ನಿರೂಪಿಸಿದರು.

ಶಿಕ್ಷಕ ರವಿ ಎಸ್. ರಾಗಿ ವಂದಿಸಿದರು. ಈ ಸಂದರ್ಭದಲ್ಲಿ ಶಾಲಾ ಸಿಬ್ಬಂದಿಗಳು, ವಿದ್ಯಾರ್ಥಿಗಳು, ಗ್ರಾಮಸ್ಥರು ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.