ಜೀವನ ಶೈಲಿ ಬದಲಿಸಿಕೊಳ್ಳಿ ಕ್ಯಾನ್ಸರ್ ನಿಂದ ದೂರವಿರಿ: ಫಾದರ್ ವಿಕ್ಟರ್ ವಾಸ್

ಕಲಬುರಗಿ:ಫೆ.16: ಫರಹತಬಾದ ಗ್ರಾಮದ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ “ವಿಶ್ವ ಕ್ಯಾನ್ಸರ್ ದಿನಾಚರಣೆಯ” ಪ್ರಯುಕ್ತ ಜಾಥಾ ಕಾರ್ಯಕ್ರಮವನ್ನು ಸೇವಾಸಂಗಮ ಸಂಸ್ಧೆ ಹಾಗೂ ಕಾರಿತಾಸ್ ಇಂಡಿಯ ಇವರ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಳ್ಳಲಾಯಿತ್ತು. ಈ ಜಾಥಕ್ಕೆ ರಿಬ್ಬನ್ ಕತ್ತರಿಸುವ ಮೂಲಕ ಶ್ರೀ ಅಂಬರೀಶ್ ಉಡಚಣ ಸದಸ್ಯರು ಗ್ರಾಮ ಪಂಚಾಯತ ಫರಹತಬಾದ, ಶ್ರೀ ಶರಣಪ್ಪ ಮುಖ್ಯ ಗುರುಗಳು ಸರಕಾರಿ ಮಾದರಿ ಶಾಲೆ ಫರಹತಾಬಾದ ಹಾಗೂ ಫಾದರ್ ವಿಕ್ಟರ್ ವಾಸ್ ನಿರ್ದೇಶಕರು ಸೇವಾ ಸಂಗಮ ಸಂಸ್ಧೆ, ಕಲಬುರಗಿ ಚಾಲನೆಯನ್ನು ನೀಡಿದರು.
ಸಂಪೂರ್ಣ ಗ್ರಾಮದಲ್ಲಿ ಜಾಥನಡಿಸಿದ ವಿಧ್ಯಾರ್ಥಿಗಳು ಕ್ಯಾನ್ಸರ್ ವಿರುದ್ದ ಘೋಷಣೆಗಳನ್ನು ಕೂಗಿ ಜನರಲ್ಲಿ ಜಾಗೃತಿ ಮೂಡಿಸಿದರು, ನಂತರ ಜಾಥದಲ್ಲಿ ಪಾಲ್ಗೊಂಡ ಮಕ್ಕಳನ್ನು ಉದ್ದೇಶಿಸಿ ಮಾತನಾಡಿದ ಫಾದರ್ ವಿಕ್ಟರ್ ವಾಸ್ ಅವರು ” ಮಾನವ ಸಂಘ ಜೀವಿಯಾಗಿದ್ದಾನೆ ಪ್ರತಿಯೋಬ್ಬರು ಸಹಾಯ ಸಹಕಾರದಿಂದ ಕ್ಯಾನ್ಸರ್ ಕುರಿತು ಅರಿವನ್ನು ಮೂಡಿಸುತ್ತಾ ಹೊದರೆ ಒಂದು ದಿನ ಭಾರತವನ್ನು ಕ್ಯಾನ್ಸರ್ ಮುಕ್ತವಾಗಿ ಮೂಡಬಹುದಾಗಿದೆ” ಎಂದು ಹೇಳಿದರು.
ಕಾರ್ಯಕ್ರಮವನ್ನು ಉದ್ಧೇಶಿಸಿ ಮಾತನಾಡಿದ ಶ್ರೀ ಅಂಬರೀಶ್ ಉಡಚಣ ಅವರು “ಕ್ಯಾನ್ಸರ್‍ನಲ್ಲಿ ಹತ್ತು ಹಲವು ವಿಧಗಳಿದ್ದು ಅದರಲ್ಲಿ ರಕ್ತದ ಕ್ಯಾನ್ಸರ್ (ಬ್ಲೆಡ್ ಕ್ಯಾನ್ಸರ್) ಹೆಚ್ಚಿನ ಸಂಖ್ಯೆಯಲ್ಲಿ ಕಂಡು ಬರುತ್ತದೆ ಮತ್ತು ಇದು ಅತ್ಯಂತ ಭಯಾನಕವಾದ ರೋಗವಾಗಿದೆ” ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮಕ್ಕಳಿಗೆ ಕ್ಯಾನ್ಸರ್ ರೋಗದ ಕುರಿತು ಮಾಹಿತಿಯನ್ನು ನಿಡಿದಂತಹ ಫಾದರ್ ದೀಪಕ್ ಅವರು ಕ್ಯಾನ್ಸರ್ ಅನುವುದು ಮನುಷ್ಯನ ಪಾಲಿಗೆ ಅತ್ಯಂತ ಭಯಂಕಾರಿಯಾಗಿದೆ ಈ ರೋಗದಿಂದ ಬಳಲುತ್ತಿರುವವರು ಎಷ್ಟೇ ದುಡ್ಡು ಖರ್ಚು ಮಾಡಿದರು ಕೂಡ ಬದುಕು ಸಾಧ್ಯತೆ ತುಂಬ ಕಡಿಮೆ ಇರುತ್ತದೆ. ಆದ್ದರಿಂದ ಈ ರೋಗಕ್ಕೆ ತುತ್ತಾಗದೆ ಅದಕ್ಕೂ ಮೊದಲೆ ಇದರ ಕುರಿತು ಅರಿತುಕೊಂಡು ಉತ್ತಮವಾದ ಆಹಾರ ಸೇವನೆ ಮಾಡುವ ಮೂಲಕ ದುಶ್ಚಟಗಳಿಂದ ದೂರ ಉಳಿದು, ಕ್ಯಾನ್ಸರ್ ಮುಕ್ತ ಸಮಾಜವನ್ನು ಕಟ್ಟೋಣ ಎಂದು ಹೇಳಿದರು.
ಕಾರ್ಯಕÀ್ರಮದಲ್ಲಿ ಸಹಶಿಕ್ಷಕರು ಸ್ಥಳಿಯ ಸಮಾಜ ಸೇವಾ ಸಂಸ್ಧೆಯ ಮುಖಂಡರು ಹಾಗೂ ಸೇವಾ ಸಂಗಮ ಸಂಸ್ಧೆಯ ಕಾರ್ಯಕರ್ತರು ಭಾಗವಹಿಸಿದ್ದರು. ಕಾರ್ಯಕ್ರಮವನ್ನು ಶ್ರೀ ರಾಜಕುಮಾರ, ನಿರೂಪಿಸಿ ಶ್ರೀಮತಿ ಸ್ವಾತಿ ಸ್ವಾಗತಿಸಿ, ಶ್ರೀ ಚಂದ್ರಕಾಂತ ಅವರು ವಂದಿಸಿದರು.