ಜೀವನದ ಪರ್ಯಂತ ಋಣಿಯಾಗಿರುವೆ


(ಸಂಜೆವಾಣಿ ವಾರ್ತೆ)
ಬಳ್ಳಾರಿ, ಏ.22: ನನಗೆ ಈ ಬಾರಿ ಮತ ನೀಡಿ ಶಾಸಕಿಯನ್ನಾಗಿ  ಆಯ್ಕೆ ಮಾಡಿದರೆ ನಾನು ಜೀವನ ಪರ್ಯಾಂತ ನಿಮಗೆ ಋಣಿಯಾಗಿರುವೆ ಎಂದು ನಗರದ ಮತದಾರರಿಗೆ  ಕೆಆರ್ ಪಿ ಪಕ್ಷದ ಅಭ್ಯರ್ಥಿ ಗಾಲಿ ಲಕ್ಷ್ಮೀ ಅರುಣ ಜನಾರ್ಧನರೆಡ್ಡಿ ಹೇಳಿದರು.
ಅವರು ಇಂದು ನಗರದ  20 ನೇ ವಾರ್ಡಿನ ಸಿದ್ದಾರ್ಥ ಕಾಲೋನಿ ಹಿಂಬಾಗ, ಕಾಲುವೆ ಮೇಲೆ, ಸಮುದಾಯ ಭವನದ ಹಿಂಭಾಗದ 42, 43,105  ನೇ ಸಂಖ್ಯೆಯ ಬೂತ್ ಗಳಗೆ ಸೇರಿದ ಮನೆ ಮನೆಗೆ ತೆರಳಿ ಮತಯಾಚನೆ ಮಾಡಿದರು.
ನೀವು ನನಗೆ ನೀಡುವ ಸ್ಪಂದನೆ ಬಹಳ ಖುಷಿ ಕೊಟ್ಟಿದೆ.  ಕಳೆದ 12 ವರ್ಷಗಳ ಕಾಲ ಅನುಭವಿಸಿದ ನೋವುಗಳೆಲ್ಲವೂ ಸಹ, ಜನರು ತೋರಿಸುತ್ತಿರುವ ಪ್ರೀತಿಯಿಂದ ಮರೆಯುತ್ತಿರುವೆ ಎಂದರು.
ಈ ಸಂದರ್ಭದಲ್ಲಿ ಮಹಿಳಾ ಘಟಕದ ಅಧ್ಯಕ್ಷೆ ಹಂಪಿ ರಮಣ, ಸಾಮಾಜಿಕ ಜಾಲತಾಣದ ಅಧ್ಯಕ್ಷ ಮಲ್ಲಿಕಾರ್ಜುನಚಾರ್, ಪಕ್ಷದ ಮುಖಂಡರಾದ  ಪ್ರಕಾಶ್ ರೆಡ್ಡಿ, ಅನಂದ್, ಬಾಬು, ಮೋಹನ್, ಶಿವು, ಭಾಸ್ಕರ,  ಪವನ್, ವಿಶ್ವ ಹನುಮಂತ ರಾಮು,(ಕ್ಲಬ್ ರಾಮು) ಶಾಂತರಾಜು ವಾಸು ಮಹಿಳಾ ಘಟಕದ ನಗರಾಧ್ಯಕ್ಷೆ ನಾಗವೇಣಿ, ಇಸಾಕ್, ವೇಣಿ ವೀರಾಪುರ ಕಿಶೋರ್, ಬೆಲ್ಲಂ ವಾಸುರೆಡ್ಡಿ, ಸೂರಿಬಾಬು,  ರೂಪ, ರಾಜೇಶ್ವರಿ, ಗೀತಾರಾಮ್,  ಶಂಕರ್, ರವಿ ಮೊದಲಾದವರು ಇದ್ದರು.