ಜೀವನಕ್ಕೆ ಆಧ್ಯಾತ್ಮ ಅತ್ಯವಶ್ಯಕ: ಸಿದ್ದೇಶ್ ಕುರ್ಕಿ

ದಾವಣಗೆರೆ.ಮಾ.15;  ಇಂದು ಗ್ರಾಮೀಣ ಮಹಿಳೆಯರು ಶಿಕ್ಷಣ ಪಡೆದು ಎಲ್ಲಾ ರಂಗದಲ್ಲೂ ಮತ್ತು ಎಲ್ಲಾ ಸರ್ಕಾರದ ಇಲಾಖೆಗಳಲ್ಲಿ ಕಾಯ೯ ನಿರ್ವಹಿಸುತ್ತಾ ಆರ್ಥಿಕದಲ್ಲಿ ಸಬಲೀಕರಣಗೊಂಡು ಮನೆ ಕುಟುಂಬ . ಮನೆತನ ಜವಾಬ್ದಾರಿ  ವಹಿಸಿಕೊಂಡು ರಾಜ್ಯದ  ದೇಶದ ಆರ್ಥಿಕ ಬೆಳವಣಿಗೆಯಲ್ಲಿ ಸಹಕಾರಿಯಾಗುತ್ತಿರುವುದು ಒಳ್ಳೆಯ ಬೆಳವಣಿಗೆ ಎಂದು ಸಾಹಿತಿಗಳಾದ  ಎಸ್.ಸಿದ್ದೇಶ್ ಕುರ್ಕಿಯವರು ದಾವಣಗೆರೆ ತಾಲೂಕಿನ ಹೊಸ ಬೆಳವನೂರಿನಲ್ಲಿ ನಡೆದ 9 ನೇ ಸಾಹಿತ್ಯ ಸಮ್ಮೇಳನದ ಸಾಹಿತ್ಯ ಗೋಷ್ಠಿಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.ನಾವು ಆಧ್ಯಾತ್ಮವೆಂದರೆ ಸನ್ಯಾಸಿಗಳಿಗೆ  ಧರ್ಮಗುರುಗಳಿಗೆ ಸಿಮೀತವಾಗಿದ್ದು ಎಂದು ಭಾವಿಸಿದ್ದೇವೆ. ಇದು ತಪ್ಪು ಆಧ್ಯಾತ್ಮ ಎಂದರೆ ತನ್ನನ್ನು ತಾನು ಅರಿಯುವುದು ಎಂದು ಅರ್ಥ. ಸನಾತನ ಧಮ೯ದಲ್ಲಿ ಆಧ್ಯಾತ್ಮಿಕ ಜೀವನಕ್ಕೆ ಹೆಚ್ಚಿನ ಪ್ರಾಶಸ್ತೆ ನೀಡಲಾಗಿದೆ. ಲೌಕಿಕ ಜೀವನದಲ್ಲಿದ್ದುಕೊಂಡು ಸಹ ಆಧ್ಯಾತ್ಮಿಕ ಸಾಧನೆ ಮಾಡಿದಾಗ  ಜೀವನ ಸುಖಕರವಾಗುತ್ತದೆ. ಹಕ್ಕಿಗೆ ಹಾರಲು ಎರಡು ರೆಕ್ಕೆಗಳು ಬೇಕಾಗುವಂತೆ ಸ್ವಾಭಾವಿಕವಾದ ಹಾಗೂ ಸಮರಸದ ಜೀವನ ಸಾಗಿಸಲು ಮನುಷ್ಯನಿಗೆ ಆಧ್ಯಾತ್ಮಿಕ ಮತ್ತು ಲೌಕಿಕಗಳೆಂಬ ಬದುಕಿನ ಎರಡು ಆಯಾಮಗಳ ಆಗತ್ಯವಿದೆ. ಬದುಕೆಂಬ ಜೀವನ ನಡೆಸಲು ಆಧ್ಯಾತ್ಮಿಕ ಸರಳ ಸೂತ್ರಗಳು. ಆಹಿಂಸೆ ಮತ್ತು ಕೋಪವನ್ನು ನಿಗ್ರಹಿಸುವುದು ಆಗತ್ಯಕ್ಕಿಂತ ಹೆಚ್ಚಿನದನ್ನು ಉಳಿದವರ ಒಳಿತಿಗೆ ನೀಡುವುದು. ನಂಬಿಕೆ .ತಾಳ್ಮೆ ಮತ್ತು ಸರಳತೆ, ಕಾಮ , ಕ್ರೋಧ, ಮತ್ಸರ. ಆಹಂಕಾರ ತ್ಯಜಿಸುವುದು . ಧ್ಯಾನ. ಯೋಗ . ಪೂಜೆ . ಪ್ರಾರ್ಥನೆಯೊಂದಿಗೆ ಅಷ್ಟಾವರಣಗಳಾದ ಗುರು, ಲಿಂಗ, ಜಂಗಮ. ವಿಭೂತಿ. ರುದ್ರಾಕ್ಷಿ. ಮಂತ್ರ.ಪಾದೋದಕ . ಮತ್ತು ದಾಸೋಹಗಳ  ಪಾಲನೆ ಜೊತೆಗೆ ಅಧ್ಯಾತ್ಮದ ಮಹಾಮಂತ್ರ ಓಂ ನಮಃ ಶಿವಾಯ. ಷಡಕ್ಷರಿ ಮಂತ್ರ. ನಮಃ ಶಿವಾಯ ಪಂಚಾಕ್ಷರಿ ಮಂತ್ರ ಪಠಣೆ ಮಾಡಬೇಕು.ಮಂತ್ರದ ಅರ್ಥ ಆತ್ಮನಾದ ನಾನು ಪರಮಾತ್ಮನಾದ ಶಿವನಿಗೆ ನಮಸ್ಕಾರಗಳನ್ನು ಮಾಡುತ್ತೇನೆ ಎಂದರ್ಥ . ಬದುಕಿಗೆ ಆಧ್ಯಾತ್ಮ ಅತ್ಯವಶ್ಯ ಎಂದರು.ಮುಂದುವರೆದು ಮಾತನಾಡಿದ ಅವರು ಸಾಹಿತ್ಯ  ಇಲ್ಲದೆ ಯಾವ ಕ್ಷೇತ್ರವೂ ಮುಂದುವರಿಯಲಾರದು . ವಿಜ್ಞಾನವಿರಲಿ. ತಂತ್ರಜ್ಞಾನವಿರಲಿ. ಅಭಿವ್ಯಕ್ತಿ ವಿಚಾರವಿರಲಿ ಎಲ್ಲವೂ ವ್ಯಕ್ತವಾಗುವುದು ಸಾಹಿತ್ಯದ ಬರಹದ ಮೂಲಕವೇ ಅರ್ಥವಾಗುವುದು ಎಂದರು. ಸಾಹಿತಿಗಳ ಬರವಣಿಗೆ. ಪ್ರಕಟಣೆ. ಬಿಡುಗಡೆಯ ಸಮಸ್ಯೆಗಳನ್ನು ಎಳೆ ಎಳೆಯಾಗಿ      ಬಿಡಿಸಿದರು. ಸಾಹಿತ್ಯ ಗೋಷ್ಠಿಯಲ್ಲಿ ಗ್ರಾಮೀಣ ಮಹಿಳಾ ಶಿಕ್ಷಣ ಮತ್ತು ಆರ್ಥಿಕ ಸಬಲೀಕರಣದ ಬಗ್ಗೆ ಡಾ. ಕಾವ್ಯಶ್ರೀ ಯವರು  ಸಾಹಿತ್ಯದಲ್ಲಿ ಸಮಕಾಲೀನ ಸಮಸ್ಯೆಗಳು ಮತ್ತು ಸವಾಲುಗಳ ಬಗ್ಗೆ ಶ್ರೀಮತಿ ಗೀತಾ ಬಸವರಾಜ್ ರವರು ಹಾಗು ಜೀವನದಲ್ಲಿ ಆಧ್ಯಾತ್ಮದ ಬಗ್ಗೆ  ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯಾದ ಸಂಚಾಲಕರಾದ ಬ್ರಹ್ಮ ಕುಮಾರಿ ಲೀಲಾಜಿಯವರು  ಉಪನ್ಯಾಸ ನೀಡಿದರು. ಕಾಯ೯ಕ್ರಮದಲ್ಲಿ ಸಮ್ಮೇಳನ ಅಧ್ಯಕ್ಷರಾದ ಬಿ.ಎನ್.ಮಲ್ಲೇಶ್. ಜಿಲ್ಲಾ ಸಾಹಿತ್ಯ ಪರಿಷತ್ತು ಅಧ್ಯಕ್ಷರಾದ ಬಿ ವಾಮದೇವಪ್ಪನವರು.. ತಾಲುಕು ಅಧ್ಯಕ್ಷರಾದ  ಸುಮತಿ ಜಯಪ್ಪ ಉಪಸ್ಥಿತರಿದ್ದರು.