ಜೀವನ ಸುಖಿಮಯವಾಗಿರಲು ಶಿಕ್ಷಣ ಅತ್ಯವಶ್ಯಕ

ಬಸವಕಲ್ಯಾಣ: ಮಾ.15:ವಿದ್ಯಾರ್ಥಿಗಳು ತಮ್ಮ ಬಾಲ್ಯದಲ್ಲೆ ಶಿಕ್ಷಣಕ್ಕೆ ಆಧ್ಯತೆ ನೀಡಿದರೆ ಅವರ ಮುಂದಿನ ಜೀವನ ಸುಖಿಮಯವಾಗಿರುತ್ತದೆ. ಗ್ರಾಮೀಣ ಭಾಗದ ಮಕ್ಕಳು ಶಿಕ್ಷಣದ ಜೊತೆಗೆ ಸಾಂಸ್ಕøತಿಕ, ಕ್ರೀಡೆ ಕಡೆಗೂ ಆಸಕ್ತಿ ಬೆಳೆಸಿಕೊಳ್ಳಬೇಕು ಎಂದು ವಾತಾಡೆ ಫೌಂಡೆಷನ್ ಅಧ್ಯಕ್ಷ, ಬಿಜೆಪಿ ಯುವ ಮುಖಂಡ ಪ್ರದೀಪ ವಾತಾಡೆ ತಿಳಿಸಿದರು.
ತಾಲೂಕಿನ ಗುತ್ತಿ ಗ್ರಾಮದಲ್ಲಿ ವಾತಾಡೆ ಫೌಂಡೇಶನ್ ವತಿಯಿಂದ ಭಾನುವಾರ ಸರ್ಕಾರಿ ಶಾಲೆ ವಿದ್ಯಾರ್ಥಿಗಳಿಗೆ ಉಚಿತ ನೋಟ ಬುಕ್ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ನಮ್ಮ ವಾತಾಡೆ ಫೌಂಡೆಷನ್ ವತಿಯಿಂದ ಸತತ ಹಲವು ವರ್ಷಗಳಿಂದ ವಿದ್ಯಾರ್ಥಿಗಳೀಗೆ ನೋಟ್ ಬುಕ್ ಹಾಗೂ ಸ್ಕಾಲರರ್ಶೀಪ್ ಸೇರಿದಂತೆ ವಿವಿಧ ಯೋಜನೆಗಳು ಹಮ್ಮಿಕೊಳ್ಳಲಾಗುತ್ತಿದೆ. ಮುಂಬರುವ ದಿನಗಳಲ್ಲಿ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ಹೆಚ್ಚಿನ ಅಂಕ ಪಡೆದು ಸಾಧನೆ ಮಾಡಿರುವ ವಿದ್ಯಾರ್ಥಿಗಳಿಗೆ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಾತಾಡೆ ಫೌಂಡೇಶನ್ ವತಿಯಿಂದ ಸ್ಕಾಲರರ್ಶಿಪ್ ಕೊಡಲಾಗವದು ಎಂದು ಭರವಸೆ ನೀಡಿದರು.
ನಮ್ಮ ಫೌಂಡೇಶನ್ ವತಿಯಿಂದ ಉಚಿತ್ ನೋಟ ಬುಕ್ ಮತ್ತು ವಿದ್ಯಾರ್ಥಿ ವೇತನ ಹಾಗೂ ಇಲ್ಲಿ ಸಿಗುವ ವಿವಿಧ ಸೌಲಭ್ಯಗಳನ್ನು ಬಡ ವಿದ್ಯಾರ್ಥಿಗಳು ಬಳಸಿಕೊಂಡು ಪ್ರತಿಭಾವಂತರಾಗಿ ಶಾಲೆಯ ಕಿರ್ತಿ ಬೆಳಗಬೇಕು ತಾವು ಕಲಿತ ಶಾಲೆಗೆ ಕೊಡುಗೆಗಳಾಬೇಕು ಅತ್ಯಂತ ಹಿಂದವುಳೀದ ಬಡ ವಿದ್ಯಾರ್ಥಿಗಳ ಭವಿಷ್ಯ ಭದ್ರವಾಗಬೇಕು ಆ ನೀಟ್ಟಿನಲ್ಲಿ ನಾವು ಸಹಕಾರ ನೀಡಲಿದ್ದೆವೆ ಎಂದರು.
ಗ್ರಾ.ಪಂ. ಸದಸ್ಯ ವೈಭವ ಬಿರಾಜದಾರ ಮಾತನಾಡಿ, ವಾತಡೆ ಫೌಂಡೇಶನ್ ಶಿಕ್ಷಣ ಕ್ಷೇತ್ರಕ್ಕೆ ತನ್ನದೆ ಆದ ಸಹಕಾರ ನೀಡುತ್ತಿದ್ದು ಪ್ರತಿ ವರ್ಷವು ಕೂಡ ಫೌಂಡೇಶನ್‍ನಿಂದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸುವ ಕಾರ್ಯ ನಡೆಸುತ್ತಿರುವುದು ಮುಂದಿನ ವಿದ್ಯಾರ್ಥಿಗಳಿಗೆ ಸ್ಪೂರ್ತಿ ನೀಡುತ್ತಿದೆ ಎಂದು ಹೇಳಿದರು. ಮಾಜಿ ಗ್ರಾಮ ಪಂಚಾಯತ ಸದಸ್ಯ ಜ್ಞಾನೇಶ್ವರ ಪಂಚಾಳ, ಕೃಷ್ಣಾ ಪಾಟೀಲ, ಮಾಧವ ಜಾಧವ, ರಾಮ ಬೀರಾದಾರ, ಬಾಲಾಜಿ ಬಿರಾದಾರ, ನೀಲಕಂಠ ತೂಗಾವೆ, ಸೂರ್ಯಕಾಂತ, ಪ್ರಭು ಕಾಡಾದಿ,ವಿಶಾಲ ಸಾಂಡೆ, ಅನೀಲ ಮರಪಳ್ಳೆ, ಶ್ರೀಶೈಲ ವಾತಾಡೆ, ಸೇರಿದಂತೆ ಗ್ರಾಮದ ಪ್ರಮುಖರು ಶಾಲೆಯ ಮಕ್ಕಳು ಉಪಸ್ಥಿತರಿದ್ದರು.