
ಅಥಣಿ :ಆ.28: ಮಕ್ಕಳು ಸವಾರ್ಂಗೀಣ ಅಭಿವೃದ್ಧಿ ಹೊಂದಬೇಕಾದರೆ ಶಿಕ್ಷಕರು ಪುಸ್ತಕ ಜ್ಞಾನದ ಜೊತೆಗೆ ಬದುಕಿನ ಪಾಠವನ್ನು ಹೇಳಿಕೊಡಬೇಕು. ಮಕ್ಕಳಿಗೆ ನೈತಿಕತೆ ಕೇವಲ ಹೇಳಿದರೆ ಬರುವುದಿಲ್ಲ. ನೈತಿಕತೆಯನ್ನು ಶಿಕ್ಷಕರು ಮತ್ತು ಪೆÇೀಷಕರು ಕೂಡ ಜೀವನದಲ್ಲಿ ಅಳವಡಿಸಿಕೊಂಡಾಗ ಮಕ್ಕಳ ಸವಾರ್ಂಗೀಣ ಅಭಿವೃದ್ಧಿಗೆ ಪೂರಕವಾಗುತ್ತದೆ. ಎಂದು ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆಯ ಧಾರವಾಡ ಆಫರ್ ಆಯುಕ್ತರ ಕಾರ್ಯಾಲಯದ ಜಂಟಿ ನಿರ್ದೇಶಕ ಗಜಾನನ ಮನ್ನಿಕೇರಿ ಹೇಳಿದರು.
ಅವರು ಅಥಣಿ ಪಟ್ಟಣದ ಚಿಕ್ಕಟ್ಟಿ ಶಿಕ್ಷಣ ಸಂಸ್ಥೆಯ ಸಭಾಂಗಣದಲ್ಲಿ ಸುಕ್ಷೇತ್ರ ಗಚ್ಚಿನಮಠ ಹಾಗೂ ಶ್ರೀ ಮರಳು ಶಂಕರ ದೇವರು ಫೌಂಡೇಶನ್ ವತಿಯಿಂದ ಹಮ್ಮಿಕೊಳ್ಳಲಾಗಿದ್ದು ಮೌನಯೋಗಿ, ಶ್ರೀ ಮರುಳ ಶಂಕರ ದೇವರು ಅವರ 11ನೇ ಸ್ಮರಣೋತ್ಸವ ಅಂಗವಾಗಿ ಹಮ್ಮಿಕೊಂಡಿದ್ದ ಪ್ರಬಂಧ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಣೆ ಹಾಗೂ ಶಿಕ್ಷಕರಿಗಾಗಿ “ನೈತಿಕ ಶಿಕ್ಷಣ ಮತ್ತು ಸವಾಲುಗಳು” ಎಂಬ ವಿಚಾರ ಸಂಕೀರ್ಣವನ್ನು ಉದ್ಘಾಟಿಸಿ ಮಾತನಾಡಿದರು ಇಂದಿನ ಮೊಬೈಲ್ ಮತ್ತು ಡಿಜಿಟಲ್ ಜಗತ್ತಿನಲ್ಲಿ ಶಿಕ್ಷಕರು ಮತ್ತು ಪೆÇೀಷಕರು ಮಕ್ಕಳಿಗೆ ಮೌಲ್ಯ ಆಧಾರಿತ ಶಿಕ್ಷಣವನ್ನು ನೀಡುವಲ್ಲಿ ತಮ್ಮ ಜವಾಬ್ದಾರಿಗಳನ್ನು ಸರಿಯಾಗಿ ನಿಭಾಯಿಸಬೇಕು. ಇತ್ತೀಚಿನ ದಿನಗಳಲ್ಲಿ ಪಾಲಕರು ಮಕ್ಕಳಿಗೆ ಜವಾಬ್ದಾರಿಗಳನ್ನು ನೀಡದೆ, ಆತ್ಮಸ್ಥೈರ್ಯ ತುಂಬುವ ಜೀವನದ ಪಾಠವನ್ನು ಕಲಿಸದೆ ಬರೀ ರ್ಯಾಂಕು ಗಳಿಸುವ ವ್ಯಾಮೋಹದಲ್ಲಿ ಮಕ್ಕಳನ್ನ ಬೆಳೆಸುತ್ತಿದ್ದಾರೆ. ಇಂದಿನ ದಿನಮಾನಗಳಲ್ಲಿ ನೈತಿಕ ಶಿಕ್ಷಣ ಎಂಬುದು ಶಿಕ್ಷಕರಿಗೂ ಮತ್ತು ಪೆÇೀಷಕರಿಗೂ ಬಹಳ ಅಗತ್ಯವಾಗಿದೆ ಎಂದರು.
ಪ್ರತಿಯೊಬ್ಬರ ಜೀವನದಲ್ಲಿಯೂ ಸವಾಲುಗಳು ಎದುರಾಗುತ್ತವೆ, ನೈತಿಕ ಶಿಕ್ಷಣ ನೀಡುವಲ್ಲಿ ಶಿಕ್ಷಕರಿಗೆ ಅನೇಕ ಸವಾಲುಗಳನ್ನು ಎದುರಿಸುತ್ತಾರೆ. ಈ ಸವಾಲುಗಳನ್ನು ನಮ್ಮ ಮೆಟ್ಟಿಲುಗಳನ್ನಾಗಿ ಬಳಸಿಕೊಂಡು ಸರಿಯಾದ ದಾರಿಯಲ್ಲಿ ನಡೆದಾಗ ಶಿಕ್ಷಕರ ಬದುಕು ಯಶಸ್ವಿಯಾಗುತ್ತದೆ. ಸವಾಲುಗಳನ್ನು ಸಕಾರಾತ್ಮಕವಾಗಿ ತೆಗೆದುಕೊಂಡು ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ನೀಡಬೇಕೆಂದು ಕರೆ ನೀಡಿದ ಅವರು ಮೌನಯೋಗಿ ಮರುಳ ಶಂಕರ ದೇವರ ಸ್ಮರಣೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗುವುದೇ ಒಂದು ಸೌಭಾಗ್ಯ. ಅವರ ಬದುಕಿ ಒಂದು ಪವಾಡವಾಗಿತ್ತು ಎಂದು ಹೇಳಿದರು.
ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಜಿ ಎಂ ಹಿರೇಮಠ ಮಾತನಾಡಿ ಶಿಕ್ಷಕರು ಮಕ್ಕಳಿಗೆ ಗುಣಾತ್ಮಕ ಶಿಕ್ಷಣವನ್ನು ನೀಡಲು ಸಿದ್ಧವಿದ್ದಾರೆ. ಇಲಾಖೆಯ ಯೋಜನೆಗಳ ಅನುಷ್ಠಾನದಲ್ಲಿ ಅನೇಕ ತಾಂತ್ರಿಕ ದೋಷಗಳಿದ್ದು, ಅವುಗಳನ್ನ ನಿಭಾಯಿಸುವುದರಲ್ಲಿಯೇ ಸಮಯ ವ್ಯರ್ಥವಾಗುತ್ತಿದೆ, ಇತ್ತೀಚಿಗೆ ವರ್ಗಾವಣೆ ಪ್ರಕ್ರಿಯೆ ನಡೆದ ನಂತರ ತಾಲೂಕಿನಲ್ಲಿ ಶಿಕ್ಷಕರ ಕೊರತೆಯಾಗುತ್ತಿದ್ದು, ಕೂಡಲೇ ಅತಿಥಿ ಶಿಕ್ಷಕರನ್ನು ನೇಮಿಸಬೇಕೆಂದು ಜಂಟಿ ನಿರ್ದೇಶಕ ಗಜಾನನ ಮನ್ನಿಕೆರೆ ಅವರಿಗೆ ಮನವಿ ಮಾಡಿದರು.
