ಜೀವನದಲ್ಲಿ ಆಧ್ಯಾತ್ಮಿಕ ವಿಚಾರಗಳನ್ನು ಅಳವಡಿಸಿಕೊಳ್ಳಿ

ರಾಯಚೂರು,ಮಾ.೨೩- ಜಿಲ್ಲೆಯ ಯಾಪಲದಿನ್ನಿ ಗ್ರಾಮದಲ್ಲಿ ಶ್ರೀದತ್ತ ಸಾಯಿ ಮಂದಿರದ ಭೂಮಿ ಪೂಜೆಯನ್ನು ಗ್ರಾಮೀಣ ಶಾಸಕರಾದ ಬಸವನಗೌಡ ದದ್ದಲ್ ಭೂಮಿ ಪೂಜೆಯನ್ನು ನೆರವೇರಿಸಿದರು. ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಶಿರಡಿಯ ಶ್ರೀ ಓಂ ಸಾಯಿ ನಾಗಭೂಷಣ್ ಬಾಬಾ ಮತ್ತು ಓಂ ಸಾಯಿ ಧ್ಯಾನ ಮಂದಿರದ ಅಧ್ಯಕ್ಷರಾದ ಶ್ರೀ ಸಾಯಿ ಕಿರಣ್ ಆದೋನಿ ವಹಿಸಿಕೊಂಡಿದ್ದರು.
ಸಾಯಿ ಕಿರಣ್ ಆದೋನಿ ಇವರು ಯಾಪಲದಿನ್ನಿ ಗ್ರಾಮದಲ್ಲಿ ಲೋಕ ಪುರುಷ ಹಲವಾರು ಪವಾಡಗಳ ಮುಖಾಂತರ ಜನರಿಗೆ ಉತ್ತಮ ಸನ್ಮಾರ್ಗವನ್ನು ತೋರಿಸಿರುವ ಸದ್ಗುರು ಶ್ರೀ ಶಿರಡಿ ಸಾಯಿನಾಥ ಇಂತಹ ಭಗವಂತನ ದೇವಸ್ಥಾನವನ್ನು ಕರ್ನಾಟಕದ ಗಡಿಭಾಗವಲ್ಲಿ ನಿರ್ಮಿಸುತ್ತಿದ್ದು, ಪ್ರತಿಯೊಬ್ಬರೂ ಸಹ ದೇವಸ್ಥಾನಕ್ಕೆ ಸುತ್ತಮುತ್ತಲಿನ ಎಲ್ಲಾ ಗ್ರಾಮಸ್ಥರು ಮತ್ತು ಊರಿನ ಮುಖಂಡರು ಸಹಾಯ ಮತ್ತು ಸಹಕಾರ ನೀಡಿ ಸಾಯಿಬಾಬಾ ಕೃಪೆಗೆ ಪಾತ್ರರಾಗಬೇಕೆಂದು ತಿಳಿಸಿದರು.
ನಾಗಭೂಷಣ್ ಬಾಬಾ ಇವರ ಮಾತನಾಡಿ ಮನುಷ್ಯನಿಗೆ ಜೀವನದಲ್ಲಿ ಆಧ್ಯಾತ್ಮಿಕತೆ ಎನ್ನುವುದು ಬಹಳ ಮುಖ್ಯ ಪ್ರತಿಯೊಬ್ಬರೂ ಸಹ ಭಗವಂತನ ಮಕ್ಕಳು ನಾವೆಲ್ಲರೂ ಜೀವನದಲ್ಲಿ ಪ್ರತಿಯೊಬ್ಬರೂ ಸಹ ಆಧ್ಯಾತ್ಮಿಕ ವಿಚಾರಗಳನ್ನು ಅಳವಡಿಸಿಕೊಂಡು ಭಗವಂತನ ಕೃಪೆಗೆ ಪಾತ್ರರಾಗಬೇಕು ಎಂದು ತಿಳಿಸಿದರು.
ಶಾಸಕರಾದ ದದ್ದಲ್ ಬಸನಗೌಡ ಮಾತನಾಡಿ ನಮ್ಮ ಗ್ರಾಮೀಣ ಕ್ಷೇತ್ರದಲ್ಲಿ ಇಂಥ ಬೃಹತ್ ದೇವಸ್ಥಾನ ನಿರ್ಮಾಣ ಮಾಡುತ್ತಿರುವುದು ಬಹಳ ಸಂತೋಷದಾಯಕ ವಿಷಯ ಪ್ರತಿಯೊಬ್ಬರೂ ಸಹ ಜೀವನದಲ್ಲಿ ಒಂದು ಪುಣ್ಯಕಾರಕ್ಕೆ ಸಹಾಯ ಮತ್ತು ಸಹಕಾರ ನೀಡಬೇಕು ಹಾಗೂ ಜೀವನದಲ್ಲಿ ಆಧ್ಯಾತ್ಮಿಕ ವಿಚಾರಗಳನ್ನು ಅಳವಡಿಸಿಕೊಂಡು ಉತ್ತಮ ನಾಗರಿಕರಾಗಿ ಬಾಳಬೇಕು ಸಹಾಯ ಮತ್ತು ಸಹಕಾರ ಮನೋಭಾವವನ್ನು ಬೆಳೆಸಿಕೊಳ್ಳಬೇಕು ಈ ಒಂದು ಪುಣ್ಯ ಕಾರ್ಯಕ್ಕೆ ಸುಮಾರು ೧೦ ಲಕ್ಷ ಅನುದಾನವನ್ನು ನೀಡುವುದಾಗಿ ಘೋಷಿಸಿದರು.
ಕಾರ್ಯಕ್ರಮದ ನಿರೂಪಣೆಯನ್ನು ನರಸಿಂಹಲು ಯಾಪಲ್ ದಿನ್ನಿ ನೆರವೇರಿಸಿ ಕೊಟ್ಟರು.
ಕೃಷಿ ಉತ್ಪನ್ನ ಮಾರುಕಟ್ಟೆಯ ಅಧ್ಯಕ್ಷರಾದ ಅಚ್ಚುತರೆಡ್ಡಿ ಊರಿನ ಮುಖಂಡರಾದ ರಾಜಶೇಖರಪ್ಪ ಸಾಹುಕಾರ ಮನೋಹರ ಸಾಹುಕಾರ್ ವಸಂತ್ ರೆಡ್ಡಿ ರಂಗಪ್ಪ ನಾಯಕ್ ಕಾಂಗ್ರೆಸ್ಸಿನ ಮುಖಂಡರಾದ ಶ್ರೀನಿವಾಸ ರೆಡ್ಡಿ ಸೂಗೂರಪ್ಪ ನಾಯಕ್. ತಿಮ್ಮಪ್ಪ ನಾಯಕ್. ಎಸ್ ಡಿಎಂಸಿ ಕಾರ್ಯಾಧ್ಯಕ್ಷರಾದ ವೀರೇಶ್. ಕೃಷ್ಣ ಜಂಗಲಪ್ಪಗೌಡ. ಗ್ರಾಮ ಪಂಚಾಯತಿ ಅಧ್ಯಕ್ಷರಾದ ಉಮೇಶ್ ಎಲ್ಲಾ ಸದಸ್ಯರು ಸುತ್ತಮುತ್ತಲಿನ ಗ್ರಾಮದ ಎಲ್ಲಾ ಹಿರಿಯರು ಭಾಗವಹಿಸಿದ್ದರು. ಗ್ರಾಮದ ಎಲ್ಲ ಯುವಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.