ಜೀವನದಲ್ಲಿ ಜಿಗುಪ್ಸೆಗೊಂಡು ಯುವಕ ಆತ್ಮಹತ್ಯೆ

ಕಲಬುರಗಿ,ನ.16-ಜೀವನದಲ್ಲಿ ಜಿಗುಪ್ಸೆಗೊಂಡು ಯುವಕನೊಬ್ಬ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರದ ಛೋಟಾ ರೋಜಾದ ಪಾಶಾಪುರ ಬಡಾವಣೆಯಲ್ಲಿ ನಡೆದಿದೆ.
ಮಿರ್ಜಾ ಸುಬಹಾನ್ ಬೇಗ್ (22) ಆತ್ಮಹತ್ಯೆ ಮಾಡಿಕೊಂಡಿರುವ ಯುವಕ.
ಪಂಬ್ಲರ್ ಕೆಲಸ ಮಾಡುತ್ತಿದ್ದ ಮಿರ್ಜಾ ಸುಬಹಾನ್ ಬೇಗ್ ಕಳೆದ ಒಂದುವರೆ ತಿಂಗಳಿಂದ ತಾಯಿ ತವರು ಮನೆಯಾದ ಹೈದ್ರಾಬಾದನಲ್ಲಿ ತಾಯಿ, ಸಹೋದರರು ಮತ್ತು ಸಹೋದರಿಯ ಜೊತೆಗಿದ್ದರು. ಈಚೆಗೆ ಒಬ್ಬರೆ ಕಲಬುರಗಿಗೆ ಮರಳಿ ಬಂದು ಪಾಶಾಪುರದಲ್ಲಿರುವ ಮನೆಯ ಛತ್ತಿನ ಪೈಪಿಗೆ ದುಪ್ಪಟ್ಟಾದಿಂದ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಈ ಸಂಬಂಧ ಮೃತನ ತಾಯಿ ಜೀನತ್ ಅಂಜುಮ್ ಅವರು ರೋಜಾ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ.