ಜಿ-20 ಶೃಂಗಸಭೆಯ ಸಿದ್ಧತೆ: ಕೇಂದ್ರ ವಿದೇಶಾಂಗ ಇಲಾಖಾಧಿಕಾರಿಗಳ ಸಭೆ.


ಸಂಜೆವಾಣಿ ವಾರ್ತೆ
ಹೊಸಪೇಟೆ ಮೇ27: ಜಿ- 20 ಶೃಂಗ ಸಭೆ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ವಿದೇಶಾಂಗ ಇಲಾಖೆ ಮತ್ತು ಸಾಂಸ್ಕೃತಿ ಇಲಾಖೆಗಳ ಉನ್ನತಾಧಿಕಾರಿಗಳು ಶುಕ್ರವಾರ ಹಂಪಿಗೆ ಭೇಟಿ ನೀಡಿದ್ದು, ಜಿ-೨೦ ಪೂರ್ವ ಸಿದ್ಧತೆ ಕುರಿತು ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು.
ಕಮಲಾಪುರ ಸಮೀಪದ ಖಾಸಗಿ ಹೋಟೆಲ್ ನಲ್ಲಿ ಶುಕ್ರವಾರ ಮಧ್ಯಹ್ನ ಶೃಂಗಸಭೆ ಸಿದ್ಧತೆಗಳ ಕುರಿತು ಚರ್ಚೆ ನಡೆಸಿದರು. ಜಿ-2೦ ಶೃಂಗಸಭೆಯ ಜಂಟಿ ಕಾರ್ಯದರ್ಶಿ ಆಶೀಶ್ ಸಿನ್ಹಾ,  ಜಂಟಿ ಕಾರ್ಯದರ್ಶಿ(ಸಮ್ಮಿಟ್ಸ್) ರಮೇಶ್ ಬಾಬು, ಜಂಟಿ ಕಾರ್ಯದರ್ಶಿ(ಭದ್ರತೆ) ಭಾವನ ಸಕ್ಸೇನಾ, ಒಎಸ್ಡಿ ರವಿಕಿರಣ್ ಉಬಾಲೆ, ಯುಎಸ್ ಜಿ-೨೦ ಅಸೀಮ್ ಅನ್ವರ್, ಯುಎಸ್ ಬೋರ್ಡಿಂಗ್ ಡಾ.ನೀಪಾ ಚೌದರಿ, ಸಂಯೋಜಕರಾದ ಕೋಪಾಲ್ ವರ್ಮಾ ಸೈನಿ, ಆಕೃತಿ ಪಾಂಡೆ ಹಾಗೂ ಕೇಂದ್ರ ಸರ್ಕಾರದ ಸಂಸ್ಕೃತಿ ಸಚಿವಾಲಯದ ಅಧಿಕಾರಿಗಳು ಸ್ಥಳೀಯ  ಅಧಿಕಾರಿಗಳೊಂದಿಗೆ ಸಭೆ ನಡೆಸಿದರು.
ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿ ಟಿ.ವೆಂಕಟೇಶ, ಜಿ-2೦ ಶೃಂಗಸಭೆಗೆ ಹಂಪಿ ಆಯ್ಕೆಯಾಗಿದೆ. ಈ ಸಮ್ಮಿಟ್ ಭಾಗವಾಗಿ ವಿಜಯ ವಿಠ್ಠಲ ಟೆಂಪಲ್, ಪುರಂದರ ಮಂಟಪ ಮತ್ತು ಎದುರು ಬಸವಣ್ಣ ಪೈಕಿ ಒಂದು ಕಡೆ ಸಭೆ ಆಯೀಜಿಸಲು ಚರ್ಚಿಸಲಾಯಿತು. ಹಂಪಿ ಬಜಾರ್ ಮತ್ತಿತರೆ ಭಾಗದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು. ದೇಶದ ನಾನಾ ಲಡೆಯಿಂದ ಕಲಾವಿದರು ಭಾಗಮಿಸಲಿದ್ದು, 13 ರಿಂದ 15 ರ ವರೆಗೆ ಭಾರತದ ಸಾಂಸ್ಕೃತಿಕ ಕಲಾ ವೈಭವವನ್ನು ಪ್ರದರ್ಶಿಸಿದ್ದಾರೆ. ರೈಲು, ವಿಮಾನ ಹಾಗೂ ರಸ್ತೆ ಮಾರ್ಗವಾಗಿ ಆಗಮಿಸುವ ವಿದೇಶಿ ಅತಿಥಿಗಳ ಸತ್ಕಾರಕ್ಕೆ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಕುಡಿಯುವ ನೀರು, ರಸ್ತೆ, ಸ್ವಚ್ಛತೆಗೆ ಆದ್ಯತೆ ನೀಡಲಾಗುತ್ತಿದೆ ಎಂದು ತಿಳಿಸಿದರು.
ರಾಜ್ಯ ಪ್ರವಾಸೋದ್ಯಮ ಇಲಾಖೆ ನಿರ್ದೇಶಕ ಡಾ.ರಾಮಪ್ರಸಾದ ಮನೋಹರ ಮಾತನಾಡಿ, ಜಿ-20 ಶೃಂಗದ ಭಾಗವಾಗಿ ಕರ್ನಾಟಕದಲ್ಲಿ ಒಟ್ಟು 14 ಸಭೆಗಳು ನಡೆಯಲಿವೆ. ಆ ಪೈಕಿ ಬೆಂಗಳೂರಿನಲ್ಲಿ 11, ಮೈಸೂರಿನಲ್ಲಿ 1, ಹಂಪಿ 2 ಸಭೆಗಳು ನಡೆಯಲಿವೆ. ಹಂಪಿಯಲ್ಲಿ ಎರಡು ಹಂತದ ಸಭೆ ನಡೆಯಲಿದ್ದು, ಜು.9 ರಿಂದ 11 ರ ವರೆಗೆ ಸಾಂಸ್ಕ್ರತಿಕ ಸಮ್ಮಿಟ್ ಆಯೋಜಿಸಲಾಗುವುದು. ಈ ವೇಳೆ ದೇಶ ಕಲೆ, ಸಂಸ್ಕೃತ ವೈಭವ ಅನಾವರಣಗೊಳ್ಳಲಿದೆ. ಮೂರು ದಿನಗಳ ಕಾಲ ಬೆಳಗ್ಗೆ 9 ರಿಂದ ಮಧ್ಯಾಹ್ನ ಚರ್ಚಾಗೋಷ್ಠಿ, ಆನಂತರ ದೇಶದ ವಿವಿಧೆಡೆಯಿಂದ ಆಗಮಿಸಿದ ಕಲಾವಿದರು ಕಲಾ ಪ್ರದರ್ಶಿಸಲಿದ್ದಾರೆ. ನಮ್ಮ ಧಾರ್ಮಿಕ  ವೈಭವವನ್ನು ಸಾರುವ ಉದ್ದೇಶದಿಂದ ತುಂಗಾ ಆರತಿ ಆಯೋಜಿಸುವುದು. ಸಂಜೆ ಐತಿಹಾಸಿಕ ಸ್ಮಾರಕಗಳ ಸಮೀಪದಲ್ಲೇ ಅತಿಥಿಗಳಿಗೆ ರಾತ್ರಿ ಭೋಜನ ಉಣಬಡಿಸಲಾಗುವುದು. ಜುಲೈ 13 ರಿಂದ 15 ರ ವರೆಗೆ ಜಿ-20 ರಾಷ್ಟ್ರಗಳ ಅತ್ಯುನ್ನತ ಅಧಿಕಾರಿಗಳ ಶೃಂಗ ನಡೆಯಲಿದೆ. ಅತಿಥಿ ಸತ್ಕಾರದ ಮೂಲಕ ದೇಶದ ಪರಂಪರೆ, ಸಂಸ್ಕೃತ ಗತ ವೈಭವವನ್ನು ಎತ್ತಿಯುವುದು ಇದರ ಮಹತ್ವವಾಗಿದೆ ಎಂದರು.