ಜೀವನದ  ಅನುಭವ ಹಂಚಿಕೊಳ್ಳುವ ಕ್ಷಣಗಳು ಅವಿಸ್ಮರಣೀಯ 

ದಾವಣಗೆರೆ.ನ.೧೩ : ಮಾನವನ ಇಂದಿನ ಒತ್ತಡದ ಜೀವನದಲ್ಲಿ  ಯಂತ್ರದಂತೆ ಕೆಲಸ ಮಾಡುತ್ತಿದ್ದು, ಇದೆಲ್ಲಾ ಬದಿಗೊತ್ತಿ ಜೀವನದ ಒಂದಿಷ್ಟು ಆನಂದದ ಅನುಭವ ಹಂಚಿಕೊಳ್ಳುವ ಕ್ಷಣಗಳಂತೂ ಅವಿಸ್ಮರಣೀಯ ಎಂದು ದಾವಣಗೆರೆ ಮಹಾನಗರ ಪಾಲಿಕೆಯ ಮಾಜಿ ಮೇಯರ್ ಹಾಗೂ ಹಾಲಿ ಸದಸ್ಯ ಎಸ್.ಟಿ.ವೀರೇಶ್ ಅಭಿಪ್ರಾಯಪಟ್ಟರು.ನಗರದ ಹದಡಿ ರಸ್ತೆಯಲ್ಲಿರುವ ಶಾಮನೂರು ಪಾರ್ವತಮ್ಮ ಶಿವಶಂಕರಪ್ಪ ಕಲ್ಯಾಣ ಮಂಟಪದಲ್ಲಿ ಆಯೋಜಿಸಲಾಗಿದ್ದ ಬಾಪೂಜಿ ವಿದ್ಯಾಸಂಸ್ಥೆಯ ಹಿರಿಯ ವಿದ್ಯಾರ್ಥಿಗಳ ಸ್ನೇಹ ಸಮ್ಮಿಲನ ಹಾಗೂ ಗುರುನಮನ ಕಾರ್ಯಕ್ರಮದಲ್ಲಿ ಪ್ರಾಸ್ತವಿಕವಾಗಿ ಮಾತನಾಡಿದರು.ಸುಮಾರು 14ವರ್ಷಗಳ ಕಾಲ ಇಲ್ಲಿ ಓದಿದ ವಿದ್ಯಾರ್ಥಿಗಳು ಇಂದು ಇಲ್ಲಿ ಒಂದೆಡೆ ಸೇರಿರುವುದೇ ಒಂದು ಅದ್ಬುತ. ಇಂತಹ ಸಮಾಗಮವು ನಮ್ಮಲ್ಲಿ ಹೊಸ ಹುರುಪು ತಂದಿದೆ. ಅದ್ಬುತ ಅನುಭವವನ್ನು ನೀಡುತ್ತದೆ.ನಮ್ಮೆಲ್ಲ ಕೌಟುಂಬಿಕ ಕೆಲಸಗಳ ಜಂಜಾಟಗಳ ನಡುವೆಯೂ ತೀವ್ರ ಒತ್ತಡದ‌ ಮಧ್ಯೆ ಇಲ್ಲಿ ಸೇರಿರುವುದು ನಿಜಕ್ಕೂ ಸಂತಸದ ದಿನಗಳಾಗಿವೆ ಎಂದು ಸ್ಮರಿಸಿದರು.ನಾವೆಲ್ಲರೂ ಒಂದೆಡೆ ಇಲ್ಲಿ ಸೇರಿ ಬಾಲ್ಯದ ದಿನಗಳನ್ನು ನೆನಪು ಮಾಡಿಕೊಳ್ಳುವ ಮೂಲಕ ಮನಸ್ಸನ್ನು ಉಲ್ಲಾಸಗೊಳಿಸುವ ಮಾಡಿಕೊಂಡಿದ್ದೇವೆ.ಇದರಿಂದಾಗಿ ಎಲ್ಲರಿಗೂ ನಮ್ಮ ಹಿಂದಿನ ನಮ್ಮ ಬಾಲ್ಯದ ದಿನಗಳು ಕಣ್ಮಂದೆ  ಬರುತ್ತಿವೆ. ಹಿಂದಿನ ಎಲ್ಲಾ ದಿನಗಲು ನೆನಪಾಗುತ್ತವೆ ಎಂದು ಹೇಳಿದರು.ಕಾರ್ಯಕ್ರಮದಲ್ಲಿ ನಿವೃತ್ತ ಶಿಕ್ಷಕರಾದ ಡಾ.ಎಂ.ಜಿ.ಈಶ್ವರಪ್ಪ, ಕಿರುವಾಡಿ ಗಿರಿಜಮ್ಮ, ಕೆ.ಇಮಾಂಸಾಬ್, ಹೆಚ್.ಕೆ.ಲಿಂಗರಾಜ್, ನಿರ್ಮಲ, ಪರಿಮಳ, ಬಿ.ಅರ್.ಪದ್ಮಾ, ಸುನಂದಾ ದೇವಿ, ಭುವನೇಶ್ವರಿ, ನಾಗರತ್ನ, ಉಮಾದೇವಿ, ಸುವರ್ಣಮ್ಮ, ಡಿ.ವಿ.ಬಡಿಗೇರ, ಅಣ್ಣಯ್ಯ, ಶಿವಕುಮಾರ್, ಪದ್ಮನಾಭ, ಮಹಾಂತೇಶ್ ಸೇರಿದಂತೆ ಇತರೆ ಶಿಕ್ಷಕರನ್ನು ಸನ್ಮಾನಿಸಲಾಯಿತು.