ಜೀವನದ ಹಿರಿಮೆ ಗರಿಮೆ ಹೆಚ್ಚಿಸುವ ಕಾರ್ಯಗಳಲ್ಲಿ ತೊಡಗಲು ಪ್ರಯತ್ನಿಸಿ:  ಶ್ರೀಗಳು


ಸಂಜೆವಾಣಿ ವಾರ್ತೆ
ಕುಕನೂರು, ಜೂ.15: ಯಡಿಯಾಪುರ ಗ್ರಾಮ ಪಂಚಾಯತ ಸದಸ್ಯರಾದ ಶ್ರೀ ಪರಶುರಾಮ ಸಿದ್ದಪ್ಪ ಮ್ಯಾಗೇರಿ ಚಿಕ್ಕ ಮನೆತನದ ಕೃಷಿಕ ಕುಟುಂಬದ ನಿವಾಸಿ ಗ್ರಾಮದಲ್ಲಿ ಬಿ ಶ್ರೀರಾಮುಲು ಅಭಿಮಾನಿ ಬಳಗ ಕಟ್ಟಿಕೊಂಡು ಕಳೆದ ಆರು ವರ್ಷಗಳಿಂದ ನೂರಾರು ಸಂಖ್ಯೆಯ ಸಾಮೂಹಿಕ ವಿವಾಹಗಳನ್ನು ನಡೆಸಿಕೊಂಡು ಬಂದ ಈತನು ಈ ವರ್ಷ ಏಳನೇ ವರ್ಷದ ಪುಣ್ಯ ಕಾರ್ಯಕ್ರಮವನ್ನು ತಮ್ಮ ಸುಪುತ್ರನ ನಾಮಕರಣದ ನಿಮಿತ್ಯಶ್ರೀ ಸಿದ್ದಲಿಂಗೇಶ್ವರ ದೇವರ ಗುಡಿ ಮುಂಭಾಗದಲ್ಲಿ  ಸೋಮವಾರ ಜರುಗಿತು.   
ಈ ಭಾಗದ ಶ್ರೀಮಠಗಳ ಪೂಜ್ಯರ ದಿವ್ಯ ಸನ್ನಿಧಾನದಲ್ಲಿ 25 ಜೋಡಿ ಸಾಮೂಹಿಕ ವಿವಾಹಗಳ ಕಾರ್ಯಕ್ರಮ ನಡೆಸಿಕೊಟ್ಟು ಧಾರ್ಮಿಕ ಆಚರಣೆಯ ಪ್ರಮುಖ ಅಂಗವಾಗಿ ಶ್ರೀರಾಮ ಮಂದಿರ ಹಾಗೂ ಶ್ರೀ ಮಹರ್ಷಿ ವಾಲ್ಮೀಕಿಯ ಮಂದಿರ ನಿರ್ಮಾಣದ ಭೂಮಿ ಪೂಜೆ ಸಹ ನೆರವೇರಿಸಿಕೊಟ್ಟು ತನ್ನ ಕುಟುಂಬದ ಸೇವೆಯ ದಾಖಲೆಯ ಕಾರ್ಯಕ್ರಮದ ರೂವಾರಿ ಎನಿಸಿದ ಈತನನ್ನು ಪೂಜ್ಯರಾದ ಶ್ರೀ ಬಸವಲಿಂಗೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ಶ್ರೀಧರಮುರಡಿ ಹಿರೇಮಠ ಯಲಬುರ್ಗಾ ಡಾ|ಮಹದೇವಸ್ವಾಮಿಗಳು ಶ್ರೀ ಅನ್ನದಾನೇಶ್ವರ ಶಾಖಾಮಠ ಕುಕನೂರು ಗುಳೇದಗುಡ್ಡದ ಶ್ರೀ ಒಪ್ಪತ್ತೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ಯಡಿಯಾಪುರ ಬೆದವಟ್ಟಿ ತಿಪ್ಪರಸನಹಾಳ ಗ್ರಾಮಗಳ ಹಿರೇಮಠ ಪೂಜ್ಯರು ಇವರನ್ನು ಇವರ ಕುಟುಂಬದ ಹಿರಿಯರನ್ನು ಸನ್ಮಾನಿಸಿ ಮಗುವಿನ ನಾಮಕರಣಕ್ಕೆ ಶುಭಾಶಿರ್ವಾದ ನೀಡಿ ಸಾಮೂಹಿಕ ವಿವಾಹಗಳ ಕೈಂಕರ್ಯ ನಡೆಸಿ ಬಸವಾದಿ ಶಿವ ಶರಣರ ಕಲ್ಯಾಣ ಕಾಲದ ನೆನಪನ್ನು ಚಿರಸ್ಥಾಯಿ ಗೊಳಿಸಿದ ಇವರ ಕುಟುಂಬದ ಸೇವೆ ಸಾಮಾಜಿಕ ಧಾರ್ಮಿಕ ಇತಿಹಾಸದ ಪುಟಗಳಲ್ಲಿ ಸೇರಿದೆ ಎಂದವರು ಹೇಳಿದರು                   ಇವರ ಸಮಾಜಮುಖಿ ಘನ ಕಾರ್ಯ ನವ ಪೀಳಿಗಿಗೆ ಆದರ್ಶತನದ ಪ್ರತೀಕವಾಗಿ ಕಾಣುತ್ತಿದೆ ಇವರ ಮಹತ್ವದ ಘನ ಕಾರ್ಯಗಳಲ್ಲಿ ಕೈಗೂಡಿಸುತ್ತಿರುವ ಗ್ರಾಮದ ಸಮಸ್ತ ದೈವದವರ ಇವಾ ಪೀಳಿಗೆಯ ಸಂಘಟನೆಯವರು ಸಹ ಪ್ರಸಂಸೆಗೆ ಪಾತರಾಗಿದ್ದವರೆಂದು ಹಿರಿಯ ರಾಜಕೀಯ ನೇತಾರರು ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜದ ಕೊಪ್ಪಳ ಜಿಲ್ಲಾ ಮಾಜಿ ಅಧ್ಯಕ್ಷ ಶ್ರೀ ಬಸವಲಿಂಗಪ್ಪ ಕರಬಸಪ್ಪ ಭೂತೆ  ಕೊಟ್ರಪ್ಪ ತೋಟದ ಮುತ್ತಾಳ ಹಿರಿಯ ಪತ್ರಕರ್ತರು ಶಿವುಕುಮಾರ ನಾಗಲಾಪೂರಮಠ ಸುಧಾಕರ ದೇಸಾಯಿ ವೀರನಗೌಡ್ರ ಬಳೂಟಗಿ ಶಿವಬಸಯ್ಯ ಮುತ್ತಿನಪೆಂಡಿಮಠ ಪ್ರಕಾಶ ಕಲಾಲ ಅಂದಪ್ಪ ಜವಳಿ ಅನಿಲ ಆಚಾರ್ ಕುಮಾರ ಈಶಣ್ಣ ಗುಳಗಣ್ಣನವರ ಶೇಖಪ್ಪ ಕಂಬಳಿ  ಹಾಗೂ ಪರಶುರಾಮ ನ ಗುರುಗಳಾದ ಗಿರಿಜಾ ಧಮ೯ಸಾಗರ, ರೇಣುಕಾ ಬಡಿಗೇರ್ ಸೇರಿದಂತೆ ಇತರರನ್ನು ಸತ್ಕರಿಸಿ ಇವರ ಮಹತ್ವದ ಸೇವೆ ಯುವ ಪೀಳಿಗಿಗೆ ಮಾದರಿ ಎಂದು ಪ್ರಸಂಶೆಯ ಮಾತನ್ನಾಡಿ ಇವರಿಗೆ ಭವಿಷ್ಯತ್ತಿನಲ್ಲಿ ಉಜ್ವಲ ದಿನಗಳು ಪ್ರಾಪ್ತವಾಗಲೆಂದರು.
ಶಂಕ್ರಪ್ಪ ತಳಕಲ್ ಶಿಕ್ಷಕರು ಹರೀಶ ಹಿರೇಮಠಈಶಪ್ಪ ಮೇಟಿ ಪ್ರಾಂಶುಪಾಲರುಉಮೇಶ ಕಂಬಳಿ ಶಿಕ್ಷಕರು ಸ್ವಾಗತ ನಿರೂಪಣೆ ಪ್ರಾಸ್ತಾವಿಕ ನುಡಿ ಸೇವೆಗೈದರು ಪರಶುರಾಮ ಸಿದ್ದಪ್ಪ ಮ್ಯಾಗೇರಿ ವಂದಿಸಿದರು.