ಅಥಣಿ :ಅ.10: ಜೀವನದಲ್ಲಿ ನಾವು ಗಳಿಸಿದ ಆಸ್ತಿ, ಅಂತಸ್ತು, ಸಂಪತ್ತು ಯಾವುದೂ ಕೊನೆಯವರೆಗೂ ಉಳಿಯೊಲ್ಲ. ಆದರೆ ಕಲಿತ ವಿದ್ಯೆ ಮಾತ್ರ ಶಾಶ್ವತವಾಗಿ ಕೊನೆಯವರೆಗೂ ಜತೆಗಿರುತ್ತದೆ. ಜೀವನದಲ್ಲಿ ಗುರಿ, ಛಲ, ಗುರುವಿನ ಆಶೀರ್ವಾದ ಇದ್ದರೆ ಮಾತ್ರ ಸಮಾಜದಲ್ಲಿ ಉನ್ನತ ಸ್ಥಾನ ಗಳಿಸಲು ಸಾಧ್ಯ ಎಂದು ಮುಖ್ಯೋಪಾಧ್ಯಾಯ ಸಿ ಕೆ ಲಮಾಣಿ ಅವರು ಹೇಳಿದರು.
ಅವರು ತಾಲೂಕಿನ ನದಿ ಇಂಗಳಗಾಂವ ಗ್ರಾಮದ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಸನ್ 2003 ಹಾಗೂ 2004 ನೇ ಸಾಲಿನ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳ ವತಿಯಿಂದ ಹಮ್ಮಿಕೊಂಡ ಗುರುನಮನ ಮತ್ತು ಅಪೂರ್ವ ಸ್ನೇಹಸಂಗಮವನ್ನು ಜ್ಯೋತಿ ಪ್ರಜ್ವಲಿಸುವ ಮೂಲಕ ಉದ್ಘಾಟಿಸಿ ಮಾತನಾಡುತ್ತಿದ್ದರು.
ಕೃಷಿಕನಿರಲಿ ರೈತನಿರಲಿ ಅಥವಾ ಅಧಿಕಾರಿಯಾಗಿರಲಿ ಯಾವುದೇ ಉನ್ನತ ಹುದ್ದೆಯಲ್ಲಿದ್ದರು ಜೀವನದಲ್ಲಿ ಆವತ್ತು ನಾವು ಕೊಟ್ಟ ವಿಧ್ಯಯಿಂದ ಇವತ್ತು ನೀವು ದೊಡ್ಡ ವ್ಯಕ್ತಿಗಳಾಗಿದ್ದು ಇದಕ್ಕಿಂತ ಸಂತೋಷ ಬೇರೊಂದಿಲ್ಲ, ಶಿವಯೋಗಿಗಳ ನಾಡಿನ ಈ ಪುಣ್ಯಭೂಮಿಯನ್ನು ಮತ್ತು ಇಲ್ಲಿರುವ ವಿದ್ಯಾರ್ಥಿಗಳನ್ನು ಹಾಗೂ ಈ ಶಾಲೆಯನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ ಎಂದರು,
ಇನ್ನೊರ್ವ ಶಿಕ್ಷಕರಾದ ಜಿ ಎಸ್ ಹಂಚಿನಾಳ ಮಾತನಾಡಿ ನನ್ನ 25 ವರ್ಷದ ಸೇವಾ ಅನುಭವದಲ್ಲಿ ನದಿ ಇಂಗಳಗಾಂವ ಶಾಲೆಯ ಮಕ್ಕಳನ್ನು ನಾನು ನೆನೆಯದ ದಿನಗಳಿಲ್ಲ ಯಾಕೆಂದರೆ ಅಂತಹ ಸಂಸ್ಕಾರಯುತ ಮೌಲ್ಯಗಳು ಈ ಪೂಣ್ಯ ಭೂಮಿಯಲ್ಲಿ ಹುಟ್ಟಿಕೊಂಡಿದೆ, ನಮ್ಮ ಕೈಯಲ್ಲಿ ಕಲಿತವರು ತಮ್ಮ ಭವಿಷ್ಯವನ್ನು ಉತ್ತಮ ರೀತಿಯಲ್ಲಿ ರೂಪಿಸಿಕೊಳ್ಳಬೇಕು ಅಷ್ಟೇ ಅಲ್ಲದೆ ನಾವು ಜೀವನದಲ್ಲಿ ಮುಂದೆ ಬರಬೇಕಾದರೆ ತಂದೆ ತಾಯಿ ಆಶಿರ್ವಾದದ ಜೊತೆಯಲ್ಲಿ ಗುರುವಿನ ಮಾರ್ಗದರ್ಶನ ಅವಶ್ಯಬೇಕು ಅದಕ್ಕಾಗಿ ಇವತ್ತು ನನ್ನ ಕೈಯಲ್ಲಿ ಕಲಿತವರು ನನಗಿಂತ ಹೆಚ್ಚಿನ ಹುದ್ದೆಯಲ್ಲಿ ಇರೋದು ನಾನು ಶಿಕ್ಷಣ ನೀಡಿದ್ದಕ್ಕೆ ಸ್ವಾರ್ಥಕವಾಯಿತು ಎಂದರು.
20 ವರ್ಷಗಳ ನಂತರ ದೇಶ, ವಿದೇಶದಲ್ಲಿ ಕಾರ್ಯನಿರ್ವಹಿಸುತ್ತಿದ್ದ ವಿದ್ಯಾರ್ಥಿಗಳೆಲ್ಲರೂ ತಮಗೆ ಅರಿವಿನ ಪಾಠ ಹೇಳಿದ ಗುರುಗಳಿಗೆ ವಂದನೆ ಸಲ್ಲಿಸುವ ,ಮತ್ತು ತಾವು ಕಲಿತ ಶಾಲೆಯಲ್ಲಿ ಕಳೆದ ಮಧುರ ಕ್ಷಣಗಳನ್ನು ಮೆಲುಕು ಹಾಕಿದರು.
ಇದೆ ಸಂದರ್ಭದಲ್ಲಿ ಅಗಲಿದ ಶಿಕ್ಷಕರಿಗೆ ಹಾಗೂ ಗೆಳೆಯರನ್ನು ನೆನೆದು ಭಾವ ಪೂರ್ಣ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಇನ್ನೂ ಶಿಕ್ಷಕರಾದ ಈ ಎನ್ ಚಂದ್ರಗಿರಿ,ಜಿ ಆರ್ ಆಸಂಗಿ, ಸಿ ಜೆ ಗಸ್ತಿ, ಪಿ ಡಿ ಕೋಳೆಕರ, ಎ ಬಿ ಕಾಂಬಳೆ, ಎಸ್ ಬಿ ಹೆಬ್ಬಾಳೆ, ಮಾತನಾಡಿದರು ಹಾಗೂ ವಿನಾಯಕ ಆಸಂಗಿ, ಶಿವಾನಂದ ಮಾಳಿ, ವಿನೋದ ಕಾಂಬಳೆ, ಜಕ್ಕವ್ವ ಅರಳಿಕಟ್ಟಿ,ಹಾಗೂ ಪ್ರೀಯಂಕಾ ಬೊಮ್ಮನ್ನವರ ಅನಿಸಿಕೆಯನ್ನು ಹಂಚಿಕೊಂಡರು,
ಈ ಸಂಧರ್ಭದಲ್ಲಿ ಎಲ್ಲ ಶಿಕ್ಷಕ ವೃಂದವನ್ನು ಹಾಗೂ ಭಾರತೀಯ ಸೈನ್ಯದಲ್ಲಿ ಸೇವೆ ಮಾಡುತ್ತಿರುವ ಹಳೆ ವಿದ್ಯಾರ್ಥಿಗಳಾದ ಸುರೇಶ ಮಧಬಾವಿ, ಆರಿಫ್ ನದಾಪ, ಮುರಿಗೆಪ್ಪ ಮುದಿಗೌಡರ ಅವರನ್ನು ಸನ್ಮಾನ ಮಾಡಿ ಗೌರವಿಸಲಾಯಿತು.
ಕಾರ್ಯಕ್ರಮದ ಧಿವ್ಯ ಸಾನಿಧ್ಯವನ್ನು ಸಿದ್ಧಲಿಂಗ ಮಾಹಾಸ್ವಾಜೀಗಳು ವಹಿಸಿದರು, ಪ್ರಾಂಶುಪಾಲರಾದ ಶ್ರೀಶೈಲ ಮಶ್ಯಾಳೆ, ಶಿಕ್ಷಕರಾದ ಶ್ರೀಶೈಲ ಮಲಗೌಡರ, ಭರತೇಶ ಸನದಿ, ಶಿವಶಂಕರ ಚನ್ನಣ್ಣವರ, ಶಿವಾನಂದ ಚನಗೌಡರ, ಸಿದ್ಧಾರೂಡ ಚನಗೌಡರ, ಸಂಗಪ್ಪ ಠಕ್ಕಣ್ಣವರ, ಸದಾಶಿವ ಡಾಬೋಳಿ, ಮಹಾತೇಶ ಮಿರ್ಜಿ, ಅನಸೂಯಾ ಘೂಳಪ್ಪನ್ನವರ, ಬಸಮ್ಮ ಬಾಗೊಜೀಮಠ, ಶಿವಲೀಲಾ ಚನಗೌಡರ, ರೂಪಾ ಉಳ್ಳಾಗಡ್ಡಿ, ಅನೀತಾ ಅಂಬಿ, ಸೇರಿದಂತೆ 2003 ಮತ್ತು 2004 ನೇ ಸಾಲಿನ ಎಲ್ಲ ಹಳೆಯ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.ನಿರೂಪಣೆ ಸಂಗಮೇಶ ಹಚ್ಚಡದ, ಸ್ವಾಗತ ಶಂಕರ ಪಾಟೀಲ, ಹಾಗೂ ವಂದನಾರ್ಪಣೆ ಪ್ರಭು ಗುಡೆನ್ನವರ ಮಾಡಿದರು.