
ಸೈದಾಪುರ:ಆ.8:ಜೀವನದಲ್ಲಿ ಬಡತನವೇ ಶ್ರೇಷ್ಠ ಅದು ನಮಗೆ ಬದುಕುವಂತೆ ಮಾಡುತ್ತದೆ. ಇದಕ್ಕಾಗಿ ಉತ್ತಮ ಗುರಿಯೊಂದಿಗೆ ಪ್ರಯತ್ನ ಮಾಡಬೇಕು ಎಂದು ವಿದ್ಯಾ ವರ್ಧಕ ಸಂಸ್ಥೆಯ ಅಧ್ಯಕ್ಷ ಸಣ್ಣ ಸಿದ್ರಾಮಪ್ಪಗೌಡ ಬೆಳಗುಂದಿ ಅಭಿಪ್ರಾಯಪಟ್ಟರು.
ಪಟ್ಟಣದ ವಿದ್ಯಾ ವರ್ಧಕ ವಾಣಿಣ್ಯ ಮತ್ತು ವಿಜ್ಞಾನ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಆಯೋಜಿಸಲಾದ ಸ್ವಾಗತ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು, ಸತತ ಪ್ರಯತ್ನದಿಂದ ಗುರಿ ಮುಟ್ಟಲು ಸಾಧ್ಯ. ಇದಕ್ಕಾಗಿ ನಂಬಿಕೆ, ಶ್ರದ್ದೆ, ಶಿಸ್ತಿನೊಂದಿಗೆ ಪ್ರಯತ್ನ ಮಾಡಬೇಕು. ಉತ್ತಮ ಸಾಧನೆಗೆ ಭವಿಷ್ಯವಿದೆ ಎಂದು ಹೇಳಿದರು.
ಪ್ರೌಢ ಶಾಲಾ ಶಿಕ್ಷಕ ಗೂಳಪ್ಪ.ಎಸ್.ಮಲ್ಹಾರ ವಿಶೇಷ ಉಪನ್ಯಾಸ ನೀಡಿ ಮಾತನಾಡಿ, ಹಿಂದೆ ಮಾಡಿದವರ ಸಾಧನೆ ಮೀರಿದ ಸಾಧನೆ ನಿಮ್ಮದಾಗಬೇಕು. ಇದಕ್ಕಾಗಿ ಕನಸನ್ನು ಹೊತ್ತುಕೊಂಡು ಸಕರಾತ್ಮಕ ವಿಚಾರಗಳೊಂದಿಗೆ ದೃಢ ಸಂಕಲ್ಪದಿಂದ ಪ್ರಯತ್ನ ಮಾಡಬೇಕು. ಅಂದಾಗ ಮಾತ್ರ ಶ್ರೇಷ್ಠ ಸಾಧನೆ ನಮ್ಮದಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಪ್ರಾಂಶುಪಾಲ ಹಂಪಣ್ಣ ಸಜ್ಜನಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಸಂಸ್ಥೆಯ ಕಾರ್ಯದರ್ಶಿ ಬಸವರಾಜ ಪಾಟೀಲ ಕ್ಯಾತನಾಳ, ಸಹಕಾರ್ಯದರ್ಶಿ ಕೆ.ಬಿ.ಗೋವರ್ಧನ, ಕೋಶಾಧ್ಯಕ್ಷ ಮುಕುಂದಕುಮಾರ ಅಲಿಝಾರ, ಕಾರ್ಯಕಾರಿ ಮಂಡಳಿಯ ಸದಸ್ಯರಾದ ಸಿದ್ರಾಮಪ್ಪಗೌಡ ಗೊಂದಡಗಿ, ಸುರೇಶ ಆನಂಪಲ್ಲಿ, ಮುಖ್ಯಗುರು ಲಿಂಗಾರೆಡ್ಡಿ ನಾಯಕ, ಪ್ರಾಂಶುಪಾಲ ಜಿ.ಎಂ.ಗುರುಪ್ರಸಾದ, ಕರಬಸಯ್ಯ ದಂಡಿಗಿಮಠ ಸೇರಿದಂತೆ ಉಪನ್ಯಾಸಕರು ಉಪಸ್ಥಿತರಿದ್ದರು. ಮರಿಯಮ್ಮ ನಂದಿನಿ ಪ್ರಾರ್ಥಾನಾಗೀತೆ ಹಾಡಿದರು. ಸಾಕ್ಷಿ ಸ್ವಾಗತಿಸಿದಳು. ಭಾವನ ಮತ್ತು ರಾಜೇಶ್ವರಿ ನಿರೂಪಿಸಿದರು. ಭಾಗರ್ವ ವಂದಿಸಿದನು.