ಜೀವನದ ದೋಣಿಗೆ ಚೌಡಯ್ಯನವರ ವಚನಗಳು ಕಡೆಗೋಲು

ಕಲಬುರಗಿ: ಜ.21:ಇಂದಿನ ಒತ್ತಡದ ಬದುಕಿನಲ್ಲಿ ಅನೇಕ ಜಂಜಾಟಗಳಲ್ಲಿಯೇ ಬಳಲುತ್ತಿರುವ ವ್ಯಕ್ತಿಯ ಜೀವನ ಮತ್ತು ಸಮಾಜವೆಂಬ ದೋಣಿಗೆ ಅಂಬಿಗರ ಚೌಡಯ್ಯನವರು ನೀಡಿರುವ ವಚನಗಳು ಕಡೆಗೋಲಾಗಿ ಕಾರ್ಯನಿರ್ವಹಿಸುತ್ತವೆ. ಅವರು ಹಾಕಿಕೊಟ್ಟ ಜೀವನ ಮಾರ್ಗದಲ್ಲಿ ನಾವೆಲ್ಲರೂ ಸಾಗಿದರೆ, ಜಾತಿ, ವರ್ಗ, ವರ್ಣರಹಿತ, ಕಲ್ಯಾಣ ರಾಷ್ಟ್ರದ ಪರಿಕಲ್ಪನೆ ನಿಜವಾಗಿಯೂ ಅನುಷ್ಠಾನಗೊಳ್ಳುವದರಲ್ಲಿ ಯಾವುದೇ ಸಂಶಯವಿಲ್ಲವೆಂದು ಕ.ರಾ.ಪ್ರಾ.ಶಾ.ಶಿ.ಸಂಘದ ಉಪಾಧ್ಯಕ್ಷ ಪರಮೇಶ್ವರ ಬಿ.ದೇಸಾಯಿ ಹೇಳಿದರು.
ನಗರದ ಆಳಂದ ರಸ್ತೆಯ ದೇವಿ ನಗರದ ಬಿರಾದಾರ ಕಾಂಪೆಕ್ಸ್‍ನಲ್ಲಿರುವ ‘ವಿದ್ಯಾಸಿರಿ ಟ್ಯುಟೋರಿಯಲ್ಸ್’ನಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಶನಿವಾರ ಜರುಗಿದ ನಿಜಶರಣ ಅಂಬಿಗರ ಚೌಡಯ್ಯನವರ ಜಯಂತಿಯ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ಪುಷ್ಪ ನಮನಗಳನ್ನು ಸಲ್ಲಿಸಿ ಅವರು ಮಾತನಾಡುತ್ತಿದ್ದರು.
ಉಪನ್ಯಾಸಕ, ಶರಣ ಚಿಂತಕ ಎಚ್.ಬಿ.ಪಾಟೀಲ ಮಾತನಾಡಿ, ಚೌಡಯ್ಯನವರು ವಿಶ್ವಗುರು ಬಸವಣ್ಣನವರ ಜೊತೆಗೂಡಿ ಸಾಮಾಜಿಕ ನ್ಯಾಯಕ್ಕಾಗಿ, ಮೌಢ್ಯತೆ, ಕಂದಾಚಾರ, ಅಂಧಶೃದ್ಧೆ, ಅನ್ಯಾಯದ ವಿರುದ್ದ ಇಡೀ ತಮ್ಮ ಜೀವನದುದ್ದಕ್ಕೂ ಹೋರಾಟ ಮಾಡಿದ್ದಾರೆ. ವೈಚಾರಿಕತೆಯ ಪ್ರಖರ ಜ್ಯೋತಿಯಾಗಿ ಬೆಳಗಿದ್ದಾರೆ. ಅವರ ವ್ಯಕ್ತಿತ್ವ ಅತ್ಯಂತ ನೇರ, ಧಿಟ್ಟ, ನಿಷ್ಠುರಿಯಾಗಿತ್ತು. ಹೇಳಬೇಕಾದುದ್ದನ್ನು ಯಾವದೇ ಮುಲಾಜಿಲ್ಲದೇ ನೇರವಾಗಿ ಹೇಳುವ ಎದೆಗಾರಿಕೆ ಅವರಲ್ಲಿತ್ತು ಎಂದರು.
