ಜೀವನದ ಯಶಸ್ಸಿನ ಆಧಾರವೇ ಕ್ರೀಡೆ:ಸಂತೋಷ ಬಂಡೆ

ಇಂಡಿ: ಆ.30:ಕ್ರೀಡೆಯು ನಮ್ಮನ್ನು ಆರೋಗ್ಯಕರ, ಶ್ರೀಮಂತ ಮತ್ತು ಕ್ರಿಯಾಶೀಲವಾಗಿರಿಸುತ್ತದೆ. ಮಕ್ಕಳು ಮತ್ತು ಯುವಕರ ಮಾನಸಿಕ, ದೈಹಿಕ ಬೆಳವಣಿಗೆಯಲ್ಲಿ ಇದು ಬಹಳ ಮುಖ್ಯವಾಗಿದ್ದು, ಭಾರತದ ಕ್ರೀಡಾ ಸಂಸ್ಕøತಿಯ ಏಳಿಗೆಗೆ ನಾವೆಲ್ಲರೂ ಮುಂದಾಗಬೇಕು ಎಂದು ಶಿಕ್ಷಕ ಸಂತೋಷ ಬಂಡೆ ಹೇಳಿದರು. ಅವರು ತಾಲೂಕಿನ ಹಿರೇರೂಗಿ ಗ್ರಾಮದ ಯುಬಿಎಸ್ ಶಾಲೆಯಲ್ಲಿ ಹಮ್ಮಿಕೊಂಡ ರಾಷ್ಟ್ರೀಯ ಕ್ರೀಡಾ ದಿನವನ್ನು
ಉದ್ದೇಶಿಸಿ ಮಾತನಾಡಿದರು.ಇಂದಿನ ಪೀಳಿಗೆಯ ಮಕ್ಕಳು ಪುಸ್ತಕ ಜ್ಞಾನದ ಜೊತೆಗೆ ಕ್ರೀಡೆಯಲ್ಲಿ ತಮ್ಮ ಆಸಕ್ತಿಯನ್ನು ಹೆಚ್ಚಿಸಿಕೊಳ್ಳಬೇಕು. ಆರೋಗ್ಯಕರ ದೇಹದಲ್ಲಿ ಆರೋಗ್ಯಕರ ಮಿದುಳು ಅಭಿವೃದ್ಧಿಗೊಳ್ಳುತ್ತದೆ, ಆರೋಗ್ಯಕರ ಜೀವನವೇ ಯಶಸ್ಸಿನ ಕೀಲಿಯಾಗಿದೆ ಎಂದು ಹೇಳಿದರು.
ಶಿಕ್ಷಕ ಎಸ್ ಎಸ್ ಅರಬ ಮಾತನಾಡಿ, ಕ್ರೀಡೆಗಳು ನಮ್ಮ ಜೀವನದ ಭಾಗವಾಗಿದ್ದು, ಮಕ್ಕಳು ಕ್ರೀಡೆಗಳಲ್ಲಿ ಪಾಲ್ಗೊಳ್ಳಬೇಕು.ಇದು ಅವರ ಫಿಟ್ನೆಸ್, ಆರೋಗ್ಯ ಮತ್ತು ಧನಾತ್ಮಕ ಬೆಳವಣಿಗೆಗೆ ಅವಶ್ಯಕವಾಗಿದೆ ಎಂದು ತಿಳಿಸಿದರು.
ಶಾಲಾ ಮುಖ್ಯ ಶಿಕ್ಷಕ ಎ ಎಂ ಬೆದ್ರೇಕರ ಅಧ್ಯಕ್ಷತೆ ವಹಿಸಿ ಮಾತನಾಡಿ,ಕ್ರೀಡೆಯು ದೈಹಿಕವಾಗಿ ಮತ್ತು ಮಾನಸಿಕವಾಗಿ ನಮ್ಮ ಅಭಿವೃದ್ಧಿಯ ಮೂಲವಾಗಿದೆ. ಇದು ನಮ್ಮ ದೇಹದ ರಕ್ತ ಪರಿಚಲನೆಗೆ ಸಹಕಾರಿಯಾಗಿದ್ದು, ನಮ್ಮ ಮೆದುಳಿನ ಬೆಳವಣಿಗೆಯಲ್ಲಿ ಪ್ರಯೋಜನಕಾರಿಯಾಗಿದೆ ಎಂದು ಹೇಳಿದರು.
ಶಿಕ್ಷಕಿ ಎನ್ ಬಿ ಚೌಧರಿ ಕಾರ್ಯಕ್ರಮ ನಿರ್ವಹಿಸಿದರು.
ಶಾಲಾ ಮಕ್ಕಳು ಭಾಗವಹಿಸಿದ್ದರು.