
ನವದೆಹಲಿ,ಮಾ.೧೮- ಜಮ್ಮು ಕಾಶ್ಮೀರದಲ್ಲಿ ಜಿ- ೨೦ ಸಭೆ ಆಯೋಜಿಸದಂತೆ ಪಾಕಿಸ್ತಾನ ಆಕ್ಷೇಪ ವ್ಯಕ್ತಪಡಿಸಿ ಜಗತ್ತಿನ ಹಲವು ದೇಶಗಳಿಗೆ ಒತ್ತಡ ಹಾಕಿರುವುದಕ್ಕೆ ಭಾರತ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.ಕೇಂದ್ರ ಸರ್ಕಾರ ಜಿ. -೨೦ ಯಾವುದೇ ಸಭೆಯನ್ನು ಜಮ್ಮು ಕಾಶ್ಮೀರದಲ್ಲಿ ಆಯೋಜಿಸದಂತೆ ಚೀನಾ, ತುರ್ಕಿಮೆನಿಸ್ತಾನ್ ಮತ್ತು ಸೌದಿ ಅರೇಬಿಯಾದಂತಹ ಸದಸ್ಯ ರಾಷ್ಟ್ರಗಳ ಮೇಲೆ ಲಾಬಿ ಮಾಡಿದ ಪಾಕಿಸ್ತಾನದ ಆಕ್ಷೇಪಗಳಿಗೆ ಭಾರತ ತೀಕ್ಷ್ಣ ಪ್ರತಿಕ್ರೀಯೆ ನೀಡಿದೆ.
ಮೇ ತಿಂಗಳಲ್ಲಿ ಕೇಂದ್ರ ಸರ್ಕಾರ, ಜಮ್ಮು ಮತ್ತು ಕಾಶ್ಮೀರದಲ್ಲಿ ಜಿ -೨೦ ಸಂಸ್ಕೃತಿ ಸಚಿವಾಲಯಗಳ ಹಿರಿಯ ಅಧಿಕಾರಿ ಮಟ್ಟದ ಸಭೆ ಆಯೋಜಿಸಲಿದೆ.
ಜಿ-೨೦ ಮತ್ತು ಅತಿಥಿ ರಾಷ್ಟ್ರಗಳ ಹಿರಿಯ ಅಧಿಕಾರಿಗಳು ಸಾಂಸ್ಕೃತಿಕ ಆಸ್ತಿಯ ರಕ್ಷಣೆ ಮತ್ತು ಮರುಸ್ಥಾಪನೆ, ಸುಸ್ಥಿರ ಭವಿಷ್ಯದ ಜೀವಂತ ಪರಂಪರೆ ಬಳಸಿಕೊಳ್ಳುವುದು, ಸಾಂಸ್ಕೃತಿಕ ಉದ್ಯಮಗಳ ಉತ್ತೇಜನ ಮತ್ತು ಸಂಸ್ಕೃತಿಯ ರಕ್ಷಣೆಗಾಗಿ ಡಿಜಿಟಲ್ ತಂತ್ರಜ್ಞಾನದ ಸದ್ಬಳಕೆಯಂತಹ ಭಾರತೀಯ ಅಧ್ಯಕ್ಷೀಯ ಆದ್ಯತೆಗಳ ಕುರಿತು ಚರ್ಚಿಸಲಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಭಾರತ ತಿರುಗೇಟು:
ವಿಶ್ವಸಂಸ್ಥೆಯ ಭಾರತದ ಖಾಯಂ ಪ್ರತಿನಿಧಿ ರುಚಿರಾ ಕಾಂಬೋಜ್ , ಪಾಕಿಸ್ತಾನದ ಆಕ್ಷೇಪಕ್ಕೆ ತೀವ್ರ ಪ್ರತಿರೋದ ವ್ಯಕ್ತಪಡಿಸಿದ್ದು ದೇಶಾದ್ಯಂತ ೫೬ ಸಭೆಗಳನ್ನು ಆಯೋಜಿಸಲಾಗಿದೆ.”ಉತ್ತರದಲ್ಲಿ. ಕಾಶ್ಮೀರದಿಂದ ದಕ್ಷಿಣದ ಕನ್ಯಾಕುಮಾರಿಯವರೆಗೆ” ಜಿ ೨೦ ಸಭೆ ಆಯೋಜಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಭಾರತದ ಅಧ್ಯಕ್ಷತೆಯಲ್ಲಿ ಜಿ- ೨೦ ಸಭೆಗಳು ದೇಶದ ಎಲ್ಲಾ ೨೮ ರಾಜ್ಯಗಳು ಮತ್ತು ೮ ಕೇಂದ್ರಾಡಳಿತ ಪ್ರದೇಶಗಳಲ್ಲಿ ನಡೆಯಲಿದೆ. ಮುಂದಿನ ವಾರ ಅರುಣಾಚಲ ಪ್ರದೇಶದಲ್ಲಿಯೂ ಜಿ ೨೦ ಸಂಬಂಧಿತ ಸಭೆ ನಡೆಯಲಿದೆ. ಅಮೇರಿಕಾ, ಚೀನಾ ಮತ್ತು ಇಂಡೋನೇಷ್ಯಾ ಜಿ ೨೦ ಸಭೆಗಳನ್ನು ನಡೆಸಿದ್ದವು ಎಂದು ಅವರು ತಿಳಿಸಿದ್ದಾರೆ.
ಜಮ್ಮು ಮತ್ತು ಕಾಶ್ಮೀರದಲ್ಲಿ ಜಿ೨೦ ಸಭೆಯ ಯಾವುದೇ ಪ್ರಸ್ತಾಪವನ್ನು “ಅಂತರರಾಷ್ಟ್ರೀಯ ನ್ಯಾಯಸಮ್ಮತತೆ” ಪಡೆಯಲು ವಿನ್ಯಾಸಗೊಳಿಸಲಾಗಿದೆ ಎಂದು ಪಾಕಿಸ್ತಾನ ನೋಡುತ್ತದೆ ಮತ್ತು ಸದಸ್ಯ ರಾಷ್ಟ್ರಗಳು “ಕಾನೂನು ಮತ್ತು ನ್ಯಾಯದ ಕಡ್ಡಾಯಗಳ ಬಗ್ಗೆ ಸಂಪೂರ್ಣ ಅರಿವು ಹೊಂದಿರಬೇಕು ಎಂದು ಅವರು ತಿಳಿಸಿದ್ದಾರೆ.
ಜಮ್ಮು ಕಾಶ್ಮೀರದಲ್ಲಿ ಜಿ-೨೦ ಸಭೆ ಆಯೋಜಿಸದಂತೆ ಭಾರತದ ಮೇಲೆ ಒತ್ತಡ ಹಾಕುವಂತೆ ಪಾಕಿಸ್ತಾನ ತನ್ನ ಮಿತ್ರರಾಷ್ಟ್ರಗಳಾದ ಚೀನಾ, ಸೌದಿ ಅರೇಬಿಯಾ ಮತ್ತು ತುರ್ಕಿಯೆಯಿಂದ ಬೆಂಬಲ ಕೋರಿದೆ.ಇದರಲ್ಲಿ ಯಾವುದೇ ಹುರುಳಿಲ್ಲ ಎಂದು ಹೇಳಿದ್ದಾರೆ.