ಜೀವನ ಮೌಲ್ಯದ ಸಂದೇಶ ರಾಮಾಯಾಣ: ಡಾ. ಗೊರೆಬಾಳ


ಧಾರವಾಡ ನ.2-ಆದಿಕವಿ ರಚಿಸಿದ ರಾಮಾಯಣವು ಅನೇಕ ಸಾಹಿತಿಗಳಿಗೆ ಮಾರ್ಗದರ್ಶನ ಗ್ರಂಥವಾಗಿದೆ ಎಂದು ಡಾ. ಶರಣಮ್ಮಾ ಗೊರೆಬಾಳ, ಪ್ರಾಂಶುಪಾಲರು, ವಿದ್ಯಾರಣ್ಯ ಪದವಿಪೂರ್ವ ಮಹಾವಿದ್ಯಾಲಯ, ಧಾರವಾಡ ಇವರು ಕೃಷಿ ವಿಶ್ವವಿದ್ಯಾಲಯ ಧಾರವಾಡದಲ್ಲಿ ಆಚರಿಸಲಾದ ಮಹರ್ಷಿ ವಾಲ್ಮೀಕಿ ಜಯಂತ್ಯೋತ್ಸವಕ್ಕೆ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು. ವಾಲ್ಮೀಕಿಯವರ ರತ್ನಾಕರದಿಂದ ಮಹರ್ಷಿಗಳಾಗಿ ರೂಪಗೊಂಡ ಬಗೆಯನ್ನು ಸಂಕ್ಷಿಪ್ತವಾಗಿ ವಿವರಿಸಿದರು. ರಾಮಾಯಣದಿಂದ ಎಲ್ಲರೂ ಕಲಿಯಬಹುದಾದ ಜೀವನ ಮೌಲ್ಯಗಳ ಬಗ್ಗೆ ಒತ್ತಿ ಹೇಳಿದರು “ದುಷ್ಟರಿಗೆ ಶಿಕ್ಷೆ ಹಾಗೂ ಶಿಷ್ಟರಿಗೆ ರಕ್ಷಣೆ” ಇದು ರಾಮಾಯಣದಿಂದ ನೀತಿ ಪಾಠ ಎಂದು ವಿವರಿಸಿದರು. ವಾಲ್ಮೀಕಿ ಜನಾಂಗವು ಶೌರ್ಯ, ವೀರ ಗುಣಗಳಿಗೆ ಖ್ಯಾತಿ ಹೊಂದಿದ್ದಾಗಿದೆ. ಈ ಕಾರ್ಯಕ್ರಮವು ಆಚರಣೆಗೆ ಸೀಮಿತವಾಗದೆ ನಿಜ ಜೀವನದಲ್ಲಿ ಎಲ್ಲರೂ ಮಹರ್ಷಿ ವಾಲ್ಮೀಕಿಯವರ ಮೌಲ್ಯಗಳನ್ನು ಅಳವಡಿಸಿಕೊಳ್ಳಲು ಕರೆ ಕೊಟ್ಟರು. ವಾಲ್ಮೀಕಿ ಗೋಷ್ಠಿ, ವಿಚಾರ ಸರಣಿ ಏರ್ಪಡಿಸಿದರೆ ಅದರಿಂದ ಕಲಿಯಬಹುದಾದ ಮೌಲ್ಯಗಳನ್ನು ಹೆಚ್ಚು ಜನ ಅಳವಡಿಸಿಕೊಳ್ಳುವಂತಾಗಲಿ ಎಂದು ಹಾರೈಸಿದರು.
ವಾಲ್ಮೀಕಿ ಜಯಂತಿ ಕಾರ್ಯಕ್ರಮದ ಘನ ಅಧ್ಯಕ್ಷತೆ ವಹಿಸಿದ ಕೃ.ವಿ.ವಿ., ಧಾರವಾಡದ ಮಾನ್ಯ ಕುಲಪತಿಗಳಾದ ಡಾ. ಮಹಾದೇವ ಬ. ಚೆಟ್ಟಿ, ಇವರು ಎಲ್ಲರಿಗೂ ಸಂಸ್ಕøತ ಮಹಾನ್ ಗ್ರಂಥವನ್ನು ಶ್ಲೋಕವನ್ನು ಆಗಿನ ಕಾಲಕ್ಕೆ ರಚಿಸಿದ ಮಹರ್ಷಿಯವರ ಜ್ಞಾನದ ಬಗ್ಗೆ ಪ್ರಶಂಶಿಸುತ್ತಾ, ನಾವೆಲ್ಲರೂ ಆತ್ಮಾವಲೋಕ ಮಾಡಿಕೊಂಡು, ಅತ್ಯುತ್ತಮದ ಜೀವನದ ಮೌಲ್ಯಗಳನ್ನು ಅಳವಡಿಸಿಕೊಳ್ಳುವುದು ಸೂಕ್ತ. ಈ ಕಾರ್ಯಕ್ರಮದ ಅಂಗವಾಗಿ, ವಿದ್ಯಾರ್ಥಿಗಳೊಂದಿಗೆ ವಾಲ್ಮೀಕಿಯವರ ವಿಚಾರ ಗೋಷ್ಠಿ ನಡೆಸುವುದಾಗಿ ತಿಳಿಸಿದರು. ಅಲ್ಲದೇ ಅಕ್ಟೋಬರ್ 31, ಶ್ರೀಯುತ ಸರ್ದಾರವಲ್ಲಬಾಯಿ ಪಟೇಲರು, ರಾಷ್ಟ್ರೀಯ ಏಕತೆ ಸಾರ್ವಭೌಮತ್ವವನ್ನು ರೂಪಿಸಿದ ಶಿಲ್ಪಿ ಎಂದು ರಾಷ್ಟ್ರೀಯ ಏಕತಾ ದಿನದ ಮಹತ್ವವನ್ನು ತಿಳಿಸಿದರು. ಈ ಕಾರ್ಯಕ್ರಮದಲ್ಲಿ ಕೃ.ವಿ.ವಿ., ಧಾರವಾಡದ ವಿವಿಧ ಸಂಘಗಳ ಪದಾಧಿಕಾರಿಗಳು ಹಾಗೂ ಸಿಬ್ಬಂಧಿ ಭಾಗವಹಿಸಿದ್ದರು. ಕುಲಸಚಿವರಾದ ಡಾ. ವಿ. ಆರ್. ಕಿರೇಸೂರವರು ಸ್ವಾಗತಿಸಿದರು ಮತ್ತು ಶಿಕ್ಷಣ ನಿರ್ದೇಶಕರಾದ ಡಾ. ಎಸ್. ಬಿ. ಹೊಸಮನಿಯವರು ವಂದಿಸಿದರು.