ಜೀವನದಲ್ಲಿ ಗುರು ತತ್ವ ಮುಖ್ಯ

ಇಂಡಿ:ಜು.5:ಗುರು ತತ್ವ ಒಂದು ಅಂಶ,ನಿಮ್ಮೊಳಗಿನ ಗುಣ. ಇದು ದೇಹ ,ರೂಪಕ್ಕೆ ಸೀಮಿತವಾಗಿಲ್ಲ.ನೀವು ನಿರಾಕರಿಸುವ ಅಥವಾ ಬಂಡಾಯದ ಹೊರತಾಗಿಯೂ,ಗುರು ನಿಮ್ಮ ಜೀವನದಲ್ಲಿ ಬರುತ್ತಾನೆ.ಜೀವನದಲ್ಲಿ ಗುರು ತತ್ವ ಬಹಳ ಮುಖ್ಯ.ಪ್ರತಿಯೊಬ್ಬ ಮನುಷ್ಯನಲ್ಲಿಯೂ ಆ ವಿವೇಕವನ್ನು ಅವಾಹನೆ ಮಾಡಬೇಕು.ಜಾಗ್ರತಗೊಳಿಸಬೇಕು.ಈ ಅಂಶವು ಜಾಗ್ರತಗೊಂಡಾಗ ಜೀವನದಲ್ಲಿ ದುಖವು ಕಣ್ಮರೆಯಾಗುತ್ತದೆ.ನಮ್ಮ ಪ್ರಜ್ಞೆಯಲ್ಲಿ ಗುರುತತ್ವವು ಜೀವಕ್ಕೆ ಬಂದಾಗ ಬುದ್ದಿವಂತಿಕೆಯುವ ಜೀವಕ್ಕೆ ಬರುತ್ತದೆ.ಯಾವಾಗ ನಮಗೆ ನಮ್ಮದೆ ಆದ ಆಸೆಗಳಿಲ್ಲವೊ ,ಆಗ ಗುರುತತ್ವವು ನಮ್ಮ ಜೀವನದಲ್ಲಿ ಉದಯಿಸುತ್ತದೆ ಎಂದು ಗೋಳಸಾರ ಪುಂಡಲಿಂಗ ಮಹಾಶಿವಯೋಗಿಗಳ ಮಠದ ಪೀಠಾ„ಪತಿ ಅಭಿನವ ಪುಂಡಲಿಂಗ ಮಹಾಶಿವಯೋಗಿಗಳು ಹೇಳಿದರು.

ಅವರು ಸೋಮವಾರ ತಾಲೂಕಿನ ಗೊಳಸಾರ ಗ್ರಾಮದ ಪುಂಡಲಿಂಗ ಶ್ರೀಗಳ ಮಠದಲ್ಲಿ ಭಕ್ತಸಮೂಹ ಹಮ್ಮಿಕೊಂಡ ಗುರುಪೂರ್ಣಿಮೆ ಸಮಾರಂಭದಲ್ಲಿ ಸಾನಿಧ್ಯ ವಹಿಸಿ ಮಾತನಾಡಿದರು.

ನಿಮ್ಮ ಜೀವನಕ್ಕೆ ಬೇಕಾದ ಅರಿವನ್ನು ಯಾರು ನೀಡುತ್ತಾರೋ ಅವರೆಲ್ಲರಿಗೂ ನೀವು ಗೌರವ ನೀಡಬೇಕು.ಗುರುಪೂರ್ಣಿಮೆಯು ನಮ್ಮ ಜೀವನಕ್ಕೆ ಬೇಕಾದ ಅರಿವನ್ನು ನೀಡುವ ಮತ್ತು ಪಡೆದುಕೊಳ್ಳುವ ಪ್ರಕ್ರೀಯೆಗೆ ಸಾಕ್ಷಿಯಾಗುವ ಒಂದು ಆಚರಣೆಯಾಗಿದೆ ಎಂದು ಹೇಳಿದರು.

ಡಾ.ಪ್ರಶಾಂತ ಧೂಮಗೊಂಡ ದಂಪತಿಗಳು ಶ್ರೀ ಅಭಿನವ ಪುಂಡಲಿಂಗ ಮಹಾಶಿವಯೋಗಿಗಳ ಪಾದಪೂಜೆ ಮಾಡುವುದರ ಮೂಲಕ ಗುರುಸ್ಮರಣೆ ಮಾಡಿದರು.

ರೋಡಗಿ ಗ್ರಾಮದ ವೀರಕ್ತಮಠದ ಅಭಿನವ ಶಿವಲಿಂಗೇಶ್ವರ ಶ್ರೀಗಳು ಸಾನಿಧ್ಯ ವಹಿಸಿದ್ದರು.ಎಸ್.ಜಿ.ದೂಮಗೊಂಡ,ಜೆ.ಜೆ.ಡೊಂಬಳಿ,ಸಿ.ಎಸ್.ವಾರದ,ಚಂದಣ್ಣ ಆಲಮೇಲ,ರವಿ ಆಳೂರ,ಶಿವಲಿಂಗಪ್ಪ ನಾಗಠಾಣ, ಆಲಿಂಗರಾಯ ಕುಮಸಗಿ ಸೇರಿದಂತೆ ಭಕ್ತಸಮೂಹ ಕಾರ್ಯಕ್ರಮದಲ್ಲಿ ಇದ್ದರು.