ಜೀವನದಲ್ಲಿ ಸಮಯ ಪರಿಪಾಲನೆಗೆ ಒತ್ತು ನೀಡಿ

ಅರಕೇರಾ.ಜ.೧೩-ಸಮಾಜದಲ್ಲಿ ಶಿಕ್ಷಣದ ಮಹತ್ವ ಹಾಗೂ ಮನುಷ್ಯನ ಸರ್ವಾಂಗಿಣ ವಿಕಾಸಕ್ಕೆ ಶಿಕ್ಷಣ ಬಹಳಷ್ಟು ಮುಖ್ಯವಾಗಿದ್ದು ಇಂದು ದೇಶದಲ್ಲೇ ಉನ್ನತವಾದ ಹುದ್ದೆಗಳನ್ನು ಅಲಂಕರಿಸಲು ಶಿಕ್ಷಣ ಸಹಕಾರಿಯಾಗಿದ್ದು ಸಮಯ ಪರಿಪಲನೆ ವಿದ್ಯಾರ್ಥಿ ಜೀವನದಲ್ಲಿ ಹೆಚ್ಚು ಒತ್ತುನೀಡಿ ತಮ್ಮ ಗುರಿಗಳನ್ನು ಮುಟ್ಟಲು ಸಾಧ್ಯವೆಂದು ಬಿಜೆಪಿ ಮುಖಂಡ ಕೆ.ಅನಂತರಾಜನಾಯಕ ಹೇಳಿದರು.
ಅವರು ಅರಕೇರಾ ಗ್ರಾಮದಲ್ಲಿನ ಸಿದ್ದಯ್ಯ ಹವಲ್ದಾರ ಸರಕಾರಿ ಪದವಿ ಪೂರ್ವಕಾಲೇಜಿನಲ್ಲಿ ರಾಷ್ಟ್ರೀಯ ಯುವ ದಿನ ಸ್ವಾಮಿ ವಿವೇಕಾನಂದ ಅವರ ಜನ್ಮದಿನ ಆಚರಣೆಯಲ್ಲಿ ಭಾಗವಹಿಸಿ ಸನ್ಮಾನ ಸ್ವೀಕರಿಸಿ ಮಾತನಾಡಿದ, ಅವರು ಸ್ವಾಮಿ ವಿವೇಕಾನಂದರು ವಿಶ್ವಗುರುವಾಗಿಸುವ ಸಾಮರ್ಥ ಭಾರತದ ಯುವಜನತೆಯಲ್ಲಿದೆ. ಸ್ವಾಮಿ ವಿವೇಕಾನಂದರು ದೇಶದ ಯುವ ಶಕ್ತಿಯ ಜಾಗೃತಿಗಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟಿದ್ದರು.
ಏಳಿ ಎದ್ದೇಳಿ ಗುರಿ ಮುಟ್ಟುವತನಕ ನಿಲ್ಲದಿರಿ ಎಂಬ ಅವರ ಮಾತಿನಂತೆ ಅವರ ಮಾತಿನಂತೆ ಅವರ ದಿವ್ಯ ಸಂದೇಶಗಳ ಬೆಳಕಿನಲ್ಲಿ ದೇಶವನ್ನು ಉನ್ನತ ಸ್ಥಾನಕ್ಕೆ ಕೊಂಡೊಯ್ಯಲು ವಿದ್ಯಾರ್ಥಿಗಳು ಮುಂದೆ ಬರುವಂತೆ ಮತ್ತು ಮಹನೀಯರ ಹಾಗೂ ಸಾಧಕರ ಜಯಂತಿಗಳನ್ನು ಆಚರಿಸುವದರಿಂದ ಅವರ ಚರಿತ್ರೆಗಳನ್ನು ತಿಳಿದುಕೊಳ್ಳಲು ಸಾದ್ಯವಾಗುತ್ತಿದೆ ಕರೆ ನೀಡಿದರು.
ಈ ಸಂದರ್ಬದಲ್ಲಿ ಗ್ರಾಮ ಪಂಚಾಯತ ಅಭಿವೃದ್ದಿ ಅಧಿಕಾರಿಗಳಾದ ಬೂದೇಪ್ಪಯಾದವ, ಯಮನಪ್ಪಕುಂಬಾರ, ರಾಘವೇಂದ್ರ, ಕಾಲೇಜಿನ ಪ್ರಾಚಾರ್ಯರಾದ ಹನುಮಂತಪ್ಪ ಚನ್ನೂರು, ಉಪನ್ಯಾಸಕರಾದ ವಿದ್ಯಾವತಿಹೀರೆಮಠ, ಶಶಿಕಲಾ, ಬುದ್ದಿವಂತಿ, ತಿಪ್ಪಣ್ಣ ಹಾಗೂ ವಿದ್ಯಾರ್ಥಿ ವಿದ್ಯಾರ್ಥಿನಿಯರುಗಳು ಉಪಸ್ಥಿತರಿದ್ದರು.