ಜೀವಣಗಿ ಎನ್ ಎಸ್ ಎಸ್ ಶಿಬಿರ ಉದ್ಘಾಟನೆ

ಕಲಬುರಗಿ:ಜು.27:ಸಾಂಸ್ಕøತಿಕ ಚಟುವಟಿಕೆಗಳನ್ನು ನೀರುಣಿಸಿ ಪೆÇೀಷಿಸುವ ಕೆಲಸ ಎನ್.ಎಸ್.ಎಸ್. ಶಿಬಿರ ಮಾಡುತ್ತದೆ ಎಂದರು ಗುಲ್ಬರ್ಗ ವಿಶ್ವವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆಯ ಅಧಿಕಾರಿ ಪೆÇ್ರ. ಎನ್. ಜಿ. ಕಣ್ಣೂರು ತಿಳಿಸಿದರು.

ನೂತನ ವಿದ್ಯಾಲಯ ಪದವಿ ಮಹಾವಿದ್ಯಾಲಯ ಕಲಬುರಗಿ, ಮಹಾವಿದ್ಯಾಲಯದ ಆಯ್.ಕ್ಯು.ಎ.ಸಿ. ಹಾಗೂ ಗುಲ್ಬರ್ಗ ವಿಶ್ವವಿದ್ಯಾಲಯ, ಕಲಬುರಗಿ ಸಹಯೋಗದೊಂದಿಗೆ ಕಮಲಾಪುರ ತಾಲ್ಲೂಕಿನ ಜೀವಣಿಗಿ ಗ್ರಾಮದಲ್ಲಿ ನಡೆದ ರಾಷ್ಟ್ರೀಯ ಸೇವಾ ಯೋಜನೆಯ ವಿಶೇಷ ಶಿಬಿರದ ಉದ್ಘಾಟನಾ ಸಮಾರಂಭದಲ್ಲಿ ಪೆÇ್ರ. ಎನ್.ಜಿ.ಕಣ್ಣೂರ ಅವರು ಮಾತಾಡಿ ಶಿಬಿರಾರ್ಥಿಗಳು ಏಳು ದಿನಗಳ ಶಿಬಿರದಲ್ಲಿ ಗ್ರಾಮೀಣ ಪ್ರದೇಶದ ಜನರೊಂದಿಗೆ ಬೆರೆತು ಸಾಮಾಜಿಕ ಪ್ರಜ್ಞೆ ಮೂಡಿಸಬೇಕು, ಅದರೊಂದಿಗೆ ತಮ್ಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬೇಕು ಎಂದು ಶಿಬಿರಾರ್ಥಿಗಳಿಗೆ ಕರೆ ನೀಡಿದರು.

ಶಿಬಿರವನ್ನು ಉದ್ಘಾಟಿಸಿದ ಜೀವಣಿಗಿ ಗ್ರಾಮ ಪಂಚಾಯಿತಿಯ ಅಧ್ಯಕ್ಷೆ ಸುನೀತಾ ಗುಂಡೇರಾವ ಅವರು ಮಾತಾಡಿ ಸಮಾಜದ ಸ್ವಾಸ್ಥ್ಯ ಕಾಪಾಡುವಲ್ಲಿ ಶಿಬಿರಾರ್ಥಿಗಳ ಪಾತ್ರ ಬಹು ಮುಖ್ಯ ಎಂಬುದನ್ನು ಹೇಳಿದರು. ಜೀವಣಿಗಿ ಗ್ರಾಮ ಪಂಚಾಯಿತಿಯ ಪಿ.ಡಿ.ಓ ಕುಮಾರಿ ಮಹಾನಂದ ರವರು ಮಾತನಾಡಿ ಸಸಿ ನೆಡುವ ಕಾರ್ಯಕ್ರಮ ಜೀವಪರವಾಗಿದ್ದು, ಗಿಡಗಳನ್ನು ಬೆಳೆಸುವ ಜವಾಬ್ದಾರಿ ಎಲ್ಲರದು ಎಂದು ಹೇಳಿದರು. ಅಧ್ಯಕ್ಷತೆವಹಿಸಿದ್ದ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಶ್ರೀಕಾಂತ ಏಖಳೀಕರ ಅವರು ಮಾತಾಡಿ ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನದಲ್ಲಿ ಪಠ್ಯ ಜೊತೆಗೆ ಪಠ್ಯೇತರ ಚಟುವಟಿಕೆಗಳು ಮುಖ್ಯವಾಗುತ್ತವೆ, ಇಂಥಹ ಶಿಬಿರಗಳು ವಿದ್ಯಾರ್ಥಿಗಳಲ್ಲಿ ಸ್ಪರ್ಧಾತ್ಮಕ ಮನೋಭಾವವನ್ನು ಬೆಳೆಸುತ್ತವೆ ಎಂದರು. ವೇದಿಕೆಯಲ್ಲಿ ಮಹಾವಿದ್ಯಾಲಯದ ಆಯ್.ಕ್ಯು.ಎ.ಸಿ ಕೊ-ಆರ್ಡಿನೇಟರ್ ಪೆÇ್ರ. ಗೋವಿಂದ ಪೂಜಾರ, ಮಹಾವಿದ್ಯಾಲಯದ ವಿಶ್ರಾಂತ ಪ್ರಾಚಾರ್ಯ ಪೆÇ್ರ. ಯು. ಜಿ. ಸರದೇಶಪಾಂಡೆ, ಜೀವಣಿಗಿ ಗ್ರಾಮ ಪಂಚಾಯಿತಿಯ ಅಭಿಯಂತರ ಮುರಿಗೇಂದ್ರ, ಭಜರಂಗ ಮೋರೆ… ಉಪಸ್ಥಿತರಿದ್ದರು.

ಐವತ್ತು ಶಿಬಿರಾರ್ಥಿಗಳು ಶಿಬಿರದಲ್ಲಿ ಭಾಗವಹಿಸಿದ್ದರು. ನೂತನ ಪದವಿ ಮಹಾವಿದ್ಯಾಲಯದ ವಿಶ್ರಾಂತ ಪ್ರಾಧ್ಯಾಪಕ ಡಾ. ಗುರುರಾಜ ಕರ್ಜಗಿ, ಜಿತೇಂದ್ರ ಕೋಥಳಿಕರ್, ನಾಗರಾಜ್ ಕುಲಕರ್ಣಿ, ಶರಣಪ್ಪ, ಜೀವಣಿಗಿ ಗ್ರಾಮ ಪಂಚಾಯಿತಿಯ ಕಾರ್ಯದರ್ಶಿಗಳು, ಅಭಿಯಂತರರು, ಸದಸ್ಯರು ಹಾಗೂ ಗ್ರಾಮದ ಸದಸ್ಯರು ಉಪಸ್ಥಿತರಿದ್ದರು. ಸೌಜನ್ಯ ಹಾಗೂ ರಕ್ಷಿತಾ ಸ್ವಾಗತಗೀತೆ ಹಾಡಿದರು. ಸ್ವಾತಿ ಮತ್ತು ಸಂಗಡಿಗರು ಎನ್.ಎಸ್.ಎಸ್ ಗೀತೆಯನ್ನು ಪ್ರಸ್ತುತ ಪಡಿಸಿದರು. ಡಾ. ದಯಾನಂದ ಶಾಸ್ತ್ರೀಯವರು ಸ್ವಾಗತಿಸಿದರು.
ಡಾ. ಮಲ್ಲಿನಾಥ ಎಸ್. ತಳವಾರ ನಿರೂಪಿಸಿದರು. ಅಭಿಷೇಕ ವಂದಿಸಿದರು.