ಜೀವನ ವಿಜ್ಞಾನದಿಂದ ಮಾನವನ ಬದುಕು ಹಸನು

ಚಿತ್ರದುರ್ಗ.ಮೇ.೨೩: ಜೀವನ ವಿಜ್ಞಾನವು ಮಾನವ ತನ್ನ ಬದುಕನ್ನು ಹಸನು ಮಾಡಿಕೊಳ್ಳಲು ಭದ್ರ ಬುನಾದಿಯನ್ನು ಒದಗಿಸುತ್ತದೆ ಎಂದು ಡಯಟ್ ಪ್ರಾಚಾರ್ಯ ಎಂ.ನಾಸಿರುದ್ದೀನ್ ಹೇಳಿದರು. ನಗರದ ಡಯಟ್‌ನಲ್ಲಿ  ಜೀವನ ವಿಜ್ಞಾನ ಆನ್‌ಲೈನ್ ತರಬೇತಿ ದಿನಾಂಕ ವಿಸ್ತರಣೆ ಕುರಿತು ಮಾತನಾಡಿದ ಅವರು ಗುರು ಹಿರಿಯರ ಅನುಭವದ ಮಾತುಗಳು, ಮಹಾತ್ಮರ ತತ್ವಾದರ್ಶಗಳು ನಮ್ಮ ಉತ್ತಮ ಬದುಕಿಗೆ ಸಹಕಾರಿಯಾಗುತ್ತವೆ. ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆಯು (ಡಿ.ಎಸ್.ಇ.ಆರ್.ಟಿ) ಕರ್ನಾಟಕ ಜೀವನ ವಿಜ್ಞಾನ ಅಕಾಡೆಮಿ ಬೆಂಗಳೂರು ಇವರ ಸಹಯೋಗದಲ್ಲಿ ಜೀವನ ವಿಜ್ಞಾನ ಆನ್‌ಲೈನ್ ಮಾಡ್ಯೂಲ್ ಸೃಜಿಸಿದೆ. ಈ ತರಬೇತಿಯು ಜೀವನ ಕೌಶಲಗಳನ್ನು ಒಳಗೊಂಡಿದ್ದು ತರಬೇತಿ ಪಡೆಯಲು ಆಗಷ್ಟ್-20 ಅಂತಿಮ ದಿನಾಂಕವಾಗಿದ್ದು ಜಿಲ್ಲೆಯ ಸರ್ಕಾರಿ, ಅನುದಾನಿತ ಮತ್ತು ಅನುದಾನ ರಹಿತ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರು, ವಿದ್ಯಾರ್ಥಿಗಳು ಮತ್ತು ಪೋಷಕರು ಶಿಕ್ಷಣ ಇಲಾಖೆಯ ಜಿಲ್ಲಾ ಮತ್ತು ತಾಲೂಕು ಮಟ್ಟದ ಎಲ್ಲ ಅಧಿಕಾರಿ ವರ್ಗದವರು ಆನ್‌ಲೈನ್ ತರಬೇತಿ ಪಡೆಯಬೇಕೆಂದು ತಿಳಿಸಿದರು.