ಜೀವಕ್ಕಿಂತ ಮದ್ಯ ಮುಖ್ಯವಾಯಿತೇ….

ದಾವಣಗೆರೆ. ಏ.೨೭; ರಾಜ್ಯದಲ್ಲಿ ಕೋವಿಡ್ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ ಎಂದು ರಾಜ್ಯದ ಮುಖ್ಯಮಂತ್ರಿಗಳು 14 ದಿನಗಳ ಲಾಕ್ಡೌನ್ ಘೋಷಣೆ ಮಾಡಿದರು.ಕೆಲವೊಂದು ಅಗತ್ಯವಸ್ತುಗಳನ್ನು ಹೊರತುಪಡಿಸಿ ಎಲ್ಲಾ ಲಾಕ್ಡೌನ್ ಎಂದ ಅವರು, ಅಗತ್ಯ ವಸ್ತುಗಳಿಗಾಗಿ ಬೆಳಗ್ಗೆ ಆರರಿಂದ ಹತ್ತು ಗಂಟೆಯ ತನಕ ವಿನಾಯಿತಿ ನೀಡಿದರು.ಹಣ್ಣು, ತರಕಾರಿ, ದಿನಸಿ ವಸ್ತುಗಳನ್ನು ಖರೀದಿಸಲು ನಾಗರೀಕರು ಅಂಗಡಿಗಳ ಮುಂದೆ ಮುಗಿ ಬೀಳಬಹುದು ಎಂಬ ನಿರೀಕ್ಷೆಯಲ್ಲಿದ್ದ ಎಲ್ಲರಿಗೂ ಆಶ್ಚರ್ಯವಾದ ವಿಷಯವೇ ಮದ್ಯದ ಅಂಗಡಿಗಳ ಮುಂದೆ ಇದ್ದ ಸರತಿ ಸಾಲು ಹಾಗೂ ಬಾಕ್ಸ್ ಗಂಟಲೆ ಮದ್ಯವನ್ನು ಖರೀದಿಸುತ್ತಿದದ್ದು ಇದನ್ನು ನೋಡಿದಾಗ ಅರ್ಥವಾದ ವಿಷಯವೇನೆಂದರೆ ನಮ್ಮ ಜನರು ಮದ್ಯವನ್ನು ಸಹ ಮೂಲಭೂತ ವಸ್ತು ಎಂದು ಪರಿಗಣಿಸಿದ್ದಾರೆ ಎಂಬುದು ವಿಷಾಧಕರ ಎಂದು ಕೆಪಿಸಿಸಿ ಸಾಮಾಜಿಕ ಜಾಲತಾಣದರಾಜ್ಯ ಕಾರ್ಯದರ್ಶಿ ಕೆ.ಎಲ್. ಹರೀಶ್ ಬಸಾಪುರ ಹೇಳಿದರು.
ಸರ್ಕಾರ  ಹಣ್ಣು-ತರಕಾರಿ, ದವಸದಾನ್ಯ, ಔಷಧಿ, ಆಸ್ಪತ್ರೆ ರೀತಿಯಲ್ಲಿಯೇ ಮದ್ಯದಂಗಡಿಗಳಿಗೆ ಅನುಮತಿ ನೀಡಿರುವುದು ನೋಡಿದರೆ ನಾಗರೀಕ ಸಮಾಜ ತಲೆ ತಗ್ಗಿಸಬೇಕೋ ಅಥವಾ ಸರ್ಕಾರ ತಲೆ ತಗ್ಗಿಸಬೇಕು ಎಂಬುದೇ ಅರ್ಥವಾಗದಂಥ ಆಗಿದೆ.
ಇದರಿಂದ ಅರ್ಥವಾಗುವುದೇನೆಂದರೆ ಜನರಿಗೆ ಜೀವಕ್ಕಿಂತ ಮದ್ಯ ಮುಖ್ಯ.. ಸರ್ಕಾರಕ್ಕೆ ಜನರ ಪ್ರಾಣಕ್ಕಿಂತ ಆದಾಯ ಮುಖ್ಯವಾಗಿರುವುದು ಎಂದು ಬೇಸರ ವ್ಯಕ್ತಪಡಿಸಿದರು.