ಜೀವನದಲ್ಲಿ ಆತ್ಮವಲೋಕನ ಮಾಡಿಕೊಳ್ಳಬೇಕು : ಗುರೂಜಿ


ಸಂಜೆವಾಣಿ ವಾರ್ತೆ
ಹಗರಿಬೊಮ್ಮನಹಳ್ಳಿ.14 ಜೀವನದಲ್ಲಿ ಒಳ್ಳೆ ವಿಚಾರಗಳನ್ನು ವಿನಿಮಯ ಮಾಡಿಕೊಳ್ಳುವ ಮೂಲಕ ಆತ್ಮವಲೋಕನ ಮಾಡಿಕೊಳ್ಳಬೇಕು ಎಂದು ಗುರು ಸಂಪದ ಸಂಸ್ಕೃತ ಅಧ್ಯಯನ ಕೇಂದ್ರದ ಎಸ್ ಎಲ್ ಗುರುರಾಜ್ ತಿಳಿಸಿದರು.
ಪಟ್ಟಣದ ಅಂಬಾಡಿ ಮಹೇಶ್ ಮನೆ ಅಂಗಳದಲ್ಲಿ ಭಾನುವಾರ ಏರ್ಪಡಿಸಿದ್ದ 97ನೇ ಮನೆ ದೀಪ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ ಕುಟುಂಬದೊಂದಿಗೆ ಸಮಯವನ್ನು ಮೀಸಲಿಡಿ ಅವರೊಂದಿಗೆ ಹಳೆಯ ನೆನಪು ಹಾಸ್ಯ, ಚಿಂತನೆಗಳನ್ನು ಮಾಡುವ ಮೂಲಕ ಸಂಕಲ್ಪ ಮಾಡಿಕೊಡಬೇಕು. ಜೀವನದ ದಾರಿಯುದ್ಧಕ್ಕೂ ಸಿಂಹಾವಾಲೋಕನ ಮಾಡಿಕೊಳ್ಳಬೇಕು. ದೇಹ ದಿನದಿನಕ್ಕೂ ಶಿಥಿಲವಾಗುತ್ತದೆ ಅದರಲ್ಲಿ ಈಗಿನ ಆಹಾರದಲ್ಲಿ ವಿಷಮಿಶ್ರಿತ ಹೊಂದಿದ ಊಟ   ಹೆಚ್ಚಾಗಿ ಸೇವಿಸುತ್ತಿದ್ದೇವೆ ತರಕಾರಿಯಿಂದ ಹಿಡಿದು ಸೊಪ್ಪು ಆಹಾರಧಾನ್ಯ ಸೇರಿ ಎಲ್ಲಾ ಆಹಾರದಲ್ಲಿ ರಾಸಾಯನಿಕ ಪದಾರ್ಥ ಸೇರಿಕೊಂಡಿದೆ. ಆದ್ದರಿಂದ ಮನುಷ್ಯ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಬೇಕಾಗಿದೆ ಭೂಮಿಯ ಮಣ್ಣಿನಲ್ಲಿ ಹಲವಾರು ರೋಗನಿರೋಧ ಶಕ್ತಿ ಹೊಂದಿದೆ ಮಣ್ಣಿನ ವಾಸನೆ ದೇಹವನ್ನು ಸ್ಪರ್ಶಿಸುವ ಕೆಲಸವಾಗಬೇಕು ಅದರಿಂದ ಹಲವಾರು ರೋಗಗಳು ದೂರವಾಗುತ್ತವೆ. ಸ್ವಾತಿಯ ಮಳೆಯ ನೀರು ಸಂಗ್ರಹ ಇಟ್ಟುಕೊಂಡು ಒಂದು ವರ್ಷ ವಾದರೂ ನೀರು ಕೆಡುವುದಿಲ್ಲ ಆ ನೀರು ಉಪಯೋಗಿಸಿದರೆ ಆರೋಗ್ಯ  ವೃದ್ಧಿಸುತ್ತದೆ ಎಂದರು.
 ಈ ಸಂದರ್ಭದಲ್ಲಿ ಸೋಮನಗೌಡ, ರಮೇಶ್ ಪತ್ತಾರ್, ಅಂಬಾಡಿ  ಮಹೇಶ್, ಶ್ವೇತಾ ಮಹೇಶ್, ಅಂಬಾಡಿ ನಾಗರಾಜ್, ಶಿಲ್ಪಾ ನಾಗರಾಜ್, ಬಿ ಮಂಜುನಾಥ್ ಗೀತಾ ಮಂಜುನಾಥ್, ಪಾಟೀಲ್ ಕೊಟ್ರಗೌಡ, ಬಾರಿಕರ  ಮಾರುತೇಶ್, ಶಿವನ ಗೌಡ, ನಾಗಪ್ಪ ವೀರೇಶ್  ಇತರರಿದ್ದರು.