ಜೀವನ ಪ್ರಮಾಣ ಪತ್ರ ಸಲ್ಲಿಕೆ ಕಡ್ಡಾಯ

ಕಲಬುರಗಿ,ನ.7-ಭವಿಷ್ಯ ನಿಧಿ ಪಿಂಚಣಿದಾರರು ಪ್ರತಿ ವರ್ಷ ಜೀವನ ಪ್ರಮಾಣ ಪತ್ರ ಸಲ್ಲಿಸುವುದು ಕಡ್ಡಾಯವಾಗಿದೆ. ಇದಕ್ಕಾಗಿ ಪಿಂಚಣಿದಾರರು ಭವಿಷ್ಯ ನಿಧಿ ಕಛೇರಿಗೆ ಹಾಗೂ ಬ್ಯಾಂಕುಗಳಿಗೆ ಪ್ರಯಾಣಿಸುವ ಅಗತ್ಯವಿಲ್ಲ. ಈ ಸೇವೆಯನ್ನು ಪಡೆಯಲು ಪಿಂಚಣಿದಾರರು ತಮಗೆ ಹತ್ತಿರದ ಅಂಚೆ‌ ಕಛೇರಿಗೆ ಭೇಟಿ ನೀಡಿ ಜೀವನ ಪ್ರಮಾಣ ‌ ಪತ್ರವನ್ನು ಸಲ್ಲಿಸಬಹುದು. ಇನ್ನು ಮುಂದೆ ಮನೆ ಬಾಗಿಲಿಗೆ ಟಪಾಲು ತರುವ ಪೋಸ್ಟ್ ಮ್ಯಾನ್ ಕೂಡ ಭವಿಷ್ಯ ನಿಧಿ ಪಿಂಚಣಿದಾರರ ಆಧಾರ ಆಧಾರಿತ ಬಯೋಮೆಟ್ರಿಕ್ ಡಿಜಿಟಲ್ ಜೀವನ ಪ್ರಮಾಣ ಪತ್ರವನ್ನು ಪಡೆಯಲಿದ್ದಾರೆ ಎಂದು ಕಲಬುರಗಿ ಕಛೇರಿಯ ಪ್ರಾದೇಶಿಕ ಭವಿಷ್ಯ ನಿಧಿ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಪಿಂಚಣಿದಾರರು ತಪ್ಪದೇ ತಮ್ಮ ಆಧಾರ ಸಂಖ್ಯೆ, ಬ್ಯಾಂಕ್ ಅಕೌಂಟ್ ನಂಬರ್, ಪಿ.ಪಿ.ಓ ನಂಬರ್ ಹಾಗೂ ಮೊಬೈಲ್ ನಂಬರ್ ಹೊಂದಿರಬೇಕು. ಹೆಚ್ಚಿನ ಮಾಹಿತಿಗಾಗಿ ನಮ್ಮ ಕಛೇರಿಯ ಸಹಾಯವಾಣಿ 08472-273204 & 273205 ಸಂಪರ್ಕಿಸಬಹುದು.