ಜಿ-20 ಶೃಂಗ ರಾಷ್ಟ್ರಗಳ ಸ್ಮರಣಿಯ ವನ ನಿರ್ಮಾಣದ ಪ್ರಯತ್ನಕ್ಕೆ ಎಳ್ಳು ನೀರುಒಂದೇ ತಿಂಗಳಲ್ಲಿ ಜಿ-20 ಪ್ರತಿನಿಧಿಗಳು ನೆಟ್ಟ ಸಸಿಗಳು ಕಾಣೆಯಾದವು


ಸಂಜೆವಾಣಿ ಪ್ರತಿನಿಧಿಯಿಂದ
ಹೊಸಪೇಟೆ ಆ17: ವಿಶ್ವಪರಂಪರೆಯ ತಾಣ ಹಂಪಿಯಲ್ಲಿ ಕಳೆದ ತಿಂಗಳು ನಡೆದ ಜಿ-20 ರಾಷ್ಟ್ರಗಳ ಪ್ರತಿನಿಧಿಗಳ ಸಭೆಯ ನಂತರ ಸ್ಮರಣೆಗಾಗಿ ನೆಟ್ಟಿದ್ದ ನೂರಾರು ಗಿಡಗಳು ಒಂದೇ ತಿಂಗಳಲ್ಲಿ ಮಂಗ ಮಾಯವಾಗುವ ಮೂಲಕ ಸ್ಮರಣೀಕೆಯಾಗ ನಿರ್ಮಾಣ ಮಾಡಬಹುದಾಗಿದ್ದ ವನ ಮಾಯವಾಗಿದೆ.
ಹೌದು ಜಿ-20 ರಾಷ್ಟ್ರಗಳ ಶೃಂಗಸಭೆಯ ಅಧ್ಯಕ್ಷತೆ ಭಾರತಕ್ಕೆ ಲಭಿಸಿದ ಹಿನ್ನೆಲೆಯಲ್ಲಿ ದೇಶದ ವಿವಿಧಡೆ ರಾಷ್ಟ್ರಪ್ರತಿನಿಧಿಗಳ ನಾಯಕರ ಸಭೆ ದೇಶದ ವಿವಿಧಡೆಗಳಂತೆ ಐತಿಹಾಸಿಕ ತಾಣ ಹಂಪಿಯಲ್ಲಿಯೂ 6 ದಿನಗಳ ಕಾಲ ಹಮ್ಮಿಕೊಂಡು ಎಲ್ಲಾ ನಾಯಕರನ್ನು ಬರಮಾಡಿಕೊಂಡು ಸಭೆ ನಡೆಸಲಾಯಿತು ಸಭೆಗೆ ಕೋಟ್ಯಾಂತರ ಖರ್ಚುಮಾಡಿ ದೇಶದ ಸಂಸ್ಕೃತಿ ಮತ್ತು ಪರಂಪರೆಯನ್ನು ವಿಶ್ವಕ್ಕೆ ಪರಿಚಯಿಸಲು ಕಲ್ಚರಲ್ ವರ್ಕಿಂಗ್ ಗ್ರೂಪ್ ಸಭೆ ಹಾಗೂ ಶೆರ್ಪಾ ಸಭೆ ಏರ್ಪಡಿಸಿ ಹಂಪಿಯಲ್ಲಿ ರಾಜತಾಂತ್ರಿಕವಾಗಿ ಮಹತ್ವ ಪಡೆಯುವಂತೆ ಮಾಡಲಾಗಿತು.
ಅವಿಸ್ಮರಣೀಯ ಪ್ರಯತ್ನಕ್ಕೆ ಹಿನ್ನಡೆ:
ಹಂಪಿಯಲ್ಲಿ ಏರ್ಪಡಿಸಿದ್ದ ಜಿ-೨೦ ಶೃಂಗಸಭೆಯನ್ನು ಅವಿಸ್ಮರಣೀಯಗೊಳಿಸಲು ಭಾರತ ಸರ್ಕಾರ ವಿವಿಧ ಕಾರ್ಯಕ್ರಮಗಳನ್ನು  ಪೈಕಿ ಸಂಡೂರು ಕುಶಲಾ ಕಲಾ ಕೇಂದ್ರದ ೪೫೦ ಮಹಿಳೆಯರು ವಿವಿಧ ವಿನ್ಯಾಸದಲ್ಲಿ ತಯಾರಿಸಿರುವ ೧೩,೦೦ ಲಂಬಾಣಿ ವಸ್ತ್ರಗಳನ್ನು ಒಂದೇ ಸೂರಿನಡಿ ಪ್ರದರ್ಶಿಸಿ ಗಿನ್ನಿಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಗೆ ಸೇರ್ಪಡೆಗೊಳಿಸಲಾಯಿತು. ಜತೆಗೆ ಇಲ್ಲಿನ ರಾಣಿ ಸ್ನಾನ ಗೃಹ ಹಿಂಭಾಗದಲ್ಲಿ ಜಿ-೨೦ ಪ್ರತಿನಿಧಿಗಳಿಂದ ಸಸಿ ನೆಟ್ಟು, ಮುಂದಿನ ನೂರಾರು ವರ್ಷಗಳ ಕಾಲ ಶೃಂಗದ ಸವಿನೆನಪನ್ನು ಹಚ್ಚ ಹಸಿರಾಗಿರಿಸುವುದು ಇದರ ಮೂಲ ಉದ್ದೇಶವಾಗಿತ್ತು.
ನೂರಾರು ವರ್ಷಗಳು ಜೀವತಾವಧಿ ಹೊಂದಿರುವ ಗಿಡಗಳನ್ನು ವಿವಿಧ ರಾಷ್ಟ್ರಗಳ ಪ್ರತಿನಿಧಿಗಳಿಂದ ಜು. ೧೧ ರಂದು ನೆಡುವಿಕೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ವಿದೇಶಿ ಗಣ್ಯರು ಕೂಡ ಅತ್ಯಂತ ಖುಷಿಯಿಂದ ಸಸಿ ನೆಡವಿಕೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಮತ್ತೊಮ್ಮೆ ಹಂಪಿಗೆ ಭೇಟಿ ನಿಡಿದಾಗ ಇಲ್ಲಿಗೆ ಬರುವ ಇಚ್ಛೆ ವ್ಯಕ್ತಪಡಿಸಿದ್ದರು. ಆದರೆ, ಹಂಪಿಯಲ್ಲಿ ಜಿ-೨೦ ಮುಕ್ತಾಯವಾಗಿ ತಿಂಗಳು ಕಳೆಯುವ ಮುನ್ನೇ ಕ್ವೀನ್ಸ್ ಬಾತ್ ಹಿಂಭಾಗದಲ್ಲಿ ನೆಟ್ಟಿದ್ದ ಗಿಡಗಳು ಬಹುತೇಕ ಒಣಗಿ ಹೋಗಿವೆ.
