ಜೀವನ ಶೈಲಿ, ಆಹಾರ ಕ್ರಮದಿಂದ ಹೃದಯ ಕಾಪಾಡಿ: ಡಾ.ಸಿದ್ಧನಗೌಡ

ಕಲಬುರಗಿ:ಎ.26: ಹೃದಯದ ಆರೋಗ್ಯ ಕಾಪಾಡಲು ಉತ್ತಮವಾದ ಜೀವನ ಶೈಲಿ ಮತ್ತು ಆಹಾರ ಪದ್ಧತಿ ಅನುಸರಿಸುವಿಕೆ ಅತಿ ಮುಖ್ಯ ಎಂದು ಯುನೈಟೆಡ್ ಆಸ್ಪತ್ರೆಯ ಹೃದ್ರೋಗ ತಜ್ಞರಾದ ಡಾಕ್ಟರ್ ಸಿದ್ದನಗೌಡ ಮಾಲೀ ಬಿರಾದಾರ್ ಹೇಳಿದರು.

             ಕಲಬುರ್ಗಿ ಆಕಾಶವಾಣಿಯಲ್ಲಿ ಜೊತೆಜೊತೆಯಲಿ ನೇರ ಫೋನ್ ಇನ್ ಸಂವಾದದಲ್ಲಿ ಏಪ್ರಿಲ್ 26ರಂದು ಯುವಕರಲ್ಲಿ ಹೃದಯ ಕಾಯಿಲೆ ಕುರಿತಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಕೇಳುಗರ ಪ್ರಶ್ನೆಗಳಿಗೆ ಉತ್ತರಿಸಿದರು. ಒತ್ತಡ ರಹಿತ ಜೀವನ  ಮತ್ತು ಉತ್ತಮವಾದಂತಹ ಜೀವನಶೈಲಿಯನ್ನು ಅನುಸರಿಸಿ ಆರೋಗ್ಯ ಪೂರ್ಣವಾದ ಆಹಾರ ಪದ್ಧತಿಯನ್ನು ಅನುಸರಿಸುವುದರ ಮೂಲಕ ಹೃದ್ರೋಗವನ್ನು ತಡೆಯಲು ಸಾಧ್ಯ.ಧೂಮಪಾನ ತ್ಯಜಿಸುವುದು ,ಜೀವನ ಶೈಲಿ ಉತ್ತಮಗೊಳಿಸುವುದು ಹಾಗೂ ಅನುವಂಶಿಕವಾಗಿ ಹೃದ್ರೋಗ ಬರುವ ಸಾಧ್ಯತೆಗಳಿದ್ದು ಎಚ್ಚರ ವಹಿಸುವುದು, ವ್ಯಾಯಾಮ ಹಾಗೂ ಉತ್ತಮ ಆಹಾರ ಸೇವನೆಯಿಂದ ಹೃದ್ರೋಗ ಕಾಯಿಲೆ ತಡೆಯಲು ಸಾಧ್ಯವಿದೆ. ನಿರಂತರವಾದ ಪರೀಕ್ಷೆ ಕೂಡಾ ಅವಶ್ಯಕ ಎಂದು ಅವರು ಹೇಳಿದರು.
    ಈ ಸಂವಾದದಲ್ಲಿ ಕಲಬುರ್ಗಿಯ ಶ್ಯಾಮಲಾ ಶಿವಕುಮಾರ್, ಚೇತನ್ ಕುಮಾರ್ ಪ್ರವೀಣ್ ಕುಲಕರ್ಣಿ ಬಸವರಾಜ್ ಚೆನ್ನ ತಿಲಕ ನಗರದ ಭೀಮಸೇನ್ ರಾವ್ ಕುಲಕರ್ಣಿ ಕೊಪ್ಪಳದ ಯಲ್ಲಪ್ಪ ಸುರಪುರದ ರಾಘವೇಂದ್ರ ಭಕ್ರಿ, ಸಿದ್ದರಾಮ ಕಂಬಾರ ಅಫ್ಜಲ್‍ಪುರ ಪಾಲ್ಗೊಂಡರು. ಕಾರ್ಯಕ್ರಮವನ್ನು ಡಾ. ಸದಾನಂದ ಪೆರ್ಲ ನಡೆಸಿಕೊಟ್ಟರು. ಸಂಗಮೇಶ ಮತ್ತು ಲಕ್ಷ್ಮಿಕಾಂತ್ ಪಾಟೀಲ್ ನೆರವಾದರು. ಗೋವಿಂದ ಕುಲಕರ್ಣಿ ಮತ್ತು ಅನಿಲ್ ಕುಮಾರ್ ತಾಂತ್ರಿಕ ನೆರವು ನೀಡಿದರು