ಜೀತೋದಿಂದ ಅಹಿಂಸೆಗಾಗಿ ಮ್ಯಾರಥಾನ್


(ಸಂಜೆವಾಣಿ ವಾರ್ತೆ)
ಬಳ್ಳಾರಿ, ಏ.03: ನಗರದಲ್ಲಿ ನಿನ್ನೆ ಅಹಿಂಸೆಗಾಗಿ ಜಿತೋದಿಂದ   3, 5 ಮತ್ತು 10 ಕಿಲೋ ಮೀಟರ್ ಮ್ಯಾರಥಾನ್ ನಡೆಯಿತು.
ನಗರದ ಹೊರ ವಲಯದ ಮೋಕಾ ರಸ್ತೆಯಲ್ಲಿ  ಇದನ್ನು ಆಯೋಜಿಸಿತ್ತು. ಮೊದಲಿಗೆ 10 ಕಿ.ಮೀ  ಓಟವನ್ನು  ಹಮ್ಮಿಕೊಂಡಿತ್ತು. ಎಸ್‌.ಕೆ. ಮೋದಿ ಫೌಂಡೇಶನ್‌ನ  ಮಂಜು ಮೋದಿ ಅವರು ಇದಕ್ಕೆ ಚಾಲನೆ ನೀಡಿದರು.
ಜಿತೋ ಮಹಿಳಾ ವಿಭಾಗದ ಅಧ್ಯಕ್ಷೆ ಶೆಫಾಲಿ ಜೈನ್  ಸ್ವಾಗತಿಸಿದರು.
ಜೀತೋ ಬಳ್ಳಾರಿ ಚಾಪ್ಟರ್‌ನ ಅಧ್ಯಕ್ಷ ರಾಜೇಶ್ ಬಗ್ರೇಚಾ ಮಾತನಾಡಿ,  ಜೀತೋ ಅಹಿಂಸಾ ಓಟದ ಭಾಗವಾಗಿ ಹೊಸ ಗಿನ್ನೆಸ್ ದಾಖಲೆಗಳನ್ನು ಸೃಷ್ಟಿಸಿದ್ದಾಗಿ ಹೇಳಿದರು.
ಮ್ಯಾರಥಾನ್ ಪೂರ್ಣಗೊಳಿಸಿದ ಎಲ್ಲರಿಗೂ  ಪದಕಗಳನ್ನು ನೀಡಲಾಯಿತು. ಎಲ್ಲಾ ವಿವಿಧ ವಿಭಾಗಗಳಿಂದ ಒಟ್ಟು 36 ವಿಜೇತರನ್ನು ಘೋಷಿಸಲಾಯಿತು
ಭಾಗವಹಿಸಿದವರಿಗೆ ಟೀ ಶರ್ಟ್, ಬಿಐಬಿ, ಕ್ಯಾಪ್ ಮತ್ತು ಬ್ಯಾಂಡ್ ಉಪಹಾರ ನೀಡಲಾಯಿತು.