ಜೀವನದಲ್ಲಿ ನಾನು ಎಂಬುವದು ಶಾಶ್ವತವಲ್ಲಾ:ಸಿದ್ದಲಿಂಗಶ್ರೀ

ತಾಳಿಕೋಟೆ:ಮಾ.6: ನಾನೇನೆಂಬುದು ಬೀಡಿರಿ ಮಾನವ ಜನ್ಮ ನರಕಪ್ರಾಪ್ತಿವಾದೀತೆಂಬ ಏಚ್ಚರಿಕೆಯ ಪ್ರವಚನದಂತೆ ನಾನು ಮನೆ ಕಟ್ಟಿನಿ ಎಲ್ಲವೂ ನನ್ನದೆಂಬಂತಹ ಭ್ರಮೆಯೊಳಗೆ ಮುನ್ನಡೆಯುತ್ತಾ ಸಾಗಿದರೆ ಅದು ಮುಂದೊಂದು ದಿನ ಮಣ್ಣು ಪಾಲಾಗಲಿದೆ ಎಂಬುದನ್ನು ಅರ್ಥೈಸಿಕೊಂಡು ಒಳ್ಳೆಯ ಕಾರ್ಯ ಮಾಡುತ್ತಾ ಜನಮೆಚ್ಚುಗೆಗೆ ಪಾತ್ರರಾಗುವದರೊಂದಿಗೆ ದೇವನ ವಲುಮೆಗೆ ಪಾತ್ರರಾಗಲು ಮುಂದಾಗಿರಿ ಎಂದು ಶ್ರೀ ಖಾಸ್ಗತೇಶ್ವರ ಮಠದ ಬಾಲ ಶಿವಯೋಗಿ ಶ್ರೀ ಸಿದ್ದಲಿಂಗ ದೇವರು ನುಡಿದರು.
ಶನಿವಾರರಂದು ಸುಕ್ಷೆತ್ರ ಗುಂಡಕನಾಳ ಹಿರೇಮಠದಲ್ಲಿ ಲಿಂಗೈಕ್ಯ ಪೂಜ್ಯರ ಪುಣ್ಯಸ್ಮರಣೋತ್ಸವ ಹಾಗೂ ಗುರುಲಿಂಗ ಶಿವಾಚಾರ್ಯ ಮಹಾಸ್ವಾಮಿಗಳ 18ನೇ ವರ್ಷದ ಪಟ್ಟಾಧಿಕಾರದ ವಾರ್ಷಿಕೋತ್ಸವ ಹಾಗೂ ಗುರುವಂದನಾ ಸಮಾರಂಭದ ಸಮ್ಮುಖವಹಿಸಿ ಮಾತನಾಡುತ್ತಿದ್ದ ಶ್ರೀಗಳು ನಾನು ನನ್ನದು ಎಂಬುದು ಶಾಸ್ವತವಲ್ಲಾ ನಾನು ಕಟ್ಟಿದ ಮನೆ ಮುಂದೊಂದು ದಿನ ಅದು ಮತ್ತೊಬ್ಬನ ಹೆಸರದ್ದು ಆಗುತ್ತದೆ ಎಂಬುದು ಅರೀತುಕೊಳ್ಳಬೇಕೆಂದರು. ಒಳ್ಳೆಯ ಬಟ್ಟೆ ಹಾಕಿಕೊಂಡರೂ ಮುಂದೊಂದು ದಿನ ಮಣ್ಣು ಪಾಲಾಗುತ್ತದೆ ಬೆಳ್ಳಿ ಬಂಗಾರ ಹಾಕಿಕೊಂಡರೂ ಮೇರೆಯುತ್ತಾ ಸಾಗಿದ್ದೇನೆಂಬ ಅಹಂಕಾರ ಭಾವನೆಯಿಂದ ನಡೆದರೆ ಮುಂದೊಂದು ದಿನ ಮಣ್ಣಾಗಿ ಹೋಗುತ್ತೇನೆಂಬುದನ್ನು ತಿಳಿದುಕೊಂಡು ನಡೆದರೆ ಜೀವನ ಸಾರ್ಥಕವಾಗುತ್ತದೆ ಎಂದರು.
