ಜೀರಾ ರೈಸ್ ಮಾಡುವ ವಿಧಾನ

ಒಂದು ಕಪ್ ಬಾಸ್ಮತಿ ಅಕ್ಕಿ
ಒಂದು ಟೀ ಸ್ಪೂನ್ ಎಣ್ಣೆ
ಅರ್ಧ ಟೀ ಸ್ಪೂನ್ ಉಪ್ಪು
ಒಂದು ಟೀ ಸ್ಪೂನ್ ತುಪ್ಪ
ಒಂದು ಟೀ ಸ್ಪೂನ್ ಜೀರಿಗೆ
ಸಣ್ಣಗೆ ಕತ್ತರಿಸಿದ ಕೊತ್ತಂಬರಿ ಸೊಪ್ಪು
ಬಾಸ್ಮತಿ ಅಕ್ಕಿಯನ್ನು ಇಪ್ಪತ್ತು ನಿಮಿಷಗಳ ಕಾಲ ನೆನೆಸಿಡಿ.ಈಗ ದೊಡ್ಡ ಪಾತ್ರೆಯಲ್ಲಿ ನಾಲ್ಕು ಕಪ್ ನೀರನ್ನು ಕುದಿಸಿ.
ನೀರು ಕುದಿಯಲು ಬಂದ ನಂತರ ನೆನೆಸಿದ ಅಕ್ಕಿಯೊಂದಿಗೆ ಒಂದು ಟೀ ಸ್ಪೂನ್ ಎಣ್ಣೆ ಮತ್ತು ಅರ್ಧ ಟೀ ಸ್ಪೂನ್ ಉಪ್ಪು ಸೇರಿಸಿ.
ಚೆನ್ನಾಗಿ ಮಿಶ್ರಣ ಮಾಡಿ ಅಕ್ಕಿ ಸಂಪೂರ್ಣವಾಗಿ ಬೇಯುವವರೆಗೆ ಕುದಿಸಿ. ಬಾಸ್ಮತಿ ಅಕ್ಕಿಯಿಂದ ನೀರನ್ನು ಬಸಿಯಿರಿ. ಅನ್ನ ಆರಲು ಬಿಡಿ.
ಈಗ ದೊಡ್ಡ ಕಡಾಯಿಯಲ್ಲಿ, ಒಂದು ಟೀ ಸ್ಪೂನ್ ತುಪ್ಪ ಬಿಸಿ ಮಾಡಿ, ಒಂದು ಟೀ ಸ್ಪೂನ್ ಜೀರಿಗೆ ಸೇರಿಸಿ.
ಈಗ ಬೇಯಿಸಿದ ಬಾಸ್ಮತಿ ಅಕ್ಕಿಯನ್ನು ಸೇರಿಸಿ. ನಂತರ ಕಾಲು ಟೀಸ್ಪೂನ್ ಉಪ್ಪು ಸೇರಿಸಿ ಮತ್ತು ನಿಧಾನವಾಗಿ ಮಿಶ್ರಣ ಮಾಡಿ.
ಅಂತಿಮವಾಗಿ ಕೊತ್ತಂಬರಿ ಸೊಪ್ಪನ್ನು ಸೇರಿಸಿ ಮತ್ತು ದಾಲ್ ನೊಂದಿಗೆ ಜೀರಾ ರೈಸ್ ಅನ್ನು ಆನಂದಿಸಿ.