ಜೀವನವು ಕತ್ತಲೆಯಿಂದ ಬೆಳಕಿನಡಿಗೆ ಸಾಗಲಿ-ಟಿ.ಕೆ.ನಟರಾಜ್

ಕೋಲಾರ,ಜ,೨- ಹಣತೆಯ ಬೆಳಕಿನಂತೆ ನಿಮ್ಮ ಜೀವನವೂ ಕತ್ತಲೆಯಿಂದ ಬೆಳಕಿನೆಡೆಗೆ ಸಾಗಬೇಕು. ಪದವಿ ಮುಗಿದ ನಂತರ ಭವಿಷ್ಯದಲ್ಲಿ ಎದುರಾಗುವ ಒತ್ತಡಗಳನ್ನು ನಿಯಂತ್ರಿಸಲು ಸಿದ್ದರಾಗ ಬೇಕಾಗಿದೆ. ಇದುವರೆಗೂ ನಿಮಗೆ ತಂದೆ, ತಾಯಿ ಆಸರೆಯಾಗಿದ್ದರು. ಇನ್ನು ಮುಂದೆ ಅವರಿಗೆ ನೀವು ಅಸರೆಯಾಗ ಬೇಕೆಂದು ರಾಜ್ಯಶಾಸ್ತ್ರ ಅಧ್ಯಾಪಕ ಟಿ.ಕೆ.ನಟರಾಜ್ ಕಿವಿ ಮಾತು ತಿಳಿಸಿದರು.
ನಗರದ ಸಹ್ಯಾದ್ರಿ ಪದವಿ ಕಾಲೇಜಿನಲ್ಲಿ ಆಯೋಜಿಸಿದ್ದ ಪದವಿ ಪ್ರಧಾನ ಸಮಾರಂಭವನ್ನು ಉದ್ಘಾಟಿಸಿದ ಅವರು ಉಪನಿಷತ್ತುಗಳ ಬಗ್ಗೆ ಮಾಹಿತಿ ನೀಡಿದರು.
ನಿರ್ಮಿತಿ ಕೇಂದ್ರದ ಅಧ್ಯಕ್ಷ ಡಾ.ಕೆ.ಎನ್ ನಾರಾಯಣಗೌಡ ಮಾತನಾಡಿ, ನೀವು ಬೇರೆಯವರಿಗೆ ವೃತ್ತಿ ನೀಡಬೇಕು. ನೀವು ಬೇರೆಯವರ ಬಳಿ ವೃತ್ತಿಯನ್ನು ಪಡೆಯುವುದಲ್ಲ. ಈ ಸಮಾಜಕ್ಕೆ ಏನಾದರೂ ಕೊಡುಗೆ ನೀಡಲು ಅದರ್ಶ ವ್ಯಕ್ತಿಗಳನ್ನು ಅನುಸರಿಸಿ ಜೀವನ ರೂಪಿಸಬೇಕೆಂದರು.
ಸಹ್ಯಾದ್ರಿ ಪದವಿ ಕಾಲೇಜಿನ ಅಧ್ಯಕ್ಷ ಎಂ.ಉದಯಕುಮಾರ್ ತಿಳಿಸಿದರು.ವಿದ್ಯಾರ್ಥಿಗಳು ಸಂಸ್ಕಾರವನ್ನು ಅರಿಯಬೇಕು. ಅಂಗ್ಲ ಭಾಷೆ ಅರಿತ ಪಂಡಿತರಿಂದ ಯಾವ ಸಾಧನೆಗಳಿಲ್ಲ. ಕುವೆಂಪು, ವಿಶ್ವೇಶ್ವರಯ್ಯ ಅಂತಹವರು ಕನ್ನಡ ಮಾಧ್ಯಮದಿಂದ ಬಂದು ಪ್ರಪಂಚಕ್ಕೆ ಮಾದರಿಯಾಗಿದ್ದಾರೆ. ಅವರಂತೆ ನೀವಾಗ ಬೇಕೆಂದು ಕರೆ ನೀಡಿದರು,
ಕಾರ್ಯಕ್ರಮದಲ್ಲಿ ಹಾಪ್‌ಕಾಮ್ಸ್‌ನ ಲೆಕ್ಕಿಗ ವೆಂಕಟಸ್ವಾಮಿ, ಕನ್ನಡ ಉಪನ್ಯಾಸಕ ಸಿ.ಮುನಿಶಾಮಪ್ಪ ನಿರೂಪಿಸಿ, ಆಶ್ರಿತ್‌ರಾವ್ ಪ್ರಾರ್ಥಿಸಿ, ಆಂಗ್ಲ ಉಪನ್ಯಾಸಕ ಭರತ್‌ರಾಜ್ ಎನ್ ವಿ ಸ್ವಾಗತಿಸಿ, ವಾಣಿಜ್ಯ ವಿಭಾಗದ ಉಪನ್ಯಾಸಕ ಡಾ. ವೆಂಕಟರಾಘವ್ ಪ್ರಮಾಣ ಪತ್ರ ವಿತರಿಸಿ, ಪ್ರಾಂಶುಪಾಲ ಬದರಿನಾಥ್ ಬಿ ವಂದಿಸಿದರು.
ಕಾಲೇಜಿನ ಎಲ್ಲಾ ಭೋಧಕ ಹಾಗೂ ಭೋಧಕೇತರ ಸಿಬ್ಬಂದಿ ವರ್ಗದವರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.