ಇನ್ನೋರ್ವ ಸಮಾರಂಭವನ್ನು ದೀಪಬೆಳಗಿಸುವದರೊಂದಿಗೆ ಉದ್ಘಾಟಿಸಿದ ದೇವರ ಹಿಪ್ಪರಗಿ ಮತಕ್ಷೇತ್ರದ ಶಾಸಕ ರಾಜುಗೌಡ ಪಾಟೀಲ(ಕು.ಸಾಲವಾಡಗಿ) ಅವರು ಮಾತನಾಡಿ ನೆಮ್ಮದಿ ಬಧುಕಿಗೆ ಮಠ ಮಾನ್ಯಗಳು ಅಗತ್ಯವಾಗಿವೆ ಅವುಗಳಲ್ಲಿದ್ದ ಶ್ರೀಗಳ ಸಂತರ ಪ್ರವಚನ ಅವರ ವಾಣಿಯನ್ನು ಆಲಿಸುವ ಹಾಗೂ ಪಾಲಿಸುವದರಿಂದ ಜೀವನ ಸಾರ್ಥಕವಾಗಲಿದೆ ಎಂದರು. ಹಿಂದಿನ ಕಾಲದಲ್ಲಿದ್ದ ಗುರು ಹಿರಿಯರ ಮೇಲಿಟ್ಟ ಭಕ್ತಿ ಶ್ರದ್ದೆ ಅಂತಹ ಭಾವನೆಗಳು ಇಂದು ಕಣ್ಮರೆಯಾದಂತೆ ಕಾಣುತ್ತಿವೆ ಅಲ್ಲಲ್ಲಿ ಗುರುಗಳ ಆಶಿರ್ವಚನಗಳು ನಡೆಯುತ್ತಿದ್ದರೂ ಅದನ್ನು ಆಲಿಸುವ ಈ ಹಿಂದಿನಂತಹ ಭಕ್ತರೇ ಕಡಮೆ ಕಾಣುತ್ತಲಿದ್ದಾರೆ ಗುರುಗಳ ಆಶಿರ್ವಚನದಲ್ಲಿ ಬಹುದೊಡ್ಡ ಶಕ್ತಿಯೇ ಅಡಗಿದೆ ಎಂದರು. ಅಂತಹ ಆಶಿರ್ವಚನಗಳನ್ನು ಕೇಳಿದಾಗ, ಮನವರಿಕೆ ಮಾಡಿಕೊಂಡಾಗ ಸರಿ ಮಾರ್ಗವೆಂಬುದು ಗೊತ್ತಾಗುತ್ತದೆ ಎಂದು ಹೇಳಿದ ಶಾಸಕ ರಾಜುಗೌಡ ಪಾಟೀಲರು ನಾನು ಕೂಡಾ ಜಂಗಮ ಪ್ರೇಮಿಯಾಗಿದ್ದೇನೆ ಅನೇಕ ಕೆಲಸಗಳ ಒತ್ತಡದಿಂದ ಪ್ರವಚನಗಳನ್ನು ಆಲಿಸಲು ಆಗುತ್ತಿಲ್ಲಾ ಇಂದು ಎಲ್ಲ ಶ್ರೀಗಳ ದರ್ಶನದ ಭಾಗ್ಯ ದೊರೆತಿರುವದು ಸಂತಸವನ್ನುಂಟು ಮಾಡಿದೆ ಏನೇ ಇರಲಿ ಮನುಷ್ಯನಿಗೆ ಆಸೆ ಎಂಬುದು ಇರಬೇಕು ಆದರೆ ದುರಾಸೆ ಎಂಬುದು ಇರಬಾರದೆಂದು ಹೇಳಿದ ಅವರು ಗುಂಡಕನಾಳ ಹಿರೇಮಠದ ಶ್ರೀ ಷ.ಬ್ರ.