ಜೀವನ ಸಾರ್ಥಕವಾಗಬೇಕಾದರೆ ಧಾರ್ಮಿಕ ಕಾರ್ಯಗಳನ್ನು ಮೈಗೂಡಿಸಿಕೊಳ್ಳಬೇಕು

ಕೆಂಭಾವಿ:ಸೆ.25:ಪ್ರತಿ ವರ್ಷ ಗಣೇಶ ಉತ್ಸವವನ್ನು ಅರ್ಥಪೂರ್ಣವಾಗಿ ಆಚರಿಸುವುದರ ಜತೆಗೆ ಗ್ರಾಮದಲ್ಲಿ ಧಾರ್ಮಿಕ ಭಾವನೆ ಬಿತ್ತುತ್ತಿರುವ ಅಗಸಿ ಗಜಾನನ ಯುವಕ ಮಂಡಳಿ ಕಾರ್ಯ ಶ್ಲಾಘನೀಯ ಎಂದು ಶ್ರೀಶೈಲ ಜಗದ್ಗುರು ಡಾ. ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು ಹೇಳಿದರು.
ಪಟ್ಟಣ ಸಮೀಪದ ನಗನೂರ ಗ್ರಾಮದಲ್ಲಿ ಅಗಸಿ ಗಜಾನನ ಯುವಕ ಮಂಡಳಿ ವತಿಯಿಂದ ಹಮ್ಮಿಕೊಂಡಿದ್ದ ನಮ್ಮೂರ ಗಣೇಶ ಹಬ್ಬ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಪ್ರತಿಯೊಬ್ಬರೂ ಧರ್ಮ ಮಾರ್ಗದಲ್ಲಿ ನಡೆದು ಪರೋಪಕಾರಿ ಮನೋಭಾವ ಮೈಗೂಡಿಸಿಕೊಂಡು ಉಪಕಾರದ ಕೆಲಸಗಳನ್ನು ಮಾಡಿ ಜೀವನ ಸಾರ್ಥಕಗೊಳಿಸಬೇಕು ಎಂದ ಅವರು, ಭಾರತ ದೇಶದಲ್ಲಿ ಅತ್ಯಂತ ಶ್ರದ್ಧಾಭಕ್ತಿಯಿಂದ ಆಚರಿಸಲ್ಪಡುವ ಹಬ್ಬಗಳಲ್ಲಿ ಗಣೇಶ ಚತುರ್ಥಿಯ ಹಬ್ಬವು ಕೂಡ ಒಂದಾಗಿದೆ. ಹೀಗಾಗಿ ಯುವಕರೆಲ್ಲರೂ ತಮ್ಮ ಮನೆ-ಮನೆಗಳಲ್ಲಿ ಗಣೇಶ ಹಬ್ಬವನ್ನು ಆಚರಿಸಬೇಕು ಎಂದರು.
ಮನೆ, ದೇವಸ್ಥಾನಗಳಲ್ಲಿ ಮಾತ್ರ ನಡೆಯುತ್ತಿದ್ದ ಚೌತಿಗೆ ಸಾರ್ವಜನಿಕ ವೇದಿಕೆ ಒದಗಿಸುವ ಪರಂಪರೆಗೆ ನಾಂದಿ ಹಾಡಿದವರು ಬಾಲಗಂಗಾಧರ ತಿಲಕ್ ಅವರು. ಸ್ವಾತಂತ್ರ?? ಪೂರ್ವದಲ್ಲಿ ನಡೆಯುತ್ತಿದ್ದ ಚೌತಿ ಸಂಭ್ರಮಕ್ಕೆ ಅಂದು ದೇಶ ಪ್ರೇಮಿಗಳಲ್ಲಿ ಸ್ವಾತಂತ್ರ??ದ ಕಿಡಿ ಹೊತ್ತಿಸಿದರು. ಗಣೇಶೋತ್ಸವಗಳ ಮೂಲಕ ಜನರನ್ನು ಒಂದುಗೂಡಿಸಿ ಬ್ರಿಟಿಷರ ದಾಸ್ಯದಿಂದ ಬಿಡುಗಡೆಗೊಳ್ಳಲು ಏಕತೆಯನ್ನು ಸಾಧಿಸುವ ತಿಲಕ ಅವರ ಪ್ರಯತ್ನ ಧರ್ಮ ಜಾಗೃತಿಯ ಜತೆಗೆ ದೇಶಭಕ್ತಿ, ಏಕತಾ ಶಕ್ತಿಗೆ ಮುನ್ನುಡಿ ಬರೆಯಿತು. ಹೀಗಾಗಿ ಸ್ವಾತಂತ್ರ?? ಸಂಗ್ರಾಮದಲ್ಲಿ ಗಣೇಶ ಹಬ್ಬವು ಮಹತ್ತರ ಪಾತ್ರ ವಹಿಸಿತು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಷ.ಬ್ರ. ಸೂಗೂರೇಶ್ವರ ಶಿವಾಚಾರ್ಯರು, ಷ.ಬ್ರ. ಚನ್ನಬಸವ ಶಿವಾಚಾರ್ಯರು, ಶಹಾಪುರದ ಷ.ಬ್ರ. ಸೂಗೂರೇಶ್ವರ ಶಿವಾಚಾರ್ಯರು, ಷ.ಬ್ರ. ರುದ್ರಮುನಿ ಶಿವಾಚಾರ್ಯರು, ನಾವದಗಿ ಶ್ರೀ ರಾಜೇಂದ್ರ ಒಡೇಯರ ಸ್ವಾಮಿಗಳು, ಶ್ರೀ ಬಸಯ್ಯಸ್ವಾಮಿ ದಂಡಸೋಲಾಪುರ, ಶ್ರೀ ಸಿದ್ದು ಶರಣರು, ಶ್ರೀ ದೃವರಾಜ ಜೋಶಿ, ಶ್ರೀ ಖಂಡಪ್ಪ ತಾತನವರು, ಶ್ರೀ ಸಿದ್ದಪ್ಪ ತಾತನವರು, ಮುಖಂಡರಾದ ಸಂಜೀವರೆಡ್ಡಿ ದರ್ಶನಾಪುರ, ಬಾಬುಗೌಡ ಪಾಟೀಲ ಅಗತೀರ್ಥ, ಶಿವರಾಜ ಸಾಹು ಬುದೂರ, ರಾಜಶೇಖರ ಸಾಹು ಗೂಗಲ್, ಚನ್ನಬಸಪ್ಪ ದೇಸಾಯಿ, ರಾಹುಸಾಬ ದೇಸಾಯಿ, ಚನ್ನಾರೆಡ್ಡಿ ದೇಸಾಯಿ, ರಾಮಣ್ಣ ದೇಶಪಾಂಡೆ, ಸಂಗಣ್ಣ ವಣಿಕ್ಯಾಳ, ಸಂಗನಗೌಡ ಮಾಲಿ ಪಾಟೀಲ, ಪ್ರಕಾಶ ಪಾಟೀಲ, ವಿನಯರೆಡ್ಡಿ ಗೂಗಲ್, ಅಗಸಿ ಗಜಾನನ ಮಂಡಳಿ ಅಧ್ಯಕ್ಷ ಶಂಕರಗೌಡ ಪೆÇಲೀಸ್ ಪಾಟೀಲ ಸೇರಿದಂತೆ ಸರ್ವ ಸದಸ್ಯರಿದ್ದರು.
ಕಾರ್ಯಕ್ರಮಕ್ಕೂ ಮುನ್ನ ಶರಣಬಸವೇಶ್ವರ ಪಾದಗಟ್ಟೆಯಲ್ಲಿ ವಿಶೇಷವಾಗಿ ಸಿಂಗರಿಸಿದ ಸಾರೋಟಿನಲ್ಲಿ ಶ್ರೀಶೈಲ ಜಗದ್ಗುರು ಡಾ. ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳನ್ನು ಕುಳ್ಳಿರಿಸಿ ಕುಂಭ ಮೇಳದೊಂದಿಗೆ ಅದ್ಧೂರಿಯಾಗಿ ಸ್ವಾಗತಿಸಲಾಯಿತು.
ಶಿಕ್ಷಕ ಸಿದ್ದನಗೌಡ ಗೂಗಲ್ ಸ್ವಾಗತಿಸಿದರು. ಅಮರಯ್ಯಸ್ವಾಮಿ ಜಾಲಿಬೆಂಚಿ ನಿರೂಪಿಸಿದರು. ನಾಗಭೂಷಣ ಪತ್ತಾರ ವಂದಿಸಿದರು. ಬಸವರಾಜ ಭಂಟನೂರ ಬಳಗದಿಂದ ಸಂಗೀತ ಸೇವೆ ನಡೆಯಿತು.