ಜೀವನ ರೂಪಿಸುವಲ್ಲಿ ಶಿಕ್ಷಕರ ಪಾತ್ರ ದೊಡ್ಡದು

ಚಿತ್ತಾಪುರ:ಎ.1: ತಂದೆ-ತಾಯಂದಿರು ಮಕ್ಕಳಿಗೆ ಜನ್ಮ ನೀಡಿದರೆ. ಮಕ್ಕಳ ಜೀವನ ರೂಪಿಸುವಲ್ಲಿ ಶಿಕ್ಷಕರ ಪಾತ್ರ ದೊಡ್ಡದು ಎಂದು ಕ್ಷೇತ್ರ ಸಮನ್ವಯಾಧಿಕಾರಿ ಮಲ್ಲಿಕಾರ್ಜುನ್ ಸೇಡಂ ಹೇಳಿದರು.

ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಚಿತ್ತಾಪುರ. ಹಾಗೂ ಸಮೂಹ ಸಂಪನ್ಮೂಲ ಕೇಂದ್ರ ಸಾತನೂರ. ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಆಯೋಜಿಸಲಾಗಿದ್ದ SDMC ಸಭೆ, ಕಾರ್ಯಗಾರ, ಹಾಗೂ ಬೀಳ್ಕೊಡುಗೆ ಸಮಾರಂಭ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಉತ್ತಮ ಶಿಕ್ಷಣದಿಂದ ಜೀವನದಲ್ಲಿ ಸಾರ್ಥಕತೆ ಕಂಡುಕೊಳ್ಳಬಹುದು ಮನುಷ್ಯನ ಪರಿವರ್ತನೆಗೆ ಶಿಕ್ಷಣ ಮತ್ತು ಶಿಕ್ಷಕರ ಪಾತ್ರ ಮುಖ್ಯವಾಗಿದೆ. ಹಾಗೂ ನಿವೃತ್ತಿ ಹೊಂದಿದ ರೇವಣಸಿದ್ದಪ್ಪ ರೋಣದ ಅವರ ಮುಂದಿನ ಜೀವನ ಸುಖಕರವಾಗಿರಲಿ ಎಂದರು.

ನಿವೃತ್ತ ಮುಖ್ಯಗುರುಗಳಾದ ರೇವಣಸಿದ್ದಪ್ಪ ರೋಣದ ಮಾತನಾಡಿ ಸಮಾಜದಲ್ಲಿ ಶಿಕ್ಷಣವು ಮನುಷ್ಯನನ್ನು ಮನುಷ್ಯನನ್ನಾಗಿ ಮಾಡುತ್ತದೆ. ಪ್ರತಿ ವಿದ್ಯಾರ್ಥಿಯನ್ನು ತಿದ್ದುವ ಮೂಲಕ ಅವರನ್ನು ಸಮಾಜಕ್ಕೆ ಕೊಡುಗೆಯನ್ನಾಗಿ ನೀಡಬೇಕು ಎಂದು ಕರೆ ನೀಡಿ. ಸಾತನೂರು ಶಾಲೆಗೆ ಬಂದ ಮೇಲೆ ದಸೆ ಹತ್ತಿತು. ಹೇಗೆಂದರೆ ಗುಲ್ಬರ್ಗದಲ್ಲಿ ಮನೆ ಖರೀದಿಸಿದೆ, ಅಷ್ಟೇ ಅಲ್ಲದೆ ಗ್ರಾಮದಲ್ಲಿ ನನ್ನ ಸಂಬಂಧಿಕರ ಇದ್ದರು. ಗ್ರಾಮದವರ ಮಾರ್ಗದರ್ಶನ ಸಿಕ್ಕಿತ್ತು. ಯಾವುದೇ ಕಷ್ಟ ಬರಲಿಲ್ಲ ಎಲ್ಲರ ಪ್ರೀತಿ ವಿಶ್ವಾಸ ಸಿಕ್ಕಿತ್ತು.

ನನ್ನ 38 ವರ್ಷದ ಶಿಕ್ಷಣ ಕ್ಷೇತ್ರದಲ್ಲಿ ಸೇವೆ ಸಲ್ಲಿಸಲು ಪಕ್ಷವಾಗಿ ಹಾಗೂ ಪರೋಕ್ಷವಾಗಿ ಸಹಾಯ-ಸಹಕಾರ ಮಾಡಿದವರಿಗೆ ಧನ್ಯವಾದಗಳು ಸಲ್ಲಿಸಿದರು.

ಈ ವೇಳೆಯಲ್ಲಿ ಮುಖ್ಯಗುರುಗಳಾದ ಮಹೇಬೂಬ್ ಪಟೇಲ್, ಸಿಆರಸಿ ಸಂತೋಷ್ ಕುಮಾರ, ನೌಕರರ ಸಂಘದ ಅಧ್ಯಕ್ಷ ಬಸವರಾಜ್ ಬಳಂಡಗಿ,ಗ್ರಾಪಂ ಅಧ್ಯಕ್ಷ ಮಹಿಪಾಲ್, ಶಿಕ್ಷಕರ ಸಂಘದ ಅಧ್ಯಕ್ಷ ಶಿವಾನಂದ ನಲವಾರ, ನೂತನ SDMC ಅಧ್ಯಕ್ಷ ಚಂದ್ರಶೇಖರ ಅವಂಟಿ, ಸಿದ್ರಾಮಯ್ಯ, ಅಬ್ದುಲ್ ಸಲೀಂ, ಬಸಯ್ಯಸ್ವಾಮಿ ಸ್ಥಾವರಮಠ, ಮೌನೇಶ್ ಕರದಾಳ, ಶ್ರೀಧರ್ ರಾಠೋಡ್, ಮಲ್ಲನಗೌಡ ಪಾಟೀಲ್, ಮಹೇಶ್, ನಾಗಪ್ಪ, ಭೀಮರಾಯ, ಶ್ರೀಮತಿ ಸುರೇಖಾ, ಸವಿತಾ, ಅಕ್ಕಮಹಾದೇವಿ, ಲಕ್ಷ್ಮಿ, ಇಂದ್ರಮ್ಮ, ಮಾಯಾದೇವಿ ರೋಣದ, ಸೇರಿದಂತೆ ಇತರರಿದ್ದರು.