ಜೀವನೋತ್ಸಾಹದಿಂದ ಬದುಕಿನಲ್ಲಿ ಪ್ರಗತಿ

ಸಂಜೆವಾಣಿ ನ್ಯೂಸ್
ಮೈಸೂರು.ಮೇ.25:- ಜೀವನೋತ್ಸಾಹದಿಂದ ಮಾತ್ರ ಬದುಕಿನಲ್ಲಿ ಪ್ರಗತಿ ಸಾಧಿಸಲು ಸಾಧ್ಯವಾಗಲಿದೆ ಎಂದು ಹಿರಿಯ ಪತ್ರಕರ್ತ ಕೆ.ನರಸಿಂಹಮೂರ್ತಿ ತಿಳಿಸಿದರು.
ನಗರದ ನಟರಾಜ ಮಹಿಳಾ ವಸತಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ವಿಭಾಗದ ವತಿಯಿಂದ ಕನ್ನಡ ವಿಭಾಗ, ಸಾಹಿತ್ಯ ಸಂಭ್ರಮ-2024 ಕನ್ನಡ ಸಾಹಿತ್ಯ ಮತ್ತು ವರ್ತಮಾನ ವಿಚಾರ ಸಂಕಿರಣ ವಿದ್ಯಾರ್ಥಿನಿಯರಿಂದ ಪ್ರಬಂಧ ಮಂಡನೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಕಲಿಕೆಯ ಜತೆಗೆ ವಿದ್ಯಾರ್ಥಿನಿಯರ ವ್ಯಕ್ತಿತ್ವದ ಬೆಳವಣಿಗೆಗೆ ಪ್ರತಿ ಕಾಲೇಜು ಆದ್ಯತೆ ಕೊಡಬೇಕು. ಸಾಹಿತ್ಯದ ವಿದ್ಯಾರ್ಥಿನಿಯರನ್ನು ಇತರ ವಿದ್ಯಾರ್ಥಿನಿಯರೊಂದಿಗೆ ಹೋಲಿಕೆ ಮಾಡಿದಾಗ ವಿಶೇಷ ಗುಣಗಳನ್ನು ಹೊಂದಿರುತ್ತಾರೆ ಎಂದರು.
ಸಾಹಿತ್ಯ ವಿಭಿನ್ನ ದೃಷ್ಟಿಕೋನ ಹೊಂದಿದ್ದು ವಿಶಿಷ್ಟ ಅಭಿರುಚಿ ಬೆಳೆಸುತ್ತದೆ. ಭಾರತೀಯ ಭಾಷೆಗಳ ಅಧ್ಯಯನ ಸಾಹಿತ್ಯ ವಿದ್ಯಾರ್ಥಿನಿಯರಿಗೆ ಮುಖ್ಯವಾಗಿದೆ. ಜಾಗತಿಕ ಸಾಹಿತ್ಯ ಅಧ್ಯಯನದ ಕಡೆಗೂ ಗಮನ ಕೊಡಬೇಕು ಎಂದು ತಿಳಿಸಿದರು.
ಸಾಹಿತ್ಯ ತಮ್ಮ ಅಭಿವ್ಯಕ್ತಿಗೆ ಕಾರಣವಾಗಲಿದೆ. ಯಾವುದೇ ಸಾಹಿತ್ಯವನ್ನು ಅಧ್ಯಯನ ಮಾಡಿದಾಗ ವರ್ತಮಾನಕ್ಕೆ ಅನುಸಂಧಾನಗೊಳಿಸುವ ಸಾಮರ್ಥ್ಯ ರೂಢಿಸಿಕೊಳ್ಳಬೇಕು. ಇಂದಿನ ಸ್ಪರ್ಧಾತ್ಮಕ ಜಗತ್ತಿಗೆ ಸಂವಹನ ಕೌಶಲ ಬಹಳ ಮುಖ್ಯವಾಗಿದೆ. ಆ ಮೂಲಕ ಜಾಗತಿಕ ಸಾಹಿತ್ಯ ಅರಿತುಕೊಳ್ಳಲು ಸಾಧ್ಯ ಎಂದರು.
ಕಾರ್ಯಕ್ರಮದಲ್ಲಿ ಶ್ರೀ ನಟರಾಜ ಪ್ರತಿಷ್ಠಾನದ ವಿಶೇಷಾಧಿಕಾರಿ ಪೆÇ್ರ.ಎಸ್.ಶಿವರಾಜಪ್ಪ, ಕಾಲೇಜಿನ ಪ್ರಾಂಶುಪಾಲೆ ಡಾ.ಎಂ.ಶಾರದ, ಉಪ ಪ್ರಾಂಶುಪಾಲ ಡಾ.ಜಿ.ಪ್ರಸಾದ ಮೂರ್ತಿ, ಸಾಂಸ್ಕೃತಿಕ ಸಮಿತಿಯ ಸಂಚಾಲಕಿ ಎಂ.ಎಸ್.ಸಂಧ್ಯಾರಾಣಿ ಹಾಜರಿದ್ದರು. ಮಧು ಮತ್ತು ವಚನ ಗಾಯನ ಮಾಡಿದರು. ಬಿ.ಎಸ್.ಮೇಘ ಸ್ವಾಗತಿಸಿದರು. ಟಿ.ಎನ್.ನಿಹಾರಿಕಾ ನಿರೂಪಿಸಿದರೇ ಗಗನ ವಂದಿಸಿದರು.