ಸಮಾರಂಭದ ದಿವ್ಯ ಸಾನಿಧ್ಯ ವಹಿಸಿದ್ದ ಸುಕ್ಷೇತ್ರ ಗಚ್ಛಿನ ಮಠದ ಶಿವಬಸವ ಸ್ವಾಮೀಜಿ ಮಾತನಾಡಿ ಮಹತಪಸ್ವಿ ಮುರುಘೇಂದ್ರ ಶಿವಯೋಗಿಗಳಿಂದ ಮರುಜನ್ಮ ಪಡೆದ ಮರಳು ಶಂಕರ ದೇವರು ಮೌನವಾಗಿಯೇ ಇದ್ದುಕೊಂಡು ತಮ್ಮ ದಿವ್ಯ ಶಕ್ತಿಯ ಮೂಲಕ ಭಕ್ತರನ್ನ ಉದ್ದರಿಸಿದ್ದಾರೆ. ಅವರು ಲಿಂಗೈಕ್ಯ ಹೊಂದಿದ ಸಂದರ್ಭದಲ್ಲಿ ಅಥಣಿ ಪಟ್ಟಣದಲ್ಲಿ ಅಘೋಷಿತ ಬಂದ್ ಮಾಡಿ ಲಕ್ಷಾಂತರ ಭಕ್ತರು ಸೇರಿದ್ದು ಐತಿಹಾಸಿಕ. ಅಂತಹ ಪೂಜ್ಯರ 11ನೇ ಮರಣೋತ್ಸವದ ಅಂಗವಾಗಿ ಶಿಕ್ಷಕರಿಗೆ ವಿಚಾರ ಸಂಕೀರ್ಣ ಆಯೋಜಿಸಿರುವುದು ಅರ್ಥಪೂರ್ಣವಾಗಿದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಶ್ರೀ ಮರುಳ ಶಂಕರ ದೇವರು ಕುರಿತು ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಆಯೋಜಿಸಲಾಗಿದ್ದ ಪ್ರಬಂಧ ಸ್ಪರ್ಧೆಯ ವಿಜೇತರಿಗೆ ನಗದು ಬಹುಮಾನ ಹಾಗೂ ಪ್ರಮಾಣ ಪತ್ರ ವಿತರಿಸಲಾಯಿತು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಚಿಕ್ಕಟ್ಟಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಸುರೇಶ ಚಿಕ್ಕಟ್ಟಿ ಮಾತನಾಡಿದರು. ಶ್ರೀ ಮರುಳ ಶಂಕರ ದೇವರು ಪೌಂಡೇಶನ್ ಅಧ್ಯಕ್ಷ ಚನ್ನಬಸಯ್ಯ ಇಟ್ನಾಳ್ಮಠ ಪ್ರಾಸ್ತಾವಿಕವಾಗಿ ಮಾತನಾಡಿದರು.
ಸಮಾರಂಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಎಂ ಬಿ ಮೋರಟಗಿ, ಕ್ಷೇತ್ರ ಸಮನ್ವಯಾಧಿಕಾರಿ ಗೌಡಪ್ಪ ಖೋತ, ಡಾ. ಪ್ರಿಯಂವದಾ ಹುಲಗಬಾಳಿ ಉಪಸ್ಥಿತರಿದ್ದರು.ಕರವೇ ಅಧ್ಯಕ್ಷ ಅಣ್ಣಾಸಾಬ ತೆಲಸಂಗ ಸ್ವಾಗತಿಸಿದರು. ಶಿಕ್ಷಕ ವಿಶ್ವನಾಥ ಸೌದಾಗರ ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ಸದಾನಂದ ಚಿಕ್ಕಟ್ಟಿ ವಂದಿಸಿದರು,
ಶಿಕ್ಷಕ ಹುದ್ದೆಗೆ ಸಮಾಜದಲ್ಲಿ ಗೌರವ ಸ್ಥಾನವಿದ್ದು, ತಮ್ಮ ಜವಾಬ್ದಾರಿಯನ್ನು ಅರಿತು ಮಕ್ಕಳಿಗೆ ಗುಣಾತ್ಮಕ ಶಿಕ್ಷಣದ ಜೊತೆಗೆ ನೈತಿಕ ಮೌಲ್ಯಗಳನ್ನು ಹೇಳಿಕೊಡುವುದು ಅಗತ್ಯ
ನಾವು ಶಿಕ್ಷಣ ಪಡೆಯುತ್ತಿದ್ದ ಕಾಲದಲ್ಲಿ ನಮ್ಮ ಗುರುಗಳು ಮತ್ತು ಅಜ್ಜ ಅಜ್ಜಿ ಹೇಳುವ ನೀತಿ ಕಥೆಗಳು, ಮಹಾತ್ಮರ ಸಾಧನೆಗಳು ನಮಗೆ ಸ್ಪೂರ್ತಿಯಾಗುತ್ತಿದ್ದವು.
ಗಜಾನನ ಮನ್ನಿಕೇರಿ, ಜಂಟಿ ನಿರ್ದೇಶಕ. ಅಪರ್ ಆಯುಕ್ತರ ಕಾರ್ಯಾಲಯ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆಯ ಧಾರವಾಡ