ಜೀವನ ದರ್ಶನ ಪ್ರವಚನ ಕಾರ್ಯಕ್ರಮ

ಹುಣಸಗಿ,ಜು.12-ತಾಲ್ಲೂಕಿನ ಬಾಚಿಮಟ್ಟಿ ಗ್ರಾಮದಲ್ಲಿ ಲಿಂ. ವಿರಯ್ಯ ಸ್ವಾಮಿಗಳ 13ನೇ ವರ್ಷದ ಪೂಣ್ಯಸ್ಮರಣೆ ಅಂಗವಾಗಿ ಹಮ್ಮಿಕೊಂಡಿದ್ದ ಜೀವನ ದರ್ಶನ ಪ್ರವಚನ ಕಾರ್ಯಕ್ರಮವನ್ನು ನಗನೂರಿನ ಸುಗೂರೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ಜ್ಯೋತಿ ಬೆಳಗಿಸುವ ಮುಖಾಂತರ ಉದ್ಘಾಟಿಸಿದರು.
ಈ ವೇಳೆ ಆಶೀರ್ವಚನ ನೀಡಿದ ಅವರು, ಮಾನವ ಜೀವನ ಸಾಫಲ್ಯ ಆಗಬೇಕಾದರೆ ಇಂತಹ ಪ್ರವಚನ, ಸಂತ್ಸಂಗ ದಲ್ಲಿ ಮಾತ್ರ ಸಾಧ್ಯ. ಇಂತಹ ಕಾರ್ಯವನ್ನು ಕೈಗೆತ್ತಿಕೋಂಡಿರುವ ವಿರಯ್ಯ ಸ್ವಾಮಿಗಳ ಕುಟುಂಬವನ್ನು ಶ್ಲಾಘಿಸಿದರು.
ಲಿಂ.ವಿರಯ್ಯ ಸ್ವಾಮಿಗಳು ಸಂಕಷ್ಟದ ಸಮಯದಲ್ಲಿ ನಮಗೂ ಕೂಡ ಮಾರ್ಗದರ್ಶನ ನೀಡಿದ್ದಾರೆ ಎಂದು ನಡನಪಿಸಿಕೊಂಡರು.
ಬಸವ ರಾಜೇಂದ್ರ ಶರಣರು ಪ್ರವಚನ ನೀಡಿದರು. ಸಿದ್ದಲಿಂಗಯ್ಯ ಶಾಸ್ತ್ರಿಗಳು ನೇತೃತ್ವವಹಿಸಿದ್ದರು. ದೇವಿಂದ್ರಕುಮಾರ ಕಕ್ಕಳವಾಲಿ ಸಂಗೀತ ಸೇವೆ ಒದಗಿಸಿದರು. ಈಶ್ವರ ಬಡಿಗೇರ ತಬಲಾ ಸಾಥ್ ನೀಡಿದರು.ಸಕಲ ಬಾಚಿಮಟ್ಟಿ ಗ್ರಾಮಸ್ಥರು ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.