
ದೇವರ ಹಿಪ್ಪರಗಿ.ಏ.11; ಜೀವನದಲ್ಲಿ ಸುಖ ದು:ಖ ನೋವು ನಲಿವು ಇದ್ದೇ ಇರುತ್ತದೆ. ಅವುಗಳಿಗೆ ಅಂಜದೇ ಅಳುಕದೇ ಬಾಳುವುದೇ ನಿಜ ಜೀವನ. ಬದುಕಿನಲ್ಲಿ ಏರಿಳಿತಗಳು ಬರುವುದು ಸಹಜವೆಂದು ತಿಳಿದು ಬಾಳುವುದೇ ಶ್ರೇಯಸ್ಸಿಗೆ ಅಡಿಪಾಯವೆಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರುಅವರು ತಾಲೂಕಿನ ಯಾಳವಾರ ಗ್ರಾಮದಲ್ಲಿ ಜರುಗಿದ ಶ್ರೀ ಸೋಮೇಶ್ವರ ಜಾತ್ರಾ ಮಹೋತ್ಸವ, ಮಹಾದ್ವಾರ ಉದ್ಘಾಟನೆ ಮತ್ತು ಜನ ಜಾಗೃತಿ ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.ಹರಿಯುವ ನದಿ ಯಾವತ್ತೂ ನೇರವಾಗಿ ಸಮುದ್ರ ಸೇರದು. ತೆಗ್ಗು ದಿನ್ನೆ ಹಳ್ಳ ಕೊಳ್ಳ ದಾಟಿ ಸಮುದ್ರ ಸೇರುವಂತೆ ಮನುಷ್ಯ ಜೀವನದಲ್ಲೂ ಸಹ ಉನ್ನತಿ ಅವನತಿ ಬರುವುದು ಸಹಜ. ಗಂದ ತಿಕ್ಕಿದಷ್ಟು ಸುಗಂಧ ಕೊಡುತ್ತದೆ. ಕಬ್ಬು ಜೀಗಿದಷ್ಟು ಸಿಹಿ ಕೊಡುತ್ತದೆ. ಚಿನ್ನ ತಿಕ್ಕಿದಷ್ಟು ಹೊಳಪು ಕೊಡುತ್ತದೆ. ನೋವು ಅನುಭವಿಸಿದಷ್ಟು ಬದುಕು ಸುಂದರಗೊಳ್ಳುತ್ತದೆ. ಸಂಬAಧಗಳು ಎಷ್ಟು ವರುಷ ಬಾಳುತ್ತವೆ ಅನ್ನುವುದಕ್ಕಿಂತ ಆ ಸಂಬAಧಗಳು ಎಷ್ಟು ಅನ್ಯೋನ್ನತೆಯಿಂದ ಬಾಳುತ್ತವೆ ಅನ್ನುವುದು ಮುಖ್ಯ. ಹೂವಿನಲ್ಲಿರುವ ಸುಗಂಧ ಕಾಲ ಕಳೆದಂತೆ ಇಲ್ಲದಂತಾಗಬಹುದು. ಆದರೆ ಗಂಧದ ಮರದ ಶ್ರೀಗಂಧ ಎಂದಿಗೂ ನಾಶವಾಗದೇ ಪರಿಮಳ ಬೀರುತ್ತದೆ. ಎಣ್ಣೆ ಇರುವ ತನಕ ದೀಪ ಬೆಳಗಬಹುದು. ಆದರೆ ಜ್ಞಾನದೀಪ ಸದಾ ಬೆಳಗುತ್ತದೆ ಎಂದು ಶ್ರೀ ಜಗದ್ಗುರು ರೇಣುಕಾಚಾರ್ಯರು ಸಿದ್ಧಾಂತ ಶಿಖಾಮಣಿ ಗ್ರಂಥದಲ್ಲಿ ಬೋಧಿಸಿದ್ದಾರೆ. ಸಾಮರಸ್ಯ ಸದ್ಭಾವನೆ ಬೆಳೆಯಲು ಜಾತ್ರೆಗಳು ಸಹಕಾರಿಯಾಗಿವೆ. ನೂತನ ಮಹಾದ್ವಾರ, ಪಾರ್ವತಿ ಪರಮೇಶ್ವರ ಮಂಟಪ ಉದ್ಘಾಟನೆ, ಸಭಾ ಭವನ ಉದ್ಘಾಟನೆ ಹಲವಾರು ಕಾರ್ಯಕ್ರಮಗಳು ಜರುಗಿರುವುದು ತಮಗೆ ಸಂತಸ ತಂದಿದೆ ಎಂದರು.ಹೀರೂರು ಜಯಸಿದ್ಧೇಶ್ವರ ಶಿವಾಚಾರ್ಯ ಸ್ವಾಮಿಗಳು ಇದೇ ಸಂದರ್ಭದಲ್ಲಿ ದಾನಮ್ಮ ದೇವಿ ಪುರಾಣವನ್ನು ಮಂಗಲಗೊಳಿಸಿದರು. ಆಲಮೇಲ ಚಂದ್ರಶೇಖರ ಶಿವಾಚಾರ್ಯರು, ಗುಂಡಕನಾಳ ಗುರುಲಿಂಗ ಶಿವಾಚಾರ್ಯರು, ಕನ್ನೂರು ಸೋಮನಾಥ ಶಿವಾಚಾರ್ಯರು, ಯಂಕAಚಿ ರುದ್ರಮುನಿ ಶಿವಾಚಾರ್ಯರು, ಕಾಶೀನಾಥ ಮತ್ತು ಮಹಲಿಂಗಯ್ಯ ಶ್ರೀಗಳು ಪಾಲ್ಗೊಂಡು ಮಾತನಾಡಿದರು. ಯಾಳವಾರ ಗುರುಮಠದ ಕೇದಾರಲಿಂಗ ದೇವರು ನೇತೃತ್ವ ವಹಿಸಿ ಮಾತನಾಡಿದರು. ಜಾಲಹಳ್ಳಿ ಜಯಶಾಂತಲಿAಗ ಶಿವಾಚಾರ್ಯರು ಅಧ್ಯಕ್ಷತೆ ವಹಿಸಿ ಉಪದೇಶಾಮೃತವನ್ನಿತ್ತರು. ಸಮಾರಂಭಕ್ಕೂ ಮುನ್ನ ಶ್ರೀ ರಂಭಾಪುರಿ ಜಗದ್ಗುರುಗಳ ಸಾರೋಟ ಉತ್ಸವ ಸಂಭ್ರಮದಿAದ ಜರುಗಿತು.