ಜೀವನಕ್ಕೆ ನೆರವಾಗುವ ಕವನಗಳು ರಚನೆಯಾಗಲಿ :ಡಾ.ಹೇಮಲತಾ ವಡ್ಡೆ

ಬೀದರ:ಮಾ.17:ಹುಟ್ಟುತಲೇ ಯಾರೂ ಕವಿ, ಸಾಹಿತಿಗಳಾಗಿರುವುದಿಲ್ಲ. ಸಾಹಿತ್ಯದ ಮೇಲೆ ಆಗಾಧ ಒಲವು ಹೊಂದಿದ್ದು, ಸತತ ಪ್ರಯತ್ನ ಪಡುವ ಮೂಲಕ ಉತ್ತಮ ಕವನಗಳನ್ನು ರಚಿಸಬಹುದಾಗಿದೆ ಎಂದು ಬೆಂಗಳೂರಿನ ಸಾಹಿತಿ ಡಾ.ಹೇಮಲತಾ ವಡ್ಡೆ ಅವರು ತಿಳಿಸಿದರು.

ಕನ್ನಡ ಸಾಹಿತ್ಯ ಪರಿಷತ್ತಿನಿಂದ ನಗರದ ಪೂಜ್ಯ ಡಾ.ಚನ್ನಬಸವ ಪಟ್ಟದೇವರು ರಂಗಮಂದಿರದಲ್ಲಿ ಮಾರ್ಚ್ 16ರಂದು ನಡೆದ ಕವಿಗೋಷ್ಠಿಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಹಲವು ಒತ್ತಡಗಳ ನಡುವೆಯೂ ಹೆಣ್ಣು ಮಕ್ಕಳು ಸಾಹಿತ್ಯ ರಚನೆಯಲ್ಲಿ ತೊಡಗಿಸಿಕೊಳ್ಳುತ್ತಿರುವುದು ಆಶಾದಾಯಕ ಬೆಳವಣಿಗೆಯಾಗಿದೆ. ಯುವ ಸಾಹಿತಿಗಳು ವಿಷಯ ವಸ್ತುವಿನ ಬಗ್ಗೆ ಹೆಚ್ಚಿನ ಗಮನ ಹರಿಸಬೇಕು. ಪುನರಾವರ್ತನೆಯಾದ ವಿಷಯಗಳನ್ನು ಹೊರತುಪಡಿಸಿ ಹೊಸ ವಿಷಯಗಳು ಮತ್ತು ಜೀವನಕ್ಕೆ ನೆರವಾಗುವ ವಿಷಯಗಳನ್ನು ವಿಷಯ ವಸ್ತುವನ್ನಾಗಿಸಿಕೊಂಡಲ್ಲಿ ಕವನಗಳನ್ನು ಇನ್ನಷ್ಟು ಪರಿಣಾಮಕಾರಿಯಾಗಿಸಬಹುದು ಎಂದು ಸಲಹೆ ಮಾಡಿದರು.

ಕವನ ರಚನೆಯಷ್ಟೇ ಮಹತ್ವ ಕವನ ವಾಚನಕ್ಕಿದೆ. ಯುವ ಕವಿಗಳು ಉತ್ತಮ ಕವನ ವಾಚನ ಮಾಡುವುದು ಹೇಗೆಂಬುದದನ್ನು ರೂಡಿಸಿಕೊಳ್ಳಬೇಕು. ತಾವು ಶ್ರಮವಹಿಸಿ ಬರೆದ ಕವನ ಉತ್ತಮವಾಗಿ ನಿರೂಪಿಸಿದಲ್ಲಿ ಕಾವ್ಯಕ್ಕೆ ಜೀವ ತುಂಬಬಹುದು ಎಂದರು.

ಸಾನಿಧ್ಯ ವಹಿಸಿದ್ದ ಬೀದರ ಲಿಂಗಾಯತ ಮಹಾಮಠದ ಪೂಜ್ಯ ಡಾ.ಅನ್ನಪೂರ್ಣ ತಾಯಿ ಮಾತನಾಡಿ, ಮಹಿಳೆಯರಲ್ಲಿ ಸಾಕಷ್ಟು ಪ್ರತಿಭೆ ಸೂಪ್ತವಾಗಿ ಅಡಗಿರುತ್ತದೆ. ಅದನ್ನು ಗುರುತಿಸಿ ಬೆಳೆಸುವ ಕೆಲಸವಾಗಬೇಕು. ಬರೆಯಬೇಕೆಂದು ಜೊಡಣೆ ಮಾಡಿದ ಅಕ್ಷರಗಳು ಕಾವ್ಯವಾಗುವುದಿಲ್ಲ. ವಿಷಯ ಅಂತಾರಾತ್ಮದಿಂದ ಹೊರಬರಬೇಕು. ಇಂತಹ ಕಾವ್ಯಗಳು ಯಶಸ್ವಿಯಾಗುತ್ತವೆ ಎಂದು ತಿಳಿಸಿದರು.

ಸಾಹಿತಿ ಮೇನಕಾ ಪಾಟೀಲ ಅವರು ಆಶಯನುಡಿಗಳನ್ನಾಡಿದರು. ಸಮ್ಮೇಳನಾಧ್ಯಕ್ಷರಾದ ಪ್ರೊ.ಸಿದ್ರಾಮಪ್ಪಾ ಮಾಸಿಮಾಡೆ, ಕೇಂದ್ರ ಕಸಾಪ ಮಹಿಳಾ ಪ್ರತಿನಿಧಿ ಮಲ್ಲಮ್ಮ ಆರ್.ಪಾಟೀಲ, ಕಸಾಪ ಜಿಲ್ಲಾಧ್ಯಕ್ಷರಾದ ಸುರೇಶ ಚನ್ನಶೆಟ್ಟಿ, ಗೌರವ ಕಾರ್ಯದರ್ಶಿ ಶಿವಕುಮಾರ ಕಟ್ಟೆ, ಟಿ.ಎಂ ಮಚ್ಚೆ, ಕೋಶಾಧ್ಯಕ್ಷ ಶಿವಶಂಕರ ಟೋಕರೆ, ಸಾಹಿತಿ ಭಾರತಿ ವಸ್ತ್ರದ್, ಗುಲ್ಬರ್ಗಾ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರಾದ ಪ್ರತಿಭಾ ಚಾಮಾ, ಸಾಹಿತಿ ರಜಿಯಾ ಬಳಬಟ್ಟಿ, ಸಾಧನಾ ರಂಜೋಳಕರ್, ಜಗದೇವಿ ದುಬಲಗುಂಡಿ, ಶ್ರೀದೇವಿ ಹೂಗಾರ, ಪಾರ್ವತಿ ವಿ.ಸೋನಾರೆ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶಾರದಾ ಕಲ್ಮಲ್‍ಕರ್, ಸುಷ್ಮಾ ಚಂದ್ರಶೇಖರ ಪಾಟೀಲ, ಶಿಲ್ಪಾ ಹಾಗೂ ಇತರರು ಉಪಸ್ಥಿತರಿದ್ದರು. ರೂಪಾ ಪಾಟೀಲ ಸ್ವಾಗತಿಸಿದರು. ಕಸ್ತೂರಿ ಪಟಪಳ್ಳಿ ನಿರೂಪಿಸಿದರು. ಮಹಾನಂದಾ ಎಂಡೆ ವಂದಿಸಿದರು.

ಮಹಿಳಾ ಸಾಹಿತಿಗಳಿಂದ ಕವನ ವಾಚನ: ಗೋಷ್ಠಿಯಲ್ಲಿ ಸುಮಾರು 50ಕ್ಕೂ ಹೆಚ್ಚು ಮಹಿಳಾ ಕವಿಗಳು ಸ್ವ-ರಚಿತ ಕವನಗಳನ್ನು ವಾಚಿಸಿ ಗಮನ ಸೆಳೆದರು. ಉಮಾದೇವಿ ಬಾಪೂರೆ, ಕುಸುಮಾ ಹತ್ಯಾಳ, ಚನ್ನಮ್ಮ ವಲ್ಲೆಪೂರೆ, ಜಗದೇವಿ ಹುಮನಾಬಾದ, ಡಾ.ಜಗದೇವಿ ತಿಬಶೆಟ್ಟಿ, ಡಾ.ಭುವನೇಶ್ವರಿ, ಡಾ.ಸುಜತಾ ಹೊಸಮನಿ, ಡಾ.ಶ್ರೇಯಾ ಮಹೇಂದ್ರಕರ, ಧನಲಕ್ಷ್ಮಿ ಠಾಕೂರ, ಪುಷ್ಪ ಕನಕ, ಪುಷ್ಪಾ ಚಿಕುರ್ತೆ, ಪ್ರತಿಭಾ ಮೆಂಚ್, ಭಕ್ತಿ ಮಹೇಶ ಪಾಟೀಲ, ಮಲ್ಲೇಶ್ವರಿ ಉದಯಗಿರಿ, ಮಾಧುರಿ ಎಸ್.ಕೆ, ಮೇರಿ ಮಾರ್ಗರೇಟ್, ರಾಜಮ್ಮ ಚಿಕಪೇಟ್, ರಾಜಶ್ರೀ ರಾಗಾ, ರೇಣುಕಾ ಎನ್.ಬಿ, ರೇಣುಕಾ ಮಠ, ರೇಣುಕಾ ಮಳ್ಳಿ, ಲಕ್ಷ್ಮಿ ಗಾದಗೆ, ವಿದ್ಯಾವತಿ ಬಲ್ಲೂರು, ವೇದಾವತಿ ಮಠಪತಿ, ಕೀರ್ತಿ ಲತಾ, ಶಾಂತಮ್ಮ ಬಲ್ಲೂರು, ಶೈಲಜಾ ಹುಡಗೆ, ಶ್ರೀದೇವಿ ವಿ.ಪಾಟೀಲ, ಸಂತೋಷಿ ಮಠಪತಿ, ಸರೀತಾ ಬೇಬಿ, ಸಾರಿಕಾ ಗಂಗಾ, ಸುನಿತಾ ಎಸ್.ಪಾಟೀಲ, ಸುಪ್ರಿತಾ ಶೀಲವಂತ, ಸ್ವರೂಪರಾಣಿ ನಾಗೊರಾ ಹಾಗೂ ಇತರರು ಕವನ ವಾಚಿಸಿದರು.