ಕಾರ್ಯಕ್ರಮದಲ್ಲಿ ಸತೀಶ್ ಹತ್ತಿ, ನರಸಪ್ಪ ಬಿರಾದಾರ ದೇಗಾಂವ, ಶಿವಯೋಗಪ್ಪ ಬಿರಾದಾರ, ಬಸಯ್ಯಸ್ವಾಮಿ ಹೊದಲೂರ, ದೇವೇಂದ್ರಪ್ಪ ಗಣಮುಖಿ, ಬಸವರಾಜ ಎಸ್.ಪುರಾಣೆ, ವೀರೇಶ ಬೋಳಶೆಟ್ಟಿ ನರೋಣಾ, ಭೀಮಾಶಂಕರ ಪೂಜಾರಿ ಹಾಗೂ ವಿದ್ಯಾರ್ಥಿಗಳು ಇದ್ದರು. ಜೇವರ್ಗಿ ಪಟ್ಟಣದ ಬಸವೇಶ್ವರ ವೃತ್ತದ ಬಳಿಯಿರುವ ಸರ್ಕಾರಿ ಪಿಯು ಕಾಲೇಜಿನಲ್ಲಿ ಗುರುವಾರ ಏರ್ಪಡಿಸಿದ್ದ ನಿಜಶರಣ ಅಂಬಿಗರ ಚೌಡಯ್ಯನವರ ಜಯಂತಿಯ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು
ಕಾಲೇಜಿನ ಪ್ರಾಂಶುಪಾಲ ಮಹ್ಮದ್ ಅಲ್ಲಾವುದ್ದೀನ ಸಾಗರ ಮಾತನಾಡಿ, ಅಂಬಿಗರ ಚೌಡಯ್ಯನವರು ಮಾತು ಮತ್ತು ಕೃತಿ ಒಂದಾಗಿತ್ತು. ಕಾಯಕ, ದಾಸೋಹ, ಭಕ್ತಿ, ಲಿಂಗ, ಜಂಗಮ, ಭವಿ, ಸಮಾನತೆ, ಮಾನವೀಯತೆ, ಅಂತಃಕರುಣೆ, ಶೋಷಣೆ ವಿರುದ್ಧ ಧ್ವನಿ, ಮೌಢ್ಯತೆ, ಕಂಧಾಚಾರ, ಅಂಧಶ್ರದ್ಧೆಗಳ ವಿರೋಧಿ ಧ್ವನಿ, ವೈಚಾರಿಕತೆಯ ಕಿಡಿ ಹೊತ್ತಿಸಿದ್ದು ಅವರ ಕೃತಿ ಹಾಗೂ ವಚನಗಳಲ್ಲಿ ಕಂಡು ಬರುತ್ತದೆಯೆಂದು ಅಭಿಪ್ರಾಯಪಟ್ಟರು.ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ಚಂದ್ರಪ್ರಭ ಕಮಲಾಪೂರಕರ್, ರವಿಕುಮಾರ ಬಟಗೇರಿ, ಎಚ್.ಬಿ.ಪಾಟೀಲ, ಶಂಕ್ರೆಪ್ಪ ಹೊಸದೊಡ್ಡಿ, ಶರಣಮ್ಮ ಭಾವಿಕಟ್ಟಿ, ಮಂಜುನಾಥ ಎ.ಎಂ., ಸಿಬ್ಬಂದಿ ನೇಸರ ಬೀಳಗಿ ಸೇರಿದಂತೆ ಕಾಲೇಜಿನ ಸಿಬ್ಬಂದಿ ಹಾಗೂ ವಿದಾರ್ಥಿಗಳಿದ್ದರು.