ಆರ್ಕಲಾಜಿಕಲ್ ಸರ್ವೆ ಆಫ್ ಇಂಡಿಯಾ ವತಿಯಿಂದ  ಕ್ವೀನ್ಸ್ ಬಾತ್ ಹಿಂಭಾಗದಲ್ಲಿ ಸುಮಾರು ಒಂದು ಎಕರೆ ಪ್ರದೇಶದಲ್ಲಿ ನೆಡಲಾಗಿದ್ದ ೧೦೦ ಸಸಿಗಳಲ್ಲಿ ಸದ್ಯ ಅಲ್ಲೊಂದು ಇಲ್ಲೊಂದು ಗಿಡ ಜೀವಂತವಾಗಿವೆ. ಗಿಡಗಳಿಗೆ ರಕ್ಷಣೆಯಿಲ್ಲದಿದ್ದರಿಂದ ಜಾನುವಾರುಗಳ ಆಹಾರವಾಗಿ, ನೀರಿನ ಕೊರತೆಯಿಂದ ಒಣಗಿ ಹೋಗಿವೆ. ಅಧಿಕಾರಿಗಳು ಸಸಿ ನೆಡುವಿಕೆಗೆ ತೋರಿಸಿದಷ್ಟು ಆಸಕ್ತಿ ಅವುಗಳ ನಿರ್ವಹಣೆಗೆ ವಹಿಸಿಲ್ಲ. ಐತಿಹಾಸಕವಾಗಿದ್ದ ವನ ಒಂದೇ ತಿಂಗಳಲ್ಲಿ ಒಣಗಲು ಸಂಬಂಧಿಸಿದ ಅಧಿಕಾರಿಗಳ ನಿರ್ಲಕ್ಷವೇ ಕಾರಣ ಎಂಬುದು ಸಾರ್ವಜನಿಕರ ಗಂಭೀರ ಆರೋಪ.
ಜಿ-೨೦ ಸಭೆಯ ಚಟುವಟಿಕೆ ಮತ್ತು ನಿಣರ್ಯಗಳನ್ನು ಇಡೀ ವಿಶ್ವವೇ ಗಮನಸುವಂತಹ ಮಹತ್ವದ ಶೃಂಗ. ಅದರ ಅಂಗವಾಗಿ ಹಂಪಿಯಲ್ಲಿ ನೆಟ್ಟ ಸಸಿಗಳನ್ನು ಸಂರಕ್ಷಿಸುವುದು ಸಂಬಂಧಿಸಿದ ಇಲಾಖೆಯ ಜವಾಬ್ದಾರಿ. ಭವಿಷ್ಯದಲ್ಲಿ ಮತ್ತೊಮ್ಮೆ ವಿದೇಶಿ ಗಣ್ಯರು ಹಂಪಿಗೆ ಭೇಟಿ ನೀಡಿ, ತಾವು ನೆಟ್ಟ ಸಸಿಗಳು ಎಲ್ಲಿ ಎಂದು ಪ್ರಶ್ನಿಸಿದರೆ, ಏನೆಂದು ಉತ್ತರಿಸುತ್ತಾರೆ. ಇದು ನಮ್ಮ ದೇಶದ ಘನತೆಗೆ ಧಕ್ಕೆಯಾಗುತ್ತದೆ. ಅಧಿಕಾರಿಗಳ ಕಾರ್ಯವೈಖರಿಗೆ ಬೇಸರವಾಗುತ್ತಿದೆ.
ಆನಂದ್, ಪ್ರವಾಸಿಗ, ಸಿಂಧನೂರು
ನೂರಾರು ವರ್ಷಗಳ ಕಾಲ ಜೀವಿತಾವಧಿ ಇರುವ ಬೇವು, ಮಾವು, ಹುಣಸೆಮರ, ಗುಲ್ಮೋರ್ ಸೇರಿದಂತೆ ಸುಮಾರು ೧೦೦ ಗಿಡಗಳನ್ನು ಜಿ-೨೦ ಪ್ರತಿನಿಧಿಗಳಿಂದ ನೆಡಲಾಯಿತು. ಸುತ್ತಲೂ ಫೆನ್ಸಿಂಗ್ ಇಲ್ಲದಿದ್ದರಿಂದ ಜಾನುವಾರುಗಳು ಬಾಯಿ ಹಾಕಿದ್ದು,  ಅವುಗಳ ಸಂರಕ್ಷಣೆಗೆ ಉನ್ನತಾಧಿಕಾರಿಗಳೊಂದಿಗೆ ಚರ್ಚಿಸಿ, ಕ್ರಮವಹಿಸಲಾಗುವುದು.
 ಪ್ರದಿಪ್ತ್ ಲೈ, ತೋಟಗಾರಿಕೆ ಅಧಿಕಾರಿ, ಎಎಸ್‌ಐ.