ಗುರುಲಿಂಗ ಶಿವಾಚಾರ್ಯ ಶ್ರೀಗಳ ವ್ಯಕ್ತಿತ್ವ ಕುರಿತು ಶ್ರೀಮಠದ ಹಿಂದಿನಿಂದ ಬಂದ ಭಕ್ತರ ಉದ್ದಾರಕ್ಕಾಗಿ ಶ್ರಮಿಸಿದ್ದರ ಬಗ್ಗೆ ಗುಣಗಾನ ಮಾಡಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ವಿಜಯಪುರ ಅನುಗ್ರಹ ವಿಜನ್ ಪೌಂಡೇಶನ್ ಅಧ್ಯಕ್ಷ ನೇತ್ರ ತಜ್ಞವೈಧ್ಯರಾದ ಡಾ.ಪ್ರಭುಗೌಡ ಲಿಂಗದಳ್ಳಿ ಮಾತನಾಡಿ ಜೀವನದಲ್ಲಿ ಅಜ್ಞಾನ, ಸುಜ್ಞಾನ, ವಿಜ್ಞಾನ, ಎಂಬವುಗಳು ಬರುತ್ತವೆ ಅವುಗಳಲ್ಲಿ ವಿಜ್ಞಾನದಿಂದ ನಿರಿಕ್ಷೆಗಳು ಬರುತ್ತವೆ ನೆಮ್ಮದಿಯ ಜೀವನಕ್ಕೆ ಸಾದ್ಯವಾಗುವದಿಲ್ಲಾ, ಸುಜ್ಞಾನವೆಂದರೆ ಪ್ರವಚನ ಕೇಳುವದು ವೃತ ಮಾಡುವದು ಇಂತವುಗಳಿಂದಲೇ ಶಾಂತಿ ದೊರೆಯುತ್ತದೆ ಎಂದ ಡಾ.ಪ್ರಭುಗೌಡ ಅವರು ಅಜ್ಞಾನದಿಂದ ರೋಗ ರುಜಿಗಳು ಹೆಚ್ಚಾಗುತ್ತವೆ ಅದಕ್ಕೆ ಅಜ್ಞಾನಗಳು ಕಾರಣವಾಗುತ್ತದೆ ಸೌಕರ್ಯಗಳು ಹೆಚ್ಚಾದಂತೆ ಮನುಷ್ಯನಿಗೆ ಕೆಲಸದ ಒತ್ತಡ ಕಡಿಮೆಯಾಗಿ ಇಲ್ಲ ಸಲ್ಲದ ರೋಗ ರುಜಿಗಳು ಬರುತ್ತವೆ ಕಾರಣ ಒಳ್ಳೆಯ ಆಹಾರ ಸೇವನೆ ಮಾಡಬೇಕು ಎಂದ ಅವರು ಭಾರತದಲ್ಲಿ 140 ಕೋಟಿ ಜನಸಂಖ್ಯೆ ಹೊಂದಿದ್ದರೂ ಸಕ್ಕರೆ ಕಾಯಿಲೆ ಹೆಚ್ಚಿಗೆ ಕಾಣಿಸಿಕೊಳ್ಳುತ್ತಿದೆ ವಿಜಯಪುರದಲ್ಲಿ 150 ಎಂ.ಡಿ. ವೈಧ್ಯರಿದ್ದರೂ ಈ ತರಹದ ರೋಗಗಳಿಂದ ಆಸ್ಪತ್ರೆಗಳು ತುಂಬುತ್ತಲಿವೆ ಯಾಕೆಂದರೆ ತಮ್ಮ ತಮ್ಮ ಆರೋಗ್ಯದ ಕುರಿತು ಕಾಳಜಿ ಮಾಡದಿರುವದು ಕಾರಣವಾಗಿದೆ ಹಿಂದಿನ ಕಾಲದ ಆಹಾರ ಸೇವನೆ ಪದ್ದತಿ ಕೆಲಸ ಕಾರ್ಯಗಳ ಬಗ್ಗೆ ಜ್ಞಾಪಿಸಿಕೊಂಡ ಅವರು ಆರೋಗ್ಯವೇ ಭಾಗ್ಯವೆಂದು ಅರ್ಥೈಸಿಕೊಂಡು ನಡೆಯಿರಿ ಎಂದು ಗುಂಡಕನಾಳ ಶ್ರೀಗಳ ಮತ್ತು ಶ್ರೀಮಠವು ಭಕ್ತರ ಮೇಲಿಟ್ಟ ಪ್ರೀತಿ ಕುರಿತು ಗುಣಗಾನ ಮಾಡಿದರು.
18ನೇ ವರ್ಷದ ಪಟ್ಟಾಧಿಕಾರ ವಾರ್ಷಿಕೋತ್ಸವ ಆಚರಿಸಿಕೊಂಡ ಗುಂಡಕನಾಳ ಹಿರೇಮಠದ ಶ್ರೀ ಗುರುಲಿಂಗ ಶಿವಾಚಾರ್ಯ ಮಹಾ ಸ್ವಾಮಿಗಳು ಮಾತನಾಡಿ ಮಾನವ ಜನ್ಮ ಸೌಭಾಗ್ಯವು ಹೌದು, ದೌರಭಾಗ್ಯವೂ ಹೌದು ಮೋಹಕ್ಕೆ ಒಳಗಾಗಿ ಸಾಯುವವರೆಗೂ ಶ್ರಮಿಸುವದು ಸುಃಖ ಬಯಸುವದೇ ದೌರಭಾಗ್ಯವಾಗಿದೆ, ಇರುವದನ್ನು ಇರುವಂತೆ ಅರೀತು ಆತ್ಮ ಜ್ಞಾನವನ್ನು ಪಡೆದು ಆತ್ಮ ಸ್ಥಿತಿಗಾಗಿ ಶ್ರಮಿಸುವದೇ ಸೌಭಾಗ್ಯವೆಂದ ಶ್ರೀಗಳು ಮಾನವನಿಗೆ ಅಪಾರ ಶಕ್ತಿ ಇದೆ ಅದನ್ನು ಬಳೆಸಿಕೊಳ್ಳಲು ತಿಳಿದಿಲ್ಲಾ ಜ್ಞಾನ ಸಾಧನೆಯನ್ನು ಏಷ್ಟು ಹೆಚ್ಚಾಗಿ ಮಾಡಿದರೆ ಅಷ್ಟು ಹೆಚ್ಚು ಸಾರ್ಥಕವಾಗಲಿದೆ ಬಧುಕು ಎಂದ ಶ್ರೀಗಳು ಭಕ್ತೋದ್ದಾರ ಜನೋದ್ದಾರವಾಗಬೇಕೆಂಬುದೇ ನಮ್ಮ ಉದ್ದೇಶವಾಗಿದೆ ಎಂದು ಭಕ್ತರು ಶ್ರೀಮಠದ ಮೇಲಿಟ್ಟ ಪ್ರೀತಿ ಕುರಿತು ಗುಣಗಾನ ಮಾಡಿದರು.
ಇದೇ ಸಮಯದಲ್ಲಿ ವೀ.ವಿ.ಸಂಘದ ಅಧ್ಯಕ್ಷ ವ್ಹಿ.ಸಿ.ಹಿರೇಮಠ(ಹಂಪಿಮುತ್ಯಾ), ಹಾಗೂ ಮೌರ್ಯ ರಾಜ್ಯ ಪ್ರಶಸ್ತಿ ಪುರಸ್ಕøತರಾದ ಶ್ರೀಮತಿ ಶಿವಮ್ಮ ಬಿರಾದಾರ, ಮತ್ತು ಮಹಾಂತೇಶ ಮುರಾಳ ಅವರಿಗೆ ವಿಶೇಷವಾಗಿ ಸನ್ಮಾನಿಸಿ ಗೌರವಿಸಲಾಯಿತು.
ವಿಜಯಪುರ ಜಾಲಹಳ್ಳಿ ಬೃಹನ್ ಮಠದ ತಪೋಭೂಷಣ ಗುರುಕುಲ ಭಾಸ್ಕರ ಶಿವಾಚಾರ್ಯ ರತ್ನ ಶ್ರೀ ಷ.ಬ್ರ.ವಿಧ್ಯಮಾನ್ಯ ಶಿವಾಭಿನವ ಜಯಶಾಂತಲಿಂಗೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳ ಉತ್ತರಾಧಿಕಾರಿಯವರು ಪಾವನ ಸಾನಿದ್ಯವಹಿಸಿದ್ದರು.
ಪುರಾಣ ಪ್ರವಚನಕಾರರಾದ ಶ್ರೀ ಶರಣಬಸವ ಶಾಸ್ತ್ರೀಗಳು ಹಾಗೂ ಹಿರೂರ ಶ್ರೀ ಸನ್ನದಾನೇಶ್ವರ ಸಂಸ್ಥಾನ ಹಿರೇಮಠದ ಶ್ರೀ ಷ.ಬ್ರ.ಜಯಸಿದ್ದೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ನೇತೃತ್ವ ವಹಿಸಿ ಮಾತನಾಡಿದರು.
ಎಂಬತ್ನಾಳದ ಚಿಮ್ಮಲಗಿ ಹಿರೇಮಠದ ಶ್ರೀ ಷ.ಬ್ರ.ಸಿದ್ದರೇಣುಕಾ ಶಿವಾಚಾರ್ಯ ಮಹಾಸ್ವಾಮಿಗಳು, ಕೊಡಗಾನೂರ ಹಿರೇಮಠದ ಶ್ರೀ ಕುಮಾರದೇವರು, ವೇ.ಸಂತೋಷಬಟ್ ಜೋಶಿ, ಮುದನೂರ ಕೋರಿ ಸಿದ್ದೇಶ್ವರ ಮಠದ ಶ್ರೀ ಸಿದ್ದಚನ್ನಮಲ್ಲಿಕಾರ್ಜುನ ಶಿವಾಚಾರ್ಯರು, ವಿರಘೋಟ ಆಸನ ಕಟ್ಟಿಮಠದ ಶ್ರೀ ಅಡವಿಲಿಂಗ ಮಹಾರಾಜರು, ಹಾಗೂ ಕೊಡೇಕಲ್ಲ ವಿರಕ್ತಮಠದ ಶ್ರೀ ನೀಲಕಂಠಯ್ಯ ಸ್ವಾಮಿಗಳು, ಉದ್ಯಮೆದಾರ ಸಿದ್ದನಗೌಡ ಬಿರಾದಾರ, ಮಾರಟಗಿ ಶಿವಗೌಡ ಮಾಲಿಪಾಟೀಲ, ಮಡುಸಾಹುಕಾರ ಬಿರಾದಾರ, ಮಲ್ಲನಗೌಡ ಹಗರಟಗಿ, ಯಶವಂತಗೌಡ ಮಾಲಿಪಾಟೀಲ, ಸಿದ್ರಾಮರೆಡ್ಡಿ ಗದಗಿ, ಗುರುನಾಥರೆಡ್ಡಿ, ಮೊದಲಾದವರು ಉಪಸ್ಥಿತರಿದ್ದರು.
ವೇ.ದೊಡ್ಡಬಸಯ್ಯ ಶಾಸ್ತ್ರೀಗಳು ಹಾಗೂ ಪ್ರಭಯ್ಯ ಆಲ್ಯಾಳಮಠ ನಿರೂಪಿಸಿದರು. ಬಸಯ್ಯಶಾಸ್ತ್ರೀಗಳು ವಂದಿಸಿದರು.