ಜಿ.೨೦ ಶೃಂಗಸಭೆ ಸಭೆಯಲ್ಲಿ ಕ್ವಿನ್ ಭಾಗಿ

ನವದೆಹಲಿ,ಮಾ.೧- ಜಿ-೨೦ ಶೃಂಗ ಸಭೆ ಹಿನ್ನೆಲೆಯಲ್ಲಿ ಪಾಲ್ಗೊಳ್ಳಲು ಚೀನಾ ವಿದೇಶಾಂಗ ಸಚಿವ ಕ್ವಿನ್ ಗ್ಯಾಂಗ್ ಅವರು ನಾಳೆ ಜಿ -೨೦ ಸಭೆಯಲ್ಲಿ ಭಾಗವಹಿಸುವುದಾಗಿ ಖಚಿತ ಪಡಿಸಿದ್ದಾರೆ.
ಇಂಡೋ-ಪೆಸಿಫಿಕ್ ವಲಯದ ಭಾರತದ ಪ್ರಮುಖ ಪಾಲುದಾರರಲ್ಲಿ ಒಂದಾದ ಜಪಾನ್ ಅನ್ನು ಕಿರಿಯ ಸಚಿವರು ಪ್ರತಿನಿಧಿಸುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.
ಸಾಂಪ್ರದಾಯಿಕ ಸ್ವಾಗತ:
ಈ ಮಧ್ಯೆ, ರಷ್ಯಾದ ವಿದೇಶಾಂಗ ಸಚಿವ ಸೆರ್ಗೆ ಲಾವ್ರೊವ್ ಅವರು ತಡರಾತ್ರಿ ದೆಹಲಿದೆ ಬಂದಿಳಿದ್ದಾರೆ. ವಿಮಾನ ನಿಲ್ದಾಣದಲ್ಲಿ ಸಚಿವರಿಗೆ ಆತ್ಮೀಯ ಸ್ವಾಗತ ಕೋರಲಾಯಿತು.
ಅಮೇರಿಕಾದ ವಿದೇಶಾಂಗ ಕಾರ್ಯದರ್ಶಿ ಆಂಟೋನಿ ಬ್ಲಿಂಕೆನ್ ಇಂದು ಆಗಮಿಸಲಿದ್ದಾರೆ.ಲಾವ್ರೊವ್ ಮತ್ತು ಬ್ಲಿಂಕೆನ್ ಇಬ್ಬರೂ ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರೊಂದಿಗೆ ದ್ವಿಪಕ್ಷೀಯ ಸಭೆಗಳನ್ನು ನಡೆಸುವ ನಿರೀಕ್ಷೆಯಿದೆ.
ಜಿ-೨೦ ಸಭೆಯ ಹಿನ್ನೆಲೆಯಲ್ಲಿ ೨೦ ವಿದೇಶಾಂಗ ಸಚಿವರ ಸಭೆಯಲ್ಲಿ ಭಾರತದ ವಾಸ್ತವ ಗಡಿ ನಿಯಂತ್ರಣ ರೇಖೆಯಲ್ಲಿನ ಬಿಗುವಿನ ವಾತಾವರಣ ಸೇರಿ ಹಲವು ವಿಷಯಗಳ ಕುರಿತು ಚೀನಾದ ವಿದೇಶಾಂಗ ಸಚಿವರ ಜೊತೆ ಮಾತುಕತೆ ನಡೆಸುವ ಸಾಧ್ಯತೆಗಳಿವೆ.
ಉಕ್ರೇನ್‌ನಲ್ಲಿ ರಷ್ಯಾ ಪಡೆಗಳನ್ನು ಹಿಂತೆಗೆದುಕೊಳ್ಳುವಂತೆ ಒತ್ತಾಯಿಸಲು ಕಳೆದ ವಾರ ವಿಶ್ವಸಂಸ್ಥೆಯಲ್ಲಿ ಜಾಗತಿಕ ಪ್ರಯತ್ನಗಳಿಗೆ ಕರೆ ನೀಡಿದ ಜಪಾನ್ ವಿದೇಶಾಂಗ ಸಚಿವ ಯೋಶಿಮಾಸಾ ಹಯಾಶಿ, ಮುಂಬರುವ ಸಂಸತ್ತಿನ ಅಧಿವೇಶನದೊಂದಿಗೆ “ವೇಳಾಪಟ್ಟಿ ಸಂಘರ್ಷ” ದಿಂದಾಗಿ ಭಾರತಕ್ಕೆ ಪ್ರಯಾಣ ಮಾಡುವ ಸಾಧ್ಯತೆಗಳಿವೆ.
ವಿದೇಶಾಂಗ ಸಚಿವ ಪಾರ್ಕ್ ಜಿನ್ “ದೇಶೀಯ ವ್ಯವಹಾರಗಳಲ್ಲಿ” ನಿರತರಾಗಿರುವ ಕಾರಣ ದಕ್ಷಿಣ ಕೊರಿಯಾದ ಮತ್ತೊಂದು ಪ್ರಮುಖ ಪೂರ್ವ ಏಷ್ಯಾದ ಪಾಲುದಾರ, ಕಿರಿಯ ಸಚಿವರು ಪ್ರತಿನಿಧಿಸುತ್ತಾರೆ ಎಂದು ರಾಜತಾಂತ್ರಿಕ ಮೂಲಗಳು ತಿಳಿಸಿವೆ.
ಕ್ವಿನ್ ಅವರ ಭೇಟಿಯನ್ನು ಘೋಷಿಸುವಾಗ, ಚೀನಾ ವಿದೇಶಾಂಗ ಸಚಿವಾಲಯ ಜಿ -೨೦ ವಿದೇಶಾಂಗ ಮಂತ್ರಿಗಳ ಸಭೆಯಲ್ಲಿ “ಬಹುಪಕ್ಷೀಯತೆ, ಆಹಾರ ಮತ್ತು ಇಂಧನ ಭದ್ರತೆ ಮತ್ತು ಅಭಿವೃದ್ಧಿ ಸಹಕಾರ” ದ ಮೇಲೆ ಸಕಾರಾತ್ಮಕ ಸಂಕೇತ ಕಳುಹಿಸುವುದನ್ನು ಖಚಿತಪಡಿಸಿಕೊಳ್ಳಲು ಎಲ್ಲಾ ಪಕ್ಷಗಳೊಂದಿಗೆ ಕೆಲಸ ಮಾಡಲು ಸಿದ್ಧವಾಗಿದೆ ಎಂದು ಹೇಳಿದ್ದಾರೆ.