ಜೀವನ ಶೈಲಿ ಬದಲಾಯಿಸಿ ಮಾನಸಿಕ ಆರೋಗ್ಯ ಉತ್ತಮವಾಗಿಸಿ

ಹರಿಹರ.ಜು.೪; ಉತ್ತಮವಾಗಿ ಆಹಾರ ಸೇವನೆ ಮಾಡಿದರೆ ದೈಹಿಕವಾಗಿ ಆರೋಗ್ಯವಂತರಾಗಿರುತ್ತೇವೆ ಎಂದು ವೃತ್ತ ನಿರೀಕ್ಷಕ ಸತೀಶ್ ಕುಮಾರ್ ಯು  ಹೇಳಿದರು ನಗರದ ಪಿಬಿ ರಸ್ತೆಯಲ್ಲಿರುವ ಎಸ್ ಜೆ ವಿ ಪಿ ಕಾಲೇಜಿನ ವಸತಿ ನಿಲಯದ ಕೋವಿಡ್ 19 ಕೇರ್ ಸೆಂಟರ್ ನಲ್ಲಿ ಮಹಾಮಾರಿ ಡೆಡ್ಲಿ ವೈರಸ್ ನಿಂದ ಗುಣಮುಖರಾಗಿ ಬಿಡುಗಡೆಗೊಂಡು ಮನೆಗೆ ತೆರಳುವ ನಾಗರಿಕರಿಗೆ ಆರೋಗ್ಯದ ಕಾಳಜಿ ಬಗ್ಗೆ  ಮಾತನಾಡಿದ ಅವರು ಈಗಾಗಲೇ ನೀವುಗಳು ವೈರಸ್ ನಿಂದ ಬಳಲಿ ಚಿಕಿತ್ಸೆ ಪಡೆದು ಗುಣಮುಖರಾಗಿದ್ದೀರಾ ಆದರೆ ಮನೆಯಲ್ಲಿ  ಸ್ವಲ್ಪ ದಿನಗಳ ಕಾಲ ಪ್ರತ್ಯೇಕವಾಗಿ ಇರಬೇಕು ಹೊರಗಡೆಗೆ ತಿರುಗಾಡಬಾರದು ಸಮಯಕ್ಕೆ ಸರಿಯಾಗಿ ತಿಂಡಿ ಊಟ ಉಪಾಹಾರ ಔಷಧಿ ಗುಳಿಗೆ ಮಾತ್ರೆ ಗಳನ್ನು ಸಕಾಲಕ್ಕೆ ಸರಿಯಾಗಿ ತೆಗೆದುಕೊಳ್ಳಬೇಕು ಸಾಮಾಜಿಕ ಅಂತರ ಮಾಸ್ಕ್ ಧರಿಸುವುದು ಕೋವಿಡ್ 19 ಮಾರ್ಗ ಸೂಚಿಗಳನ್ನು ಚಾಚು ತಪ್ಪದೇ ಪಾಲಿಸಬೇಕು ನಿಮ್ಮ ಕುಟುಂಬದ ಸದಸ್ಯರಿಗೆ ಜಾಗೃತಿ ಮೂಡಿಸುವಂತಹ ಕಾರ್ಯವನ್ನು ಮಾಡಬೇಕು. ಗ್ರಾಮೀಣ ಪ್ರದೇಶಗಳಲ್ಲಿ  ವೈರಸ್ಸಿನ ಅಲೆ ಸುನಾಮಿಯಂತೆ ವೇಗವಾಗಿ ಹಬ್ಬುತ್ತಿದೆ ಈಗಾಗಲೇ ನೀವು  ಸೋಂಕಿನಿಂದ ಬಳಲಿ ಗುಣಮುಖರಾಗಿದ್ದಿರಾ ನಿಮ್ಮ ಕುಟುಂಬದವರಿಗೆ ಸೋಂಕು  ಹರಡುವುದನ್ನು ತಡೆಗಟ್ಟುವುದಕ್ಕೆ ತಾವುಗಳು  ಜಾಗೃತರಾಗಬೇಕೆಂದರು 
ವೈರಸ್ ಕಾಣಿಸಿಕೊಂಡ ತಕ್ಷಣ ವೈದ್ಯರ ಬಳಿ ಚಿಕಿತ್ಸೆ ಪಡೆದರೆ ಶೀಘ್ರದಲ್ಲೇ ಸೊಂಕಿನಿಂದ ಗುಣಮುಖರಾಗಬಹುದು ಗುತ್ತೂರು. ದೇವರಬೆಳಕೆರೆ. ಎಸ್ ಜೆ ವಿ ಪಿ .ಕೊಂಡಜ್ಜಿ .ನಗರ ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿ ಇರುವಂಥ ಕೋವಿಡ್  ಕೇರ್ ಸೆಂಟರ್ ನಲ್ಲಿ  ಸೋಂಕಿತರಿಗೆ  ಆಹಾರ ಊಟ ಉಪಾಹಾರ ಚಿಕಿತ್ಸೆ ಆರೈಕೆಯನ್ನು ವೈದ್ಯರು ಸಿಬ್ಬಂದಿಗಳು ಮಾಡುತ್ತಿದ್ದಾರೆ .ತಾಲ್ಲೂಕು ಆಡಳಿತ ಪೋಲಿಸ್ ನಗರಸಭೆ ಆರೋಗ್ಯ ವೈದ್ಯ ಸಿಬ್ಬಂದಿಗಳು ಮಹಾಮಾರಿ ವೈರಸ್ ನಿರ್ಮೂಲನೆ ಮಾಡುವುದಕ್ಕೆ ಹಗಲು ಇರುಳು ಕೊರೊನಾ ವಾರಿಯರ್ಸ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ  ನಾಗರಿಕರು ಇವರೊಂದಿಗೆ ಸಹಕರಿಸಿ ಆರೋಗ್ಯಕರ ಸಮಾಜವನ್ನು ಕಟ್ಟುವುದಕ್ಕೆ ಮುಂದಾಗೋಣ ಎಂದರು ಕಂದಾಯ ಇಲಾಖೆಯ ಶಿರಸ್ತೇದಾರ್ ಚನ್ನವೀರಸ್ವಾಮಿ. ರಾಜಸ್ವ ನಿರೀಕ್ಷಕ ಸಮೀರ್ ಅಹ್ಮದ್. ನಗರ ಗ್ರಾಮ ಲೆಕ್ಕಾಧಿಕಾರಿ ಎಚ್ ಜಿ ಹೇಮಂತ್ ಕುಮಾರ್. ಸೇರಿದಂತೆ ಕೋವಿಡ್ ಕೇರ್ ಕೇಂದ್ರಗಳಲ್ಲಿ ವೈರಸ್ ನಿಂದ ದೃಡಪಟ್ಟ ವ್ಯಕ್ತಿಗಳಿಗೆ ಶುದ್ಧವಾದ ಕುಡಿಯುವ ನೀರು ಬೆಳಗ್ಗೆ ಮಧ್ಯಾಹ್ನ ರಾತ್ರಿ ಊಟ ಉಪಾಹಾರದ ವ್ಯವಸ್ಥೆ ಸ್ವಚ್ಚತೆಯನ್ನು ಕಾಪಾಡಿಕೊಳ್ಳುವುದಕ್ಕೆ ಪ್ರತಿನಿತ್ಯ ನೋ ಕೇಂದ್ರಗಳಿಗೆ ಭೇಟಿ ನೀಡಿ ಅಲ್ಲಿನ ಅವ್ಯವಸ್ಥೆ ಸರಿಪಡಿಸುವುದಕ್ಕೆ ಕಾರ್ಯಪ್ರವೃತ್ತರಾಗಿದ್ದಾರೆ ಎಂದರು ವೈದ್ಯರಾದ ವಸಂತ ಹೊಳೆಸಿರಿಗೆರೆ .ಸ್ಟಾಫ್ ನರ್ಸ್ ಮಂಗಳಮ್ಮ .ಪೋಲಿಸ್ ಪೇದೆ ನಾಗರಾಜ್ .ಸಿಬ್ಬಂದಿ ವರ್ಗದವರು ಇದ್ದರು