ಬೀದರ:ಮಾ.29: ನಗರದ ನೌಬಾದ ಹತ್ತಿರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಬೀದರನಲ್ಲಿ ಐ.ಕ್ಯೂ.ಎ.ಸಿ ಮತ್ತು ಎನ್.ಎಸ್.ಎಸ್. ಘಟಕ ಒಂದು ಮತ್ತು ಎರಡು ಹಾಗೂ ಯುವ ಸ್ಪಂದನ ಬೀದರ, ಇವರ ಸಂಯುಕ್ತಾಶ್ರಯದಲ್ಲಿ ಇಂದು ಜೀವನ ಕೌಶಲ್ಯ ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಈ ಕಾರ್ಯಕ್ರಮವನ್ನು ಡಾ. ನಾಗರಾಜ ಕ್ಷೇತ್ರ ಸಂಪರ್ಕಾಧಿಕಾರಿಗಳು ನಿಮ್ಹಾನ್ಸ ಬೆಂಗಳೂರು ಅವರು ಉದ್ಘಾಟಿಸಿದರು. ಇವರು ಉದ್ಘಾಟನಾ ನುಡಿಯಲ್ಲಿ ಇವತ್ತಿನ ಒತ್ತಡದ ಜೀವನದಲ್ಲಿ ಜೀವನ ಕೌಶಲ್ಯಗಳ ಅವಶ್ಯಕತೆ ಹಾಗೂ ವಿದ್ಯಾರ್ಥಿ ಜೀವನದಲ್ಲಿ ಏಕಾಗ್ರತೆಯ ಮಹತ್ವದ ಕುರಿತು ಮಾತನಾಡಿದರು. ಡಾ. ಶರಣಪ್ಪಾ ಎಸ್.ಎಮ್ ಸ್ನಾತಕೋತ್ತರ ವಾಣಿಜ್ಯ ವಿಭಾಗ ಮುಖ್ಯಸ್ಥರು ಕಾರ್ಯಕ್ರಮದಲ್ಲಿ ಮಾತನಾಡಿ ಯುವಕರಿಗೆ ಜೀವನ ಕೌಶಲ್ಯಗಳು ಅತಿ ಅವಶ್ಯಕ ಎಂದು ಹೇಳಿದರು. ರಾಷ್ಟ್ರೀಯ ಸೇವಾ ಯೋಜನೆಯ ಅಧಿಕಾರಿಯಾದ ಡಾ. ಶೀಲಾ ಎನ್.ಎಸ್ ಅವರು ಇತ್ತೀಚಿಗೆ ನಿಮ್ಹಾನ್ಸ್ ಬೆಂಗಳೂರುನಲ್ಲಿ ಜೀವನ ಕೌಶಲ್ಯ ತರಬೇತಿಯನ್ನು ಮಾಡಿರುತ್ತಾರೆ. ಪ್ರತಿಯೊಬ್ಬರು ಜೀವನದಲ್ಲಿ ಜೀವನ ಕೌಶಲ್ಯಗಳು ವ್ಯಕ್ತಿತ್ವ ವಿಕಸನಕ್ಕೆ ಬಹಳ ಅಗತ್ಯವಾದದ್ದು ಎಂದು ತಿಳಿಸಿದ್ದರು.
ತಮ್ಮ ಅಧ್ಯಕ್ಷಿಯ ಭಾಷಣದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಗಂಗಾಧರ ಕೋರಿ ಅವರು ಇಂತಹ ಕಾರ್ಯಕ್ರಮಗಳು ವಿದ್ಯಾರ್ಥಿಗಳು ಹಾಗೂ ಒತ್ತಡದ ಜೀವನದಲ್ಲಿ ಬದುಕುತಿರುವ ನಮ್ಮೆಲ್ಲರಿಗೆ ಉಪಯುಕ್ತ ಎಂದು ತಿಳಿಸಿದರು. ಬೀದರಿನ ಯುವ ಸ್ಪಂದನ ಕಛೇರಿಯಿಂದ ಶ್ರೀಮತಿ. ಜೈಯಶ್ರೀ ಯವರು ಭಾಗವಹಿಸಿದರು. ಡಾ. ನಾಗರಾಜ ಅವರ ನೇತೃತ್ವದಲ್ಲಿ ಜೀವನ ಕೌಶಲ್ಯ ತರಬೇತಿಯನ್ನು ನಡೆಸಲಾಯಿತು. ನಿಮ್ಹಾನ್ಸದಲ್ಲಿ ತರಬೇತಿಯನ್ನು ಮಾಡಿರುವ ಅರುಣ ಕಲ್ಯಾಣರಾವ ಬಿ.ಕಾಂ 5ನೇ ಸೆಮಿಸ್ಟರ್ ವಿದ್ಯಾರ್ಥಿ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಶ್ರೀಮತಿ ಪಾಳೆದ ಮಹೇಶ್ವರಿ ಮುಖ್ಯಸ್ಥರು ರಾಸಾಯನಶಾಸ್ತ್ರ ವಿಭಾಗ, ಅತಿಥಿಗಳಿಗೆ ಸ್ವಾಗತವನ್ನು ಕೋರಿದರು. ಡಾ. ನಗ್ಮಾ ಸೋಣಾ ಸಹಾಯಕ ಪ್ರಾಧ್ಯಾಪಕರು, ವಾಣಿಜ್ಯ ವಿಭಾಗ ಪ್ರಾಸ್ತಾವಿಕ ಮಾತನಾಡಿದರು. ಶ್ರೀಮತಿ ಸುಮನ ಶಿಂಧೆ ಸಹಾಯಕ ಪ್ರಾಧ್ಯಾಪಕರು ಇತಿಹಾಸ ವಿಭಾಗ ಕಾರ್ಯಕ್ರಮ ನಿರುಪಣೆ ಹಾಗೂ ವಂದನಾರ್ಪಣೆ ನಡೆಸಿಕೊಟ್ಟರು. ಸೂರ್ಯಕಾಂತ ಬಿ.ಎ. 5ನೇ ಸೆಮಿಸ್ಟರ್ ಪ್ರಾರ್ಥನೆ ಗೀತೆಯನ್ನು ನಡೆಸಿಕೊಟ್ಟರು. ರಾಷ್ಟ್ರೀಯ ಸೇವಾ ಯೋಜನೆ ಸ್ವಯಂ ಸೇವಕರು ಹಾಗೂ ಕಾಲೇಜಿನ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಯವರು ಕಾರ್ಯಕ್ರಮದಲ್ಲಿ ಭಾಗವಹಿಸಿದರು.