ದಾವಣಗೆರೆ.ಜೂ.೨೮; ಶಿಕ್ಷಣ ದಿಂದ ಎಲ್ಲವು ಸಾಧ್ಯ. ಶಿಕ್ಷಣದಿಂದ ಇಡೀ ದೇಶವನ್ನೆ ಬದಲಿಸ ಬಹುದು ಎಂದು ಕರ್ನಾಟಕ ಉಚ್ಚ ನ್ಯಾಯಾಲಯದ ವಿಶ್ರಾಂತ ನ್ಯಾಯಾಧೀಶರಾದ ಹೆಚ್. ಬಿಲ್ಲಪ್ಪ ಹೇಳಿದರು.ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರ ಮತ್ತು ಸಂಜೆ ಕಾಲೇಜಿನ 2022 ಮತ್ತು 23 ನೇ ಶೈಕ್ಷಣಿಕ ಸಾಲಿನ ಸಾಂಸ್ಕೃತಿಕ, ಕ್ರೀಡೆ ಎನ್.ಎಸ್.ಎಸ್ ಎನ್.ಸಿಸಿ ಯುವ ರೆಡ್ ಕ್ರಾಸ್ ಹಾಗೂ ಸ್ಕೌಟ್ ಮತ್ತು ಗೈಡ್ಸ್ ಚಟುವಟಿಕೆಗಳ ಸಮಾರೋಪ ಸಮಾರಂಭದ ಸಮಾರೋಪ ಭಾಷಣಕರಾಗಿ ಮಾತನಾಡಿದರು. ಜೀವನ ಒಂದು ನಾಟಕ ರಂಗ, ಕೋಟಿ ಕೋಟಿ ಪಾತ್ರಗಳ ಚಿತ್ರಕ್ಕೆ ಕೊನೆ ಇಲ್ಲ. ಆಡುವವರೇ ನೋಡುವವರು ನೋಡುವವರೆ ಆಡುವವರು.ಜೀವನದಲ್ಲಿ ಇವೆಲ್ಲವು ನಾಟಕಗಳು. ಮನುಷ್ಯ ಸುಖ ದುಃಖಗಳ ಸಾಂಬ್ರಾಜ್ಯದಲ್ಲಿ ತಲ್ಲಿನನಾಗಿದ್ದಾನೆ. ನಡುವೆ ತನ್ನ ಸಂತಸದ ಜೀವನ ಸಾಗಿಸಲು ವಿವಿಧ ತಯಾರಿ ಮಾಡುತ್ತಿದ್ದಾನೆ. ಪ್ರಸ್ತುತ ದಿನಮಾನದಲ್ಲಿ ಮನುಷ್ಯ ಮನುಷ್ಯನನ್ನು ಮನುಷ್ಯಾನಾಗಿ ನೋಡುತ್ತಿರುವುನೇ ಎಂಬ ಪ್ರಶ್ನೆ ಮೂಡಿದೆ. ಮೇಲ್ವರ್ಗ, ಕೆಳವರ್ಗ, ಮೇಲ್ಜಾತಿ ಕೆಳಜಾತಿ ತಾರತಮ್ಯ ಸಹಜವಾಗಿದೆ. ಜಾತಿ, ಲಿಂಗ ತಾರತಮ್ಯದಿಂದ ಸಾಮಾಜಿಕ ನ್ಯಾಯ ಸಿಗುತ್ತಿಲ್ಲ. ಇದರಿಂದ ವ್ಯಕ್ತಿ ವಯಕ್ತಿಕ ಸ್ವಾತಂತ್ರ್ಯ ಅನುಭವಿಸುತ್ತಿಲ್ಲ ಎಂದರು. ನಮ್ಮಲ್ಲಿ ಸಮಾನತೆ ಕಾಣೆಯಾಗಿದೆ. ನೆಮ್ಮದಿ ಇದೇಯಾ ಎಂದು ಮನಸ್ಸಿಗೆ ಪ್ರಶ್ನೆ ಮಾಡಿಕೊಳ್ಳಿ ಮನಸ್ಸಿನ ಉತ್ತರ ನೋ ಹ್ಯಾಪಿ ಎಂದಾಗಿರುತ್ತದೆ. ನಮ್ಮ ಸಮಾಜದಲ್ಲಿ ಶಾಂತಿ ನೆಲೆಸಿಲ್ಲ ಶಾಂತಿಗಾಗಿ ಶಿಕ್ಷಣ ಅಗತ್ಯವಿದೆ. ಜೀವನದ ಶಿಸ್ತಿಗಾಗಿ ಶಿಕ್ಷಣ ಅಗತ್ಯ. ಶಿಕ್ಷದಿಂದ ಒಂದು ದೇಶವನ್ನೆ ಬದಲಿಸ ಬಹುದು. ವಿದ್ಯೆಗೆ ಸಮಾನವಾದದ್ದು ಯಾವುದು ಇಲ್ಲ ವಿದ್ದೆಯನ್ನು ಕದಿಯುವುದಕ್ಕೆ ಆಗುವುದಿಲ್ಲ. ಎಷ್ಟೇ ಕೊಟ್ಟರು ಹೆಚ್ಚಾಗುವ ಸಂಪತ್ತು ವಿದ್ಯೆ ಎಂದು ಸರ್ವಜ್ಞ ಹೇಳಿದ್ದಾರೆ. ಸ್ವಾಮಿ ವಿವೇಕಾನಂದ ಅವರು ನೈತಿಕ ಮೌಲ್ಯ ಇರುವುದು ಶಿಕ್ಷಣದಲ್ಲಿ ಎಂದಿದ್ದಾರೆ. ಜೀವನದ ಶಿಕ್ಷಣಕ್ಕೆ ಎನ್.ಸಿಸಿ ಎನ್.ಎಸ್.ಎಸ್ ಸೇರಿದಂತೆ ಅನೇಕ ಮಾರ್ಗದರ್ಶನಗಳಿವೆ. ಶಿಕ್ಷಣ ಕಲಿತವ ನಿಸ್ವಾರ್ಥಿಯಾದರೆ ಕಲಿಯದವ ಸ್ವಾರ್ಥಿಯಾಗಿರುತ್ತಾನೆ. ಏನಾದರೂ ಮಾಡಿ ಏಕಾಗ್ರತೆ ರೂಡಿಸಿಕೊಳ್ಳಿ ಎಂದರು. ಕಾರ್ಯಕ್ರಮದ ಉದ್ಘಾಟನೆ ಮಾಡಿದ ಪಾಲಿಕೆ ಸದಸ್ಯ ಗಡಿಗುಡಾಳು ಮಂಜುನಾಥ್ ಮಾತನಾಡಿ ಇಲ್ಲಿನ ಸರ್ಕಾರಿ ಕಾಲೇಜು ಯಾವುದೇ ಖಾಸಗಿ ಕಾಲೇಜಿಗೇನು ಕಮ್ಮಿ ಇಲ್ಲ ಎನ್ನುವಂತಿದೆ. ಇಲ್ಲಿನ ವಿದ್ಯಾರ್ಥಿಗಳು ಹೆಚ್ಚು ರಕ್ತದಾನಿಗಳಾಗಿದ್ದಾರೆ ದಾನದಲ್ಲಿ ರಕ್ತದಾನ ಶ್ರೇಷ್ಠದಾನ ಎಂದು ತೋರಿಸಿದ್ದಾರೆ. ಕಾಲೇಜಿಗೆ ಸಮಾರಂಭದ ಹಾಲ್ ಅಗತ್ಯವಿದೆ ಎಂದರು. ಸಚಿವರಾಗಿರುವ ಎಸ್.ಎಸ್ ಮಲ್ಲಿಕಾರ್ಜುನ ಅವರು ಕಾರ್ಯಕ್ರಮಕ್ಕೆ ಆಗಮಿಸ ಬೇಕಾಗಿತ್ತು ಆದರೆ ಕಾರಣಾಂತರಗಳಿಂದ ಸಚಿವರು ಬರಲಾಗದೆ ಶುಭ ಸಂದೇಶ ಕಳಿಸಿದ್ದಾರೆ ಎಂದು ಸಂದೇಶ ಪತ್ರ ಓದಿದರು. ಇದೇ ವೇಳೆ ಕಾಲೇಜಿನ ವಿದ್ಯಾರ್ಥಿನಿಯರಿಗೆ ಪ್ರತ್ಯೇಕವಾದ ಕ್ರೀಡಾ ಹಾಸ್ಟೇಲ್ ಅಗತ್ಯವಿದೆ ಹಾಗೂ ಸರ್ಕಾರದಿಂದ ಮಂಜೂರಾಗಿರುವ ಮೂರು ಎಕರೆ ಜಮೀನು ಹದ್ದುಬಸ್ತು ಮಾಡಿಕೊಡಿಸುವಂತೆ ಪಾಲಿಕೆ ಸದಸ್ಯರ ಮೂಲಕ ಹಳೇ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷರಾದ ರಾಮ್ ಪ್ರಸಾದ್ ಪ್ರಧಾನ ಕಾರ್ಯದರ್ಶಿ ನವೀನ್ ಕುಮಾರ್ ಮನವಿ ಮೂಲಕ ಕೋರಿದರು. ಬಳಿಕ ಕ್ರೀಡಾ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು.