ಜೀವನಾನುಭವ ಅಕ್ಷರ ರೂಪದಲ್ಲಿ ಇಡುವುದೇ ಕಥೆ : ಖೂಬಾ

ಹುಮನಾಬಾದ,ಜು.28-ಕಥೆಗಳು ವಾಸ್ತವಿಕವಾಗಿ ಮೂಡಬೇಕು, ಭಾಷೆ, ವಸ್ತು ಆಯ್ಕೆ ಮಾಡಿಕೊಂಡು ಜೀವನಾನುಭವ ಅಕ್ಷರ ಮೂಲಕ ರಚಿಸುವುದೇ ಕಥೆ ಎಂದು ಹಿರಿಯ ಕಥೆಗಾರ ಬಿ.ಎಸ್.ಖೂಬಾ ನುಡಿದರು.
ಗಡವಂತಿಯ ಸರಕಾರಿ ಪ್ರೌಢ ಶಾಲೆಯಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ನವದೆಹಲಿ ಮತ್ತು ಕರ್ನಾಟಕ ಜಾನಪದ ಪರಿಷತ್ತಿನ ಸಹಯೋಗದಲ್ಲಿ ಗ್ರಾಮ ಲೋಕ-ಕಾರ್ಯಕ್ರಮದಲ್ಲಿ ದಲಿತ ಕಥೆ: ಓದು-ವಿಮರ್ಶೆ ವಿಚಾರ ಸಂಕಿರಣದ ಅಧ್ಯಕ್ಷತೆ ವಹಿಸಿ ಮಾತನಾಡಿ, ಕಥೆಗಳು ಜೀವನ,ಪರಿಸರದ ಚಿತ್ರಣ ನೀಡಬೇಕೆಂದರು.
ಪ್ರಾಸ್ತಾವಿಕ ಮಾತನಾಡಿದ ಕೇಂದ್ರ ಸಾಹಿತ್ಯ ಅಕಾಡೆಮಿಯ ಕನ್ನಡ ಸಲಹಾ ಸಮಿತಿ ಸದಸ್ಯೆ ಡಾ.ಜಯದೇವಿ ಗಾಯಕವಾಡ ಅಕಾಡೆಮಿ ಕೇವಲ ಪ್ರಶಸ್ತಿ, ಪುಸ್ತಕ ಪ್ರಕಟಿಸುವ ಜೊತೆಗೆ ಗ್ರಾಮ ಲೋಕದ ಮೂಲಕ ಜನಸಾಮಾನ್ಯರ ಜನರಿಗೆ ತಲುಪಿಸುವ ಕೆಲಸ ನಡೆಯಲಿದೆ ಎಂದರು.
ದೇವನೂರು ಮಹಾದೇವರ ಅಮಾಸದಲ್ಲಿ ದಲಿತ ಅಸ್ಮಿತೆ, ಬದುಕನ್ನು ನಿರೂಪಿಸುತ್ತದೆ. ಕತ್ತಲೆಯಿಂದ ಬೆಳಕಿನಡೆಗೆ ಕೊಂಡೊಯ್ಯವುದಾಗಿದೆ ಎಂದು ಯುವ ಲೇಖಕ ಡಾ.ವಿಜಯಕುಮಾರ ಬೀಳಗಿ ಹೇಳಿದರು. ಡಾ.ಹನುಮಂತರಾವ್ ದೊಡ್ಡಮನಿಯವರ ಶ್ಯಾರಿ ಶ್ಯಾಣೆಯಾದಾಗ ಕಥೆ ದಲಿತ ಲೋಕದ ಹೆಣ್ಣು ದೈಹಿಕ ಮತ್ತು ಬೌದ್ದಿಕ ಸಂಕೇತ. ಮುತ್ತುಕಟ್ಟುವುದು, ಹೆಣ್ಣಿನ ವಾಸ್ತವ ಚಿತ್ರವಿದೆ ಎಂದು ಕನ್ನಡ ಪ್ರಾಧ್ಯಾಪಕಿ ಡಾ.ಮಹಾದೇವಿ ಹೆಬ್ಬಾಳೆ ಹೇಳಿದರು. ಡಾ.ಭೀಮಾಶಂಕರ ಬಿರಾದಾರ ಅವರು ಡಾ.ಎಚ್.ಟಿ.ಪೆÇೀತೆಯವರ ಅನೇಕಲವ್ಯ ಕಥೆ ವರ್ಗ, ವರ್ಣ, ಶೋಷಣೆ ಉಳ್ಳವರ ದಮನಿತರ ಪ್ರತಿಬಿಂಬಿಸುತ್ತದೆ ಎಂದು ಯುವ ವಿಮರ್ಶಕ ಡಾ.ಭೀಮಾಶಂಕರ ಬಿರಾದಾರ ನುಡಿದರು. ಡಾ.ಅನಸೂಯಾ ಕಾಂಬಳೆ ಅವರ ಹರಿದಪತ್ರ ಮಹಿಳಾ ಸ್ವಾತಂತ್ರ್ಯ ಹತ್ತಿಕ್ಕುವ ವಿಷಯ ಕಥೆಗಳಲ್ಲಿದೆ ಎಂದು ಯುವ ಕಥೆಗಾರ ಡಾ.ಸಂಗಪ್ಪ ತೌಡಿ ಹೇಳಿದರು.
ಮುಖ್ಯಗುರುಗಳಾದ ಮಾಣಿಕರಾವ್ ಪಾಂಚಾಳರು ಮಾತನಾಡಿ ಇಂತಹ ಕಾರ್ಯಕ್ರಮ ವಿದ್ಯಾರ್ಥಿಗಳಿಗೆ ಅವಶ್ಯ ಮನಮುಟ್ಟುತ್ತವೆ ಎಂದರು.
ಪ್ರಾರ್ಥನಾ ಗೀತೆಯನ್ನು ವಿಷ್ಣುವರ್ಧನ ಮಾರ ಪಳ್ಳಿ, ಕಜಾಪ ಅಧ್ಯಕ್ಷ ಶರದಕುಮಾರ ನಾರಾಯಣಪೇ ಟ್ಕರ್ ಸ್ವಾಗತಿಸಿದರು ಧರಿನಾಡು ಕನ್ನಡ ಸಂಘದ ಅಧ್ಯಕ್ಷ ಸಿದ್ದಾರ್ಥ ಮಿತ್ರಾ ನಿರೂಪಿಸಿದರು ದಸಾಪ ಅಧ್ಯಕ್ಷ ಶಿವರಾಜ ಡಿ.ಮೇತ್ರೆ ವಂದಿಸಿದರು.ವೀರಂತ ರೆಡ್ಡಿ ಜಂಪಾ,ಗುಂಡಪ್ಪ ದೊಡ್ಮನಿ,ಸುಭಾಷ ಪಾಟೀಲ, ಜಾಕೀಯಮೀಯಾ, ಚಂದ್ರಕಾಂತ ಅಂಬಲಗೆ,ವಿಜ ಯಕುಮಾರ ಚೆಟ್ಟಿ,ಇತರರು ಇದ್ದರು.