ಜೀವಜಲ ರಕ್ಷಣೆ ನಮ್ಮೆಲ್ಲರ ಹೊಣೆ

ಔರಾದ :ಮಾ.26 : ಪಟ್ಟಣದ ಸರಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ನೆಹೆರು ಯುವ ಕೇಂದ್ರ ಬೀದರ ಹಾಗೂ ಸುಭಾಸ್ ಚಂದ್ರ ಭೋಸ್ ಯುವಕ ಸಂಘ ಔರಾದ ವತಿಯಿಂದ ವಿಶ್ವ ಜಲದಿನದ ನಿಮಿತ್ಯ “CATCH THE RAIN” ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದ ಉದ್ಘಾಟಕರಾಗಿ ಆಗಮಿಸಿದ ಉಪತಹಸೀಲ್ದಾರ ಮಲಶೆಟ್ಟಿ ಚಿದ್ರೆರವರು ಮಾತನಾಡುತ್ತ ಒಂದು ಜೀವಿ ಭೂಮಿ ಮೇಲೆ ಜೀವಂತವಾಗಿರಬೇಕಾದರೆ ನೀರು ಅತ್ಯವಶಕವಾಗಿದೆ ಇಷ್ಟು ಅಮೂಲ್ಯವಾದ ನೀರನ್ನು ನಾವು ಹೇಗೆ ಸಂರಕ್ಷಣೆ ಮಾಡಬೇಕೆಂದರೆ ಎಲ್ಲರೂ ಕೂಡ ತಮ್ಮ ತಮ್ಮ ಮೆನೆಗಳಲ್ಲಿ ಮಳೆ ಕೊಯಿಲು ನಿರ್ಮಾಣ ಮಾಡಬೇಕು ಎಂದರು.
ತಾಲೂಕಾ ಪಂಚಾಯತ್ ಸಹಾಯಕ ನಿರ್ದೇಶಕ ಶಿವಕುಮಾರ್ ಘಾಟೆರವರು ಮಾತನಾಡುತ್ತ ನಾವು ನೀರನ್ನು ಮಿತವಾಗಿ ಬಳಸಬೇಕು ನಾವು ನೋಡ್ತಿವಿ ಸಾರ್ವಜನಿಕ ಟ್ಯಾಂಕ್ ಅಥವಾ ಬೋರವೆಲಗಳಲ್ಲಿ ನೀರು ಹರಿಯುತಿರುತ್ತವೆ ಆದರೆ ನಾವು ಅದನ್ನು ಬಂದ ಮಾಡದೇ ನಿಸಕಾಳಜಿ ಮಾಡುತ್ತೇವೆ ಆದ್ದರಿಂದಲೆ ನಮಗೆ ಬೇಸಿಗೆ ಸಮಯದಲ್ಲಿ ಕುಡಿಯಕ್ಕೂ ಕೂಡ ನೀರು ಸಿಗದ ಪರಿಸ್ಥಿತಿ ನಿರ್ಮಾಣವಾಗುತ್ತಿದೆ ನಾವೆಲ್ಲರೂ ನೀರನ್ನು ಸಮರ್ಪಕವಾಗಿ ಬಳಸಬೇಕು ಎಂದು ಹೇಳಿದರು.
ವಿಶೇಷ ಉಪನ್ಯಾಸ ನೀಡಿದ ಅರುಣ ಮುಕಾಸಿರವರು ಮಾತನಾಡುತ್ತ ನಾವೆಲ್ಲರೂ ಹಳೆ ಕೊಳವೆ, ಬಾವಿ, ಗಳನ್ನು ಪುನ್ಸಚೇತನ್ ಮಾಡಬೇಕು, ಇದರಿಂದ ನಾವು ನೀರನ್ನು ಸಂರಕ್ಷಣೆ ಮಾಡಬಹುದು ಎಂದು ಅಭಿಪ್ರಾಯ ಪಟ್ಟರು ನೆಹೆರು ಯುವ ಕೇಂದ್ರದ ಜಿಲ್ಲಾ ಯುವ ಅಧಿಕಾರಿಗಳಾದ ಮಯೂರಕುಮಾರ ಗೋರಮೇ ರವರು ಪ್ರಾಸ್ತವಿಕವಾಗಿ ಮಾತನಾಡಿದರು, ಇದೆ ಸಂದರ್ಭದಲ್ಲಿ ಚಿತ್ರಕಲೆ ಸ್ಪರ್ಧೆಯಲ್ಲಿ ವಿಜೇತರಾದ ಅಶ್ವಿನಿ, ಜ್ಯೋತಿ, ಸಂಗಮೇಶ ವಿದ್ಯರ್ಥಿಗಳಿಗೆ ಗಣ್ಯರು ಸನ್ಮಾನಿಸಿ ಪ್ರಶಸ್ತಿ ಪತ್ರ ಹಾಗೂ ಬಹುಮಾನ ವಿತರಿಸಿದರು,
ಈ ಸಂದರ್ಭದಲ್ಲಿ ಪಟ್ಟಣ ಪಂಚಾಯತ ಮುಖ್ಯ ಅಧಿಕಾರಿ ರವಿ ಸುಕುಮಾರ, ಪ್ರಾಂಶುಪಾಲ ಬಸವರಾಜ ಚಿಕಲೇ, ಉಮೇಶ್ ಜಾಧವ, ವಳ್ಳುರೆ, ಶಿವಕುಮಾರ ಸೂರ್ಯವಂಶಿ ಸುದೀಪ ದರ್ಬಾರೆ, ಕಿರಣ, ಆಕಾಶ ಬೋರೆ, ಉತ್ತಮ ಬೋರೆ, ಉಪಸ್ಥಿತರಿದ್ದರು ಕಾರ್ಯಕ್ರಮವನ್ನು ರತ್ನದೀಪ ಕಸ್ತೂರೆ ಸ್ವಾಗತಿಸಿದರು ದಯಾನಂದ ಏನಕುಮೂರೇ ನಿರೂಪಿಸಿದರು.