ಜೀವವಿದ್ದರೆ ಜೀವನ ಸಂಚಾರಿ ನಿಯಮ ಪಾಲಿಸಿ : ಪಿಎಸ್‍ಐ ಕೋಟೆ

ಔರಾದ : ಜು.14:ಪ್ರತಿಯೊಬ್ಬರು ಸಂಚಾರಿ ನಿಯಮಗಳನ್ನು ಪಾಲಿಸುವುದರ ಜೊತೆಗೆ ತಾಳ್ಮೆಯಿಂದ ವಾಹನ ಚಾಲನೆ ಮಾಡುವುದರಿಂದ ನಮ್ಮ ಅಮೂಲ್ಯ ಜೀವವನ್ನು ಉಳಿಸಿಕೊಳ್ಳಲು ಸಾಧ್ಯ, ಜೀವ ಇದ್ದರೆ ಜೀವನ ಎಂದು ಹೊಕ್ರಾಣ ಪೆÇಲೀಸ್ ಠಾಣೆ ಪಿಎಸ್‍ಐ ಬಸವರಾಜ ಕೋಟೆ ಅಭಿಪ್ರಾಯಪಟ್ಟರು.

ಪಟ್ಟಣದ ಬಸವ ಗುರುಕುಲ ಸಮೂಚ್ಚಯ ಶಾಲೆಯಲ್ಲಿ ನಡೆದ ರಸ್ತೆ ಸುರಕ್ಷತಾ ಅರಿವು ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ವಾಹನಗಳ ವೇಗ ಕಡಿಮೆಗೊಳಿಸಿ ಪ್ರತಿಯೊಬ್ಬರ ತಾಳ್ಮೆಯಿಂದ ವಾಹನ ಚಾಲನೆ ಮಾಡುವುದರಿಂದ ಎಷ್ಟೋ ಅಫಘಾತಗಳನ್ನು ತಡೆಯಲು ಸಾಧ್ಯ, ಕೆಲ ದ್ವಿಚಕ್ರ ಚಾಲಕರು ಹೆಲ್ಮೆಟ್ ಧರಿಸದೆ ಅಪಘಾತಕ್ಕೊಳಗಾಗಿ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಸವಾರಿ ಮಾಡುವ ಸಂದರ್ಭದಲ್ಲಿ ಮೊಬೈಲ್‍ನಲ್ಲಿ ಮಾತನಾಡುತ್ತ ವೇಗವಾಗಿ ಸವಾರಿ ಮಾಡುವುದನ್ನು ನಿಲ್ಲಿಸಬೇಕು, ರಸ್ತೆ ಸುರಕ್ಷತಾ ಕ್ರಮ ಹಾಗೂ ಸಂಚಾರ ನಿಯಮಗಳು ಕೇವಲ ಪೆÇಲೀಸರಿಗೆ ಸಂಬಂಧಿಸಿದ್ದಲ್ಲ ಅದು ಪ್ರತಿಯೊಬ್ಬ ಸಾರ್ವಜನಿಕರ ಹೊಣೆಗಾರಿಕೆ ಎಂದರು.

ಈ ಸಂದರ್ಭದಲ್ಲಿ ಜ್ಞಾನದೇವ ಜಾಧವ, ಲಕ್ಷ್ಮಣ, ಮಾರುತಿರೆಡ್ಡಿ ಕೌಳಾಸೆ, ಶಿವಯೋಗಪ್ಪ, ಪ್ರಾಂಶುಪಾಲ ಶರಣಪ್ಪ ನೌಬಾದೆ, ಸತೀಶ ಗಂದಿಗುಡೆ, ಮುಖ್ಯಗುರು ನಿರ್ಮಲಾ ಸೇರಿ, ಇಂದುಮತಿ ಎಡವೆ, ಸಂಜೀವ ವಲಾಂಡೆ, ನಾಗನಾಥ ಪಾಟೀಲ, ನಾಗನಾಥ ಶಂಕು, ರಜನೀಕಾಂತ ಮಳಗೆ, ಬಾಲಾಜಿ ನಿಟ್ಟೂರೆ, ಸಂತೋಷ ಮಡಿವಾಳ, ಬಸವರಾಜ ತಳವಾರ, ವಾಮನರಾವ ಮಾನೆ, ಸಂದೀಪ ಫುಲೆ, ರೇಖಾ ನೌಬಾದೆ, ಸಂಗೀತಾ ಪಾಟೀಲ, ನಾಗೇಶ್ವರಿ, ಸುರೇಖಾ ಮೆಂಗಾ ಸೇರಿದಂತೆ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.