ಜೀವನದ ಸಾರ ಸಂದೇಶದ ಮೇರು ಹಬ್ಬ ಯುಗಾದಿ

???????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????

ಕಲಬುರಗಿ:ಏ.10: ಬೇವು-ಬೆಲ್ಲ ಸವಿಯುವ ವಿಶೇಷತೆಯಾದ ಯುಗಾದಿ ಹಬ್ಬವು ಜೀವನದಲ್ಲಿ ಬರುವ ಸುಖ-ದುಃಖಗಳನ್ನು ಸಮಾನವಾಗಿ ಸ್ವೀಕರಿಸಬೇಕು ಎಂಬ ಸಮಭಾವದ ಮೇರು ಸಂದೇಶವನ್ನು ಹೊಂದಿದೆ. ಪ್ರತಿಯೊಬ್ಬರು ಪ್ರಯತ್ನಶೀಲರಾಗಿದ್ದರೆ ಉನ್ನತವಾದ ಸಾಧನೆ ಮಾಡಲು ಸಾಧ್ಯವಿದ್ದು, ಕಷ್ಟಗಳನ್ನು ಮೆಟ್ಟಿನಿಲ್ಲಬೇಕು ಎಂಬ ಮೇರು ಸಂದೇಶವು ಯುಗಾದಿ ಹಬ್ಬವು ಸಾರುತ್ತದೆ ಎಂದು ಉಪನ್ಯಾಸಕ, ಚಿಂತಕ ಎಚ್.ಬಿ.ಪಾಟೀಲ ಅಭಿಮತಪಟ್ಟರು.
ನಗರದ ಡಬರಾಬಾದ ಕ್ರಾಸ್ ಸಮೀಪವಿರುವ ಪ್ರಭುದೇವ ನಗರದಲ್ಲಿ ಬಡಾವಣೆ ಮತ್ತು ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಮಂಗಳವಾರ ಜರುಗಿದ ‘ಯುಗಾದಿ ಹಬ್ಬ ಸಂಭ್ರಮ’ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.
ಭಾರತ ಕೃಷಿ ಪ್ರಧಾನ ದೇಶವಾಗಿದೆ. ರೈತರು, ಶ್ರಮಜೀವಿಗಳು ವರ್ಷದ ಕೊನೆಯಲ್ಲಿ ತಮ್ಮ ಚಟುವಟಿಕೆಗಳನ್ನು ಮುಗಿಸಿ, ಆ ವರ್ಷಕ್ಕೆ ವಿದಾಯ ಹೇಳಿ, ಮುಂದಿನ ವರ್ಷವನ್ನು ಸ್ವಾಗಿಸುವ ದಿನ ಇದಾಗಿದೆ. ಸೂಕ್ತ ಕಾಲಕ್ಕೆ ಮಳೆಯಾಗಿ, ಉತ್ತಮ ಫಸಲನ್ನು ಪಡೆದು ರೈತ ಸದೃಢನಾಗಬೇಕು. ಭಾರತೀಯರ ನಿಜವಾದ ಹೊಸ ವರ್ಷಾಚರಣೆ ಎಂದರೆ ಯುಗಾದಿಯೇ ಹೊರತು ಕ್ಯಾಲೆಂಡರ್ ವರ್ಷದ ‘ಜನವರಿ-1’ ಅಲ್ಲ. ಯುಗಾದಿ ಕೇವಲ ಹೊಸ ವರ್ಷಾಚರಣೆ ಹಬ್ಬವಾಗದೇ, ಶ್ರೇಷ್ಠ ಸಂಸ್ಕøತಿ, ಉನ್ನತವಾದ ಮೌಲ್ಯಗಳನ್ನು ಹೊಂದಿದೆ. ನಮ್ಮ ದೇಶದ ಹಬ್ಬಗಳು ನಿಸರ್ಗದೊಂದಿಗೆ ಅವಿನಾಭಾವ ಸಂಬಂಧ ಹೊಂದಿದ್ದು ವಿಶೇಷತೆಯಾಗಿದೆ. ಇಂತಹ ಹಬ್ಬಗಳ ಆಚರಣೆಯ ಹಿನ್ನಲೆಯನ್ನು ಇಂದಿನ ಯುವ ಪೀಳಿಗೆಗೆ ತಿಳಿಸುವ ಅವಶ್ಯಕತೆಯಿದೆ ಎಂದರು.
ಕಾರ್ಯಕ್ರಮದಲ್ಲಿ ಬಡಾವಣೆಯ ಸಿದ್ದಾರೂಢ ಮಠದ ಪೂಜ್ಯ ಬ್ರಹ್ಮಾನಂದ ಸ್ವಾಮೀಜಿ, ಕಸಾಪ ಉತ್ತರ ವಲಯದ ಗೌರವ ಅಧ್ಯಕ್ಷ ಶಿವಯೋಗೆಪ್ಪಾ ಎಸ್.ಬಿರಾದಾರ, ಬಡಾವಣೆಯ ಡಾ.ರಾಜಶೇಖರ ಪಾಟೀಲ ಹೆಬಳಿ, ಪಂಡಿತರಾವ ಪಾಟೀಲ, ಮಂಜುನಾಥ ಅಂಬಾಜಿ, ಚನ್ನಬಸಪ್ಪ ಕುಂಬಾರ, ಶರಣು ವಡಗೇರಿ, ಪ್ರಭುಲಿಂಗ ಪಾಟೀಲ, ಬಸವರಾಜ ಧನಪಾಲ್, ಆದರ್ಶ ಪಾಟೀಲ, ಪ್ರತೀಕ ಪಾಟೀಲ, ಪ್ರೀತಮ ಪಾಟೀಲ, ಪ್ರಭಾವತಿ ಕುಂಬಾರ, ಮಟಿವಾಳಪ್ಪ ಐಮುಳಿ ಸೇರಿದಂತೆ ಇನ್ನಿತರರು ಇದ್ದರು.