ಜೀಜಾಮಾತಾ ಸ್ವಾಭಿಮಾನದ ಪ್ರತೀಕ: ತುಳಸಿಮಾಲ

ಸಂಜೆವಾಣಿ ವಾರ್ತೆ,
ವಿಜಯಪುರ,ಮಾ.16:ಭಾರತದ ಇತಿಹಾಸದಲ್ಲಿ ಅಮರರಾಗಿ ಉಳಿದ ಜೀಜಾಮಾತಾ ಅವರು ಸ್ವಾಭಿಮಾನದ ಪ್ರತೀಕ ಎಂದು ಮಹಿಳಾ ವಿವಿಯ ಕುಲಪತಿ ಪ್ರೊ. ಬಿ.ಕೆ. ತುಳಸಿಮಾಲ ಹೇಳಿದರು.
ನಗರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯ ಹಾಗೂ ಕರ್ನಾಟಕ ಮರಾಠ ಸಮುದಾಯಗಳ ಅಭಿವೃದ್ದಿ ನಿಗಮ ಬೆಂಗಳೂರು ಇವರ ಸಹಯೋಗದಲ್ಲಿ ಆಯೋಜಿಸಿದ್ದ ಜೀಜಾವುಮಾಸಾಹೇಬ ಅವರ ಜೀವನ ಮತ್ತು ಆದರ್ಶಗಳ ಕುರಿತು ಒಂದು ದಿನದ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತಾನಾಡಿದರು.
ಭಾರತದ ಚರಿತ್ರೆಯಲ್ಲಿ ಆಗಿ ಹೋದ ಅನೇಕ ವೀರ ಮಹಿಳೆಯರಲ್ಲಿ ಮರಾಠ ಸಂಸ್ಕøತಿಯ ಜೀಜಾಮಾತಾ ಸ್ವಾಭಿಮಾನದ ಪ್ರತೀಕÀರಾಗಿದ್ದಾರೆ. ಇಂದಿನ ತಾಯಿಯಂದಿರು ಜೀಜಾಮಾತಾರ ವ್ಯಕ್ತಿತ್ವದಿಂದ ಪ್ರೇರಣೆಗೊಳ್ಳಬೇಕು. ಚರಿತ್ರೆಯು ನಮಗೆ ಅನೇಕ ಪಾಠಗಳನ್ನು ಕಲಿಸುತ್ತದೆ. ಆ ಪಾಠಗಳು ನಮ್ಮ ಸಮಾಜದ ವ್ಯಕ್ತಿತ್ವವನ್ನು ಸುಂದರಗೊಳಿಸುತ್ತವೆ. ಇಂತಹ ವೀರ ಮಹಿಳೆಯರ ಕುರಿತು ಅಧ್ಯಯನಗಳು, ಕಾರ್ಯಗಾರಗಳು, ಚಿಂತನಾಗೊಷ್ಠಿಗಳು ನಡೆಯಬೇಕೆಂದು ಹೇಳಿದರು.
ಇದೇ ಸಂದರ್ಭದಲ್ಲಿ ಮರಾಠ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಡಾ. ಪ್ರಕಾಶ ಪಾಗೋಜಿ ಮಾತನಾಡಿ, ಅಭಿವೃದ್ಧಿ ನಿಗಮವು ಮರಾಠ ಸಮುದಾಯದ ಪ್ರಗತಿಗೆ ಅನೇಕ ಯೋಜನೆಗಳನ್ನು ಹಾಕಿಕೊಂಡಿದೆ. ಅದರಲ್ಲಿ ವಿಚಾರ ಸಂಕಿರಣವು ಒಂದು ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಮಹಿಳಾ ವಿವಿಯ ಕುಲಸಚಿವ ಶಂಕರಗೌಡ ಸೋಮನಾಳ ಮಾತನಾಡಿ, ಮಹಿಳಾ ಸಬಲೀಕರಣದ ಆರಂಭವು 17 ನೇ ಶತಮಾನದಲ್ಲಿ ಪ್ರಾರಂಭವಾಗಿದ್ದು, ಇತಿಹಾಸದಲ್ಲಿರುವ ಅನೇಕ ವೀರ ಮಹಿಳೆಯರು ನಮ್ಮ ಬದುಕಿಗೆ ಪ್ರೇರಣೆಯಾಗಿದ್ದಾರೆ. ಇಂದಿನ ಸಮಾಜವು ಗತಕಾಲದ ಇತಿಹಾಸದ ಆಧಾರದ ಮೇಲೆ ಹೊಸ ಜೀವನವನ್ನು ರೂಪಿಸಿಕೊಳ್ಳಬೇಕೆಂದು ಎಂದರು.
ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ತುಳಸಿರಾಮ ಸೂರ್ಯವಂಶಿ, ಭೀಮಾಶಂಕರ ಶಿವಳಕರ ಮರಾಠಾ ಸಂಸ್ಕøತಿ ಕುರಿತು ವಿವರಿಸಿದರು.
ರಾಹುಲ್ ಜಾಧವ, ವಿಜಯಕುಮಾರ ಚವ್ಹಾಣ, ಸಾಹಿತಿ ಡಾ. ವಿಠ್ಠಲರಾವ ಗಾಯಕವಾಡ, ಡಾ. ಪ್ರಕಾಶ ಖಾಡೆ, ಪ್ರೊ. ಮಹೇಶ ಚಿಂತಾಮಣಿ, ಅಶೋಕ ಆಸಂಗಿ, ಡಾ. ಎಂ. ಪಿ. ಬಳಿಗಾರ, ರಮೇಶ ಚವ್ಹಾಣ ಮತ್ತಿತರು ಉಪಸ್ಥಿತರಿದ್